Vaibhav Sooryavanshi: ಕಿವೀಸ್‌ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ವೈಭವ್ ಕಣಕ್ಕಿಳಿಯಲಿದ್ದಾರಾ? ಕೋಚ್ ಮಹತ್ವದ ಅಪ್ಡೇಟ್

Vaibhav Sooryavanshi: ಟೀಮ್ ಇಂಡಿಯಾ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ನೀಡದಿರುವುದು ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಕುರಿತು ಪ್ರತಿಕ್ರಿಯಿಸಿರುವ ಭಾರತ ತಂಡದ ಬ್ಯಾಟಿಂಗ್ ಕೋಚ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20ಐ ಪಂದ್ಯಕ್ಕೂ ಮುನ್ನ ಭಾರತ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಅವರು ಪ್ಲೇಯಿಂಗ್ 11ನಲ್ಲಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಸೇರ್ಪಡೆ ಕುರಿತು ಸಸ್ಪೆನ್ಸ್ ಕಾಯ್ದುಕೊಂಡಿದ್ದಾರೆ. ಗಾಯದ ಕಾರಣದಿಂದ ಪ್ರಮುಖ ವಿಕೆಟ್‌ ಕೀಪರ್ ಇಶಾನ್ ಕಿಶನ್ ಹೊರಬಿದ್ದಿದ್ದರೂ, ಸಾಮಾಜಿಕ ಜಾಲತಾಣಗಳ ಒತ್ತಡಕ್ಕೆ ಮಣಿದು ತಂಡದ ಕಾಂಬಿನೇಷನ್ ನಿರ್ಧರಿಸಲು ಸಾಧ್ಯವಿಲ್ಲ ಎಂದು ಅವರು ನೇರವಾಗಿ ಸ್ಪಷ್ಟಪಡಿಸಿದ್ದಾರೆ.

Vaibhav Sooryavanshi s India Debut Still Uncertain as Coach Shuts Down Social Media Pressure Viral

'ಸೋಷಿಯಲ್ ಮೀಡಿಯಾ ಒತ್ತಡಕ್ಕೆ ಸಿಲುಕುವುದಿಲ್ಲ'

ಸುದ್ದಿಗೋಷ್ಠಿಯಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿತಾಂಶು ಕೋಟಕ್ ಅವರು, ಮೂವರು ಆರಂಭಿಕ ಬ್ಯಾಟರ್‌ಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ನಡೆಯುತ್ತಿರುವುದನ್ನು ನಾನು ನೋಡಿದ್ದೇನೆ. ಆದರೆ ಅಭಿಮಾನಿಗಳು ಹಾಗೂ ಸೋಶಿಯಲ್ ಮೀಡಿಯಾ ಬಳಕೆದಾರರು ಒಂದನ್ನು ಅರ್ಥಮಾಡಿಕೊಳ್ಳಬೇಕು. ಮ್ಯಾನೇಜ್‌ಮೆಂಟ್ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ತಂಡದ ಹಿತಾಸಕ್ತಿಯಿಂದ ಇರುತ್ತದೆ. ಪ್ರತಿಯೊಬ್ಬರೂ ತಮ್ಮದೇ ಆದ ಪ್ಲೇಯಿಂಗ್ 11 ರಚಿಸಲು ಬಯಸುತ್ತಾರೆ. ಆದರೆ ನಿಜವಾದ ಕ್ರಿಕೆಟ್ ಆ ರೀತಿ ಕೆಲಸ ಮಾಡುವುದಿಲ್ಲ,' ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಅಭಿಷೇಕ್, ಸಂಜುಗೆ ಮೆಚ್ಚುಗೆ

ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಕೋಚ್ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. 'ಸಂಜು ಒಬ್ಬ ಅತ್ಯದ್ಭುತ ಆಟಗಾರ. 226 ರನ್‌ಗಳ ಬೃಹತ್ ಮೊತ್ತವನ್ನು ಚೇಸ್ ಮಾಡುವಾಗ, ಆರಂಭದಲ್ಲೇ 3-4 ಸಿಕ್ಸರ್ ಬಾರಿಸಲು ಯತ್ನಿಸಿದರೆ ಔಟ್ ಆಗುವ ಭಯ ಪ್ರತಿಯೊಬ್ಬ ಬ್ಯಾಟರ್‌ಗೂ ಇರುತ್ತದೆ. ಆದರೆ ಆ ಭಯವನ್ನು ಬದಿಗೊತ್ತಿ ಅವರು 33 ಎಸೆತಗಳಲ್ಲಿ 67 ರನ್ ಬಾರಿಸಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು,' ಎಂದು ಹೇಳಿದ್ದಾರೆ.

ಅಭಿಷೇಕ್ ಶರ್ಮಾ (12 ಎಸೆತಗಳಲ್ಲಿ 29 ರನ್) ಮತ್ತು ಸಂಜು ಸ್ಯಾಮ್ಸನ್ ಅವರ 93 ರನ್‌ಗಳ ಆರಂಭಿಕ ಜೊತೆಯಾಟವು ಭಾರತದ ಚೇಸಿಂಗ್‌ಗೆ ಶಕ್ತಿ ತುಂಬಿತು. ಆಟಗಾರರು ತಮ್ಮ ಮನಸ್ಸನ್ನು ನಿಯಂತ್ರಿಸಿಕೊಂಡು ಪ್ರದರ್ಶಿಸುತ್ತಿರುವ ಈ ನಿರ್ಭಯದ ಮನೋಭಾವ ತಂಡಕ್ಕೆ ಹೊಸ ಆಯಾಮ ನೀಡಿದೆ,' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ವೈಭವ್‌ಗೆ ಪ್ಲೇಯಿಂಗ್‌ 11ನಲ್ಲಿ ಸ್ಥಾನ ಸಿಗುತ್ತಾ?

ಇಶಾನ್ ಕಿಶನ್ ಅವರ ಅಲಭ್ಯತೆಯಿಂದಾಗಿ 3ನೇ ಕ್ರಮಾಂಕದ ಜಾಗ ಖಾಲಿಯಾಗಿದ್ದರೂ, ಪ್ರಸ್ತುತ ಇರುವ ಆರಂಭಿಕ ಜೋಡಿಯನ್ನು ಬದಲಾಯಿಸಲು ಮ್ಯಾನೇಜ್‌ಮೆಂಟ್ ಸಿದ್ಧವಿಲ್ಲ ಎಂಬುದನ್ನು ಕೋಚ್ ಮಾತುಗಳು ಸೂಚಿಸುತ್ತಿವೆ. ಹೀಗಾಗಿ ಎರಡನೇ ಟಿ20ಐ ಪಂದ್ಯದಲ್ಲೂ ವೈಭವ್ ಸೂರ್ಯವಂಶಿ ಬೆಂಚ್ ಕಾಯಬೇಕಾಗುತ್ತದೆಯೇ ಅಥವಾ ಅವರಿಗೆ ಚೊಚ್ಚಲ ಅವಕಾಶ ಸಿಗಲಿದೆಯೇ ಎಂಬ ಸಸ್ಪೆನ್ಸ್ ಇನ್ನೂ ಮುಂದುವರೆದಿದೆ.

ಭಾರತೀಯ ಕ್ರಿಕೆಟ್‌ನ ಭವಿಷ್ಯದ ಸ್ಫೋಟಕ ಆಟಗಾರ ಅಂತಲೇ ಗುರುತಿಸಿಕೊಂಡಿರುವ 15 ವರ್ಷದ ವೈಭವ್ ಸೂರ್ಯವಂಶಿ ಅವರು, ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಚೊಚ್ಚಲ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ತಮ್ಮ ಸ್ಪೋಟಕ ಬ್ಯಾಟಿಂಗ್ ಶೈಲಿ ಹಾಗೂ ಕಿರಿಯರ ಕ್ರಿಕೆಟ್‌ನಲ್ಲಿ ಸಾಲು ಸಾಲು ಶತಕಗಳನ್ನು ಸಿಡಿಸಿ ಗಮನಸೆಳೆದಿರುವ ಈ ಯುವ ತಾರೆಗೆ, ಇಶಾನ್ ಕಿಶನ್ ಗಾಯದ ಸಮಸ್ಯೆಯಿಂದ ಹೊರಬಿದ್ದಿರುವುದರಿಂದ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಆದರೆ ಮ್ಯಾನೇಜ್‌ಮೆಂಟ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+