14 ವರ್ಷದ ಸಣ್ಣ ಹುಡುಗ ವೈಭವ್ ಸೂರ್ಯವಂಶಿ ಎದುರು ಚೆನ್ನೈ ಬೌಲಿಂಗ್ ಪಡೆಗೆ ಚಚ್ಚಾಟ... Vaibhav Suryavanshi
14 ವರ್ಷದ ಹುಡುಗ 2025ರ ಐಪಿಎಲ್ ಅಖಾಡದಲ್ಲಿ ಹವಾ ಎಬ್ಬಿಸಿದ್ದಾನೆ... ಭಾರತೀಯರು ಮಾತ್ರವಲ್ಲ ಇಡೀ ಜಗತ್ತೇ 14 ವರ್ಷದ ಹುಡುಗ ವೈಭವ್ ಸೂರ್ಯವಂಶಿ ಬಗ್ಗೆ ಮಾತನಾಡ್ತಾ ಇದೆ. ಹೀಗೆ ವೈಭವ್ ಸೂರ್ಯವಂಶಿ ಹೆಸರು ಕೇಳಿದರೆ ಸಾಕು ಕ್ರಿಕೆಟ್ ಪ್ರೇಮಿಗಳ ಕುತೂಹಲ ಕೂಡ ಹೆಚ್ಚಾಗುತ್ತದೆ. ಹೀಗಿದ್ದಾಗಲೇ, 14 ವರ್ಷದ ಸಣ್ಣ ಹುಡುಗ ವೈಭವ್ ಸೂರ್ಯವಂಶಿ ಎದುರು ಚೆನ್ನೈ ಬೌಲಿಂಗ್ ಪಡೆಗೆ ಚಚ್ಚಾಟ...
ವೈಭವ್ ಸೂರ್ಯವಂಶಿ ಮನೆಯಲ್ಲಿ ಎಷ್ಟೆಲ್ಲಾ ಬಡತನ ಇದ್ದರೂ, ವೈಭವ್ ಸೂರ್ಯವಂಶಿ ಅಪ್ಪ ಮಾತ್ರ ಮಗನಿಗಾಗಿ ಹೊಲ & ಜಮೀನು ಮಾರಿ ಕ್ರಿಕೆಟ್ ಕೋಚಿಂಗ್ ಕೊಡಿಸಿದ್ದರು ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿತ್ತು. ಗುಜರಾತ್ ವಿರುದ್ಧ 100 ರನ್ ಬಾರಿಸಿದ ನಂತರ ಇದೇ ವೈಭವ್ ಸೂರ್ಯವಂಶಿ ಹವಾ ಕ್ರಿಕೆಟ್ ಲೋಕದಲ್ಲಿ ಜೋರಾಗಿತ್ತು. ಹೀಗಿದ್ದಾಗಲೇ ಧೋನಿ ಹುಡುಗರಿಗೆ ಕೂಡ ನಿನ್ನೆ ವೈಭವ್ ಸೂರ್ಯವಂಶಿ ನೋಡಿ ಚಳಿ ಜ್ವರ ಶುರುವಾಗಿತ್ತು...

ವೈಭವ್ ಸೂರ್ಯವಂಶಿ ಏಟಿಗೆ...
ಪ್ರಪಂಚದ ಹಲವು ಮಾಧ್ಯಮಗಳು ಕೂಡ ವೈಭವ್ ಸೂರ್ಯವಂಶಿ ಬಗ್ಗೆ ಚರ್ಚೆ ಮಾಡುತ್ತಿವೆ. ಕ್ರಿಕೆಟ್ ಆಟಗಾರನಾಗಿ ಬಂದಿರುವ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಈಗ ಇಂಟರ್ ನ್ಯಾಷನಲ್ ಸ್ಟಾರ್ ಆಗಿದ್ದಾನೆ. ಗುಜರಾತ್ ಟೀಂ ವಿರುದ್ಧ ಭರ್ಜರಿ 101 ರನ್ ಚಚ್ಚುವ ಮೂಲಕ ಅತೀ ಚಿಕ್ಕ ವಯಸ್ಸಿಗೆ ಐಪಿಎಲ್ ಶತಕ ಬಾರಿಸಿದ ವ್ಯಕ್ತಿ ಅಂತಾನು ಸಾಧನೆ ಮಾಡಿದ್ದ ವೈಭವ್ ಈಗ, ಚೆನ್ನೈ ಬೌಲಿಂಗ್ ಪಡೆಗೆ ಚಚ್ಚಾಟ ತೋರಿಸಿದ್ದಾನೆ...
ವೈಭವ್ ಸೂರ್ಯವಂಶಿ 6, 6, 6, 6...
ಬೆಂಗಳೂರು & ಚೆನ್ನೈ ತಂಡಗಳು ಬದ್ಧ ವೈರಿಗಳ ರೀತಿ, ಹೀಗಿದ್ದಾಗ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೀಗ ರಾಜಸ್ಥಾನ ವಿರುದ್ಧ ಹೀನಾಯ ಸೋಲು ಕಂಡಿದೆ. ಹೀಗೆ, ಚೆನ್ನೈ ಸೂಪರ್ ಕಿಂಗ್ಸ್ ಹೀನಾಯ ಸೋಲು ಕಾಣಲು ಕಾರಣ ಆಗಿದ್ದೇ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ. ಅಷ್ಟಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ತಂಡ ಪರದಾಡಿ & ಒದ್ದಾಡಿ 187 ರನ್ ಕಲೆಹಾಕಿತ್ತು. ಹೀಗಿದ್ದಾಗ 188 ರನ್ ಗುರಿ ಬೆನ್ನು ಹತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡ ಆರಂಭದಿಂದಲೇ ಚಚ್ಚಿ ಬಿಸಾಡಲು ಶುರು ಮಾಡಿತ್ತು. ಅದರಲ್ಲೂ ವೈಭವ್ ಸೂರ್ಯವಂಶಿ ಭರ್ಜರಿ ಆಟಕ್ಕೆ ಚೆನ್ನೈ ತಂಡದ ಬೌಲರ್‌ಗಳು ನಡುಗಿ ಹೋದರು... 6, 6, 6, 6, ಅಂತಾ ಅಬ್ಬರಿಸಿದ ಬಾಲಕ ವೈಭವ್ ಸೂರ್ಯವಂಶಿ...
ಚೆನ್ನೈ ತಂಡಕ್ಕೆ ಭರ್ಜರಿ ಪೆಟ್ಟು!
ಯಶಸ್ವಿ ಜೈಸ್ವಾಲ್ ಜೊತೆಗೆ ಆಟ ಆರಂಭಿಸಿದ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಚೆನ್ನೈ ತಂಡದ ಬೌಲರ್‌ಗಳನ್ನ ಚಚ್ಚಿ ಬಿಸಾಡಿದರು. ಕೇವಲ 33 ಬಾಲ್ ಆಡಿ 57 ರನ್‌ಗಳ ಮಳೆ ಹರಿಸಿದ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ, ಮತ್ತೊಮ್ಮೆ ರಾಜಸ್ಥಾನ ತಂಡಕ್ಕೆ ಬಲ ನೀಡಿದರು. ಮತ್ತೊಂದು ಕಡೆ ಯಶಸ್ವಿ ಜೈಸ್ವಾಲ್ ಕೇವಲ 19 ಬಾಲ್ ಆಡಿ 36 ರನ್ ಚಚ್ಚಿದರು. ಆ ನಂತರ ಬಂದ ಸಂಜು ಸ್ಯಾಮ್ಸನ್ 31 ಬಾಲ್ ಆಡಿ 41 ರನ್ ಬಾರಿಸಿದರು. ಈ ಮೂಲಕ ಚೆನ್ನೈ ತಂಡ ಮತ್ತೊಂದು ಐಪಿಎಲ್ ಮ್ಯಾಚ್ ಸೋತು, 2025ರ ಐಪಿಎಲ್ ಟೂರ್ನಿಯ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿ ಪಡುತ್ತಿದೆ!












Click it and Unblock the Notifications