ಹುಡುಗಿಯರ ಕಾಟಕ್ಕೆ ಬೆಚ್ಚಿಬಿದ್ದ 14 ವರ್ಷದ ವೈಭವ್ ಸೂರ್ಯವಂಶಿ... Vaibhav Suryavanshi

ಜೀವನದಲ್ಲಿ ದುಡ್ಡು ಮಾಡಬೇಕು... ಹೇಗಾದರೂ ಮಾಡಿ ಜೀವನದಲ್ಲಿ ಸೆಟಲ್ ಆಗಬೇಕು... ಕೋಟಿ, ಕೋಟಿ ರೂಪಾಯಿ ಆಸ್ತಿ ಮಾಡಬೇಕು... ಹಿಂಗೆ ಹುಡುಗರು ಕನಸು ಕಾಣುತ್ತಾರೆ, ತಾವು & ತಮ್ಮ ಅಪ್ಪ, ಅಮ್ಮ ಚನ್ನಾಗಿ ಇರಬೇಕು ಅಂತಾನೇ ಸಾಕಷ್ಟು ತ್ಯಾಗ ಮಾಡುತ್ತಾರೆ. ಅದರಲ್ಲೂ ಲಕ್ಷಾಂತರ ಜನ ಕ್ರಿಕೆಟ್ ಮೈದಾನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತಾ ಒದ್ದಾಡುತ್ತಾರೆ. ಆದರೂ ಕೆಲವರಿಗೆ ಅದೃಷ್ಟವೇ ಕೈಹಿಡಿದು ಅವಕಾಶ ಕೊಡುತ್ತದೆ. ಅದರಲ್ಲೂ 14 ವರ್ಷದ ವೈಭವ್ ಸೂರ್ಯವಂಶಿಗೆ ಈಗ ಅದೃಷ್ಟ ದೇವತೆ ಒಲಿದು ಬಂದಿದ್ದು...

ಕೇವಲ 365 ದಿನಗಳ ಹಿಂದೆ ಇದೇ ವೈಭವ್ ಸೂರ್ಯವಂಶಿ ತುತ್ತು ಅನ್ನಕ್ಕೂ ಕಷ್ಟಪಡುತ್ತಿದ್ದರು ಅನ್ನೋ ಅತಿ ರಂಜಿತ ಕಥೆಗಳು ಸೋಷಿಯಲ್ ಮೀಡಿಯಾ ಸುತ್ತಮುತ್ತ ಓಡುತ್ತಿವೆ. ಅದರಲ್ಲೂ ಐಪಿಎಲ್ ಇರದೇ ಇದ್ದಿದ್ದರೆ ವೈಭವ್ ಸೂರ್ಯವಂಶಿ ಬದುಕು ತುಂಬಾ ಕಷ್ಟದಲ್ಲೇ ಇರುತ್ತಿತ್ತು ಅನ್ನೋ ಸಮರ್ಥನೆ ಕೂಡ ಸಿಗುತ್ತದೆ. ಇದೆಲ್ಲವನ್ನೂ ಬಿಟ್ಟು ಕಷ್ಟದಿಂದಲೇ ಮೇಲೆ ಬಂದಿರುವ ವೈಭವ್ ಸೂರ್ಯವಂಶಿ ಈಗ ಕ್ರಿಕೆಟ್ ಲೋಕದ ಹೀರೋ ಆಗಿದ್ದಾರೆ. ಅದರಲ್ಲೂ ವೈಭವ್ ಸೂರ್ಯವಂಶಿಗೆ ಕೋಟಿ ಕೋಟಿ ರೂಪಾಯಿ ಹಣ ಕೂಡ ಹುಡುಕಿಕೊಂಡು ಬರುತ್ತಿದೆ. ಹೀಗಿದ್ದಾಗಲೇ, ಹುಡುಗಿಯರ ಕಾಟಕ್ಕೆ ಬೆಚ್ಚಿಬಿದ್ದ 14 ವರ್ಷದ ವೈಭವ್ ಸೂರ್ಯವಂಶಿ...

Vaibhav Suryavanshi Is Very Much Busy With His Fans For This Reason

ಹುಡುಗಿಯರ ಕಾಟಕ್ಕೆ ವೈಭವ್ ಸೂರ್ಯವಂಶಿ...

ಯೆಸ್, ವೈಭವ್ ಸೂರ್ಯವಂಶಿ ಐಪಿಎಲ್ ಆಡಲು ಶುರು ಮಾಡಿದ ನಂತರ ದೊಡ್ಡ ಲೆವೆಲ್‌ಗೆ ಬೆಳೆದರು. ಅದರಲ್ಲೂ ಯಾವಾಗ ಐಪಿಎಲ್ ಅಖಾಡದಲ್ಲಿ ವೈಭವ್ ಸೂರ್ಯವಂಶಿ 100 ರನ್ ಬಾರಿಸಿದರೋ, ಅಲ್ಲಿಂದ ಶುರುವಾಗಿತ್ತು ನೋಡಿ ಹೊಸ ಹವಾ. ಇದೀಗ ಅಂಡರ್-19 ತಂಡಕ್ಕೆ ಕೂಡ ಅಬ್ಬರದಿಂದಲೇ ಆಡುತ್ತಾ, ದೊಡ್ಡದಾಗಿ ಸೌಂಡ್ ಮಾಡುತ್ತಿದ್ದಾರೆ 14 ವರ್ಷದ ವೈಭವ್ ಸೂರ್ಯವಂಶಿ. ಹೀಗಿದ್ದಾಗಲೇ, ಹುಡುಗಿಯರ ಕಾಟಕ್ಕೆ ಬೆಚ್ಚಿಬಿದ್ದ 14 ವರ್ಷದ ವೈಭವ್ ಸೂರ್ಯವಂಶಿ...

ವೈಭವ್ ಸೂರ್ಯವಂಶಿ ಫುಲ್ ಫೇಮಸ್!

ಅಂದಹಾಗೆ ಬಿಹಾರ ಮೂಲದ ವೈಭವ್ ಸೂರ್ಯವಂಶಿಗೆ ಇದೀಗ ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನ ಮೂಲೆ ಮೂಲೆಯಲ್ಲೂ ಕೋಟಿ ಕೋಟಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅದೇ ರೀತಿ ಈಗ ಇಬ್ಬರು ಮಹಿಳಾ ಅಭಿಮಾನಿಗಳು ವೈಭವ್ ಸೂರ್ಯವಂಶಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಲು ಬರೋಬ್ಬರಿ 6 ಗಂಟೆಗಳ ಕಾಲ ಕಾರು ಚಲಾಯಿಸಿಕೊಂಡು ಬಂದಿದ್ದಾರಂತೆ. ಈ ವಿಷಯ ಈಗ ಸೋಷಿಯಲ್ ಮೀಡಿಯಾ ಪೂರ್ತಿ ಸಂಚಲನ ಸೃಷ್ಟಿಸಿದ್ದು, ಅಲ್ಲದೆ ವೈಭವ್ ಸೂರ್ಯವಂಶಿ ಅವರ ಮಹಿಳಾ ಅಭಿಮಾನಿಗಳು ಇದೇ ವೇಳೆ ರಾಜಸ್ಥಾನ ರಾಯಲ್ಸ್ ಟಿ-ಶರ್ಟ್ ಕೂಡ ಹಾಕಿಕೊಂಡಿರುವುದು ಇನ್ನಷ್ಟು ಗಮನವನ್ನ ಸೆಳೆದಿದೆ. ಈ ನಡುವೆ 14 ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿಗೆ ಹುಡುಗಿಯರ ಕಾಟ ಕೂಡ ಹೆಚ್ಚಾಗಿದೆ ಅನ್ನೋ ಚರ್ಚೆ ಶುರುವಾಗಿದೆ. ಸದ್ಯಕ್ಕೆ ವೈಭವ್ ಸೂರ್ಯವಂಶಿ ಇಂಗ್ಲೆಂಡ್‌ನಲ್ಲಿ ಭಾರತದ ಪರವಾಗಿ ಆಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+