ನಾನು ಹೇಳ್ತಿದ್ದೀನಲ್ಲ, ರಿವ್ಯೂ ತಗೊಳ್ಳಿ.. ಕಿಶನ್‌ಗೆ ಧೈರ್ಯ ತುಂಬಿ ವಿಕೆಟ್ ಉರುಳಿಸಿದ ವೈಭವ್ ಸೂರ್ಯವಂಶಿ

Vaibhav Sooryavanshi: ಟೀಮ್ ಇಂಡಿಯಾ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಆಟ ಅಷ್ಟೇ ಅಲ್ಲದೆ, ಪ್ರಮುಖ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲ ಆಟಗಾರ ಎಂದು ಸಾಬೀತುಪಡಿಸಿದ್ದಾರೆ. ಇದೀಗ ದುಲೀಪ್‌ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದ್ದು, ವೈಭವ್ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

2026ರ ದುಲೀಪ್ ಟ್ರೋಫಿ ಅಭಿಯಾನದ ಆರಂಭದಿಂದಲೂ, ವೈಭವ್ ಸೂರ್ಯವಂಶಿ ಈಸ್ಟ್ ಝೋನ್ (ಪೂರ್ವ ವಲಯ) ತಂಡಕ್ಕೆ ಅತ್ಯಂತ ಉಪಯುಕ್ತ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ, ನಾಯಕತ್ವದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ನಾಯಕ ಇಶಾನ್ ಕಿಶನ್ ಗಾಯಗೊಂಡ ನಂತರ ಸೆಮಿಫೈನಲ್‌ನಲ್ಲಿ ನಾಯಕತ್ವ ವಹಿಸಿಕೊಂಡಿದ್ದ ಸೂರ್ಯವಂಶಿ, ಇದೀಗ ತಂಡದ ಉಪನಾಯಕನಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ.

Vaibhav Sooryavanshi s DRS Call Stuns All in Duleep Trophy 2026 Final in M A Chidambaram Stadium

ರಿವ್ಯೂನಲ್ಲಿ ಮತ್ತೊಮ್ಮೆ ಯಶಸ್ವಿಯಾದ ವೈಭವ್

ದುಲೀಪ್ ಟ್ರೋಫಿ ಫೈನಲ್‌ನ 3ನೇ ದಿನದಂದು, ಕ್ಯಾಚ್ ಬಿಹೈಂಡ್ ತೀರ್ಪಿನ ವಿರುದ್ಧ ರಿವ್ಯೂ ತೆಗೆದುಕೊಳ್ಳುವಂತೆ ಸೂರ್ಯವಂಶಿ ಅವರು ಇಶಾನ್ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು. ಅನುಭವಿ ವೇಗಿ ಮುಕೇಶ್ ಕುಮಾರ್, ಸೌತ್ ಝೋನ್‌ನ ರಿಕಿ ಭುಯಿ ಅವರ ಲೆಗ್ ಸೈಡ್‌ ಕಡೆಗೆ ಎಸೆದ ಎಸೆತವು ಬ್ಯಾಟ್‌ಗೆ ತಾಗಿದ್ದು, ಅದನ್ನು ವಿಕೆಟ್‌ ಕೀಪರ್ ಕುಮಾರ್ ಕುಶಾಗ್ರ ಅತ್ಯಂತ ಸ್ಪಷ್ಟವಾಗಿ ತಮ್ಮ ಕೈಗಳಲ್ಲಿ ವಶಪಡಿಸಿಕೊಂಡರು.

ಡಿಆರ್‌ಎಸ್ ತೆಗೆದುಕೊಳ್ಳುವಂತೆ ಒತ್ತಾಯ

ಆದರೆ ಮೈದಾನದಲ್ಲಿದ್ದ ಅಂಪೈರ್ ಚೆಂಡು ಬ್ಯಾಟ್‌ಗೆ ತಾಗಿಲ್ಲ ಎಂದು ತೀರ್ಪು ನೀಡಿ, ಪೂರ್ವ ವಲಯ ಆಟಗಾರರು ಮಾಡಿದ ಅಪೀಲ್‌ ಅಥವಾ ಮನವಿಯನ್ನು ತಿರಸ್ಕರಿಸಿದರು. ಆದರೆ ಅದೇ ವೇಳೆ ಸೂರ್ಯವಂಶಿ ಅವರು ಡಿಆರ್‌ಎಸ್ ತೆಗೆದುಕೊಳ್ಳುವಂತೆ ಇಶಾನ್ ಕಿಶನ್ ಅವರನ್ನು ಒತ್ತಾಯಿಸಿದರು.

ವೈಭವ್‌ನಿಂದ ಉಲ್ಟಾ ಹೊಡೆದ ಅಂಪೈರ್ ತೀರ್ಪು

ಇಶಾನ್ ಕಿಶನ್ ರಿವ್ಯೂಗಾಗಿ ಸೂಚನೆ ನೀಡುವ ಮೊದಲು, 'ತೆಗೆದುಕೊಳ್ಳಿ, ತೆಗೆದುಕೊಳ್ಳಿ' (take it, take it) ಎಂದು ಸೂರ್ಯವಂಶಿ ಹೇಳಿದ ಮಾತುಗಳು ಸ್ಟಂಪ್ ಮೈಕ್ರೋಫೋನ್‌ನಲ್ಲಿ ಸ್ಪಷ್ಟವಾಗಿ ಕೇಳಿಸಿದವು. ನಂತರದ ಅಲ್ಟ್ರಾಎಡ್ಜ್ ರಿಪ್ಲೇಗಳು ಚೆಂಡು ಬ್ಯಾಟ್‌ಗೆ ತಾಗಿರುವುದನ್ನು ಖಚಿತಪಡಿಸಿದವು. ಇದು ಅಂಪೈರ್ ತಮ್ಮ ತೀರ್ಪನ್ನು ಬದಲಾಯಿಸುವಂತೆ ಮಾಡಿತು.

ಬಳಿಕ ಕಾಮೆಂಟೇಟರ್‌ಗಳು ಕುಶಾಗ್ರ ಅವರ ಚುರುಕಾದ ವಿಕೆಟ್‌ ಕೀಪಿಂಗ್ ಅನ್ನು ಶ್ಲಾಘಿಸಿತಲ್ಲದೆ, ಬ್ಯಾಟರ್‌ನ ವಿಕೆಟ್ ಬೀಳುವಲ್ಲಿ ವೈಭವ್ ಸೂರ್ಯವಂಶಿ ವಹಿಸಿದ ಪ್ರಮುಖ ಪಾತ್ರವನ್ನೂ ಕೂಡ ಒತ್ತಿ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗಾದ್ರೆ ವಿಶ್ಲೇಷಕರು ಏನೆಲ್ಲಾ ಹೇಳಿದರು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್‌ ಆಗಿದ್ದೇನು?

'ಕುಮಾರ್ ಕುಶಾಗ್ರ ಅವರಿಂದ ಅತ್ಯದ್ಭುತ ಕ್ಯಾಚ್. ಆದರೆ ನೀವು ರಿವ್ಯೂ ತೆಗೆದುಕೊಳ್ಳಬೇಕಾದರೆ ವೈಭವ್ ಸೂರ್ಯವಂಶಿ ಬಳಿಯೇ ಹೋಗಬೇಕು. ಮೊದಲನೆಯದಾಗಿ, ಅವರು ಏನು ಹೇಳುತ್ತಾರೆಂಬುದನ್ನು ಕೇಳಿ. ವೈಭವ್, ಇಶಾನ್ ಕಿಶನ್ ಅವರ ಬಳಿ 'ನಾನು ನಿಮಗೆ ಹೇಳುತ್ತಿದ್ದೇನೆ, ತೆಗೆದುಕೊಳ್ಳಿ. ರಿವ್ಯೂ ತೆಗೆದುಕೊಳ್ಳಿ' ಎಂದು ಹೇಳಿದ್ದು ಸ್ಟಂಪ್ ಮೈಕ್‌ನಲ್ಲಿ ಕೇಳಿಸುತ್ತಿತ್ತು. ಮುಕೇಶ್ ಕುಮಾರ್ ಅವರೇ, ಸೂರ್ಯವಂಶಿ ಅವರಿಗೆ ಧನ್ಯವಾದ ಹೇಳಿ,' ಎಂದು ನೇರ ಪ್ರಸಾರದ ವೇಳೆ ವಿಶ್ಲೇಕರು ಹೇಳಿದರು. ಇದು ಸಖತ್ ವೈರಲ್ ಆಗುತ್ತಿದೆ.

ಇದೇ ಟೂರ್ನಿಯಲ್ಲಿ ಈ ಹಿಂದೆಯೂ ಹಂಗಾಮಿ ನಾಯಕನಾಗಿ ಜವಾಬ್ದಾರು ವಹಿಸಿಕೊಂಡಾಗಲೂ ವೈಭವ್ ಸೂರ್ಯವಂಶಿ ಅವರು ಡಿಆರ್‌ಎಸ್‌ ತೆಗೆದುಕೊಂಡು ಸಕ್ಸಸ್‌ ಕಂಡಿದ್ದರಿ. ಈಗಲೂ ಸಹ ರಿವ್ಯೂ ತೆಗೆದುಕೊಳ್ಳುವಂತೆ ಒತ್ತಾಯಿಸಿ ಅದರಲ್ಲೂ ಸಹ ಯಶಸ್ವಿಯಾಗಿ ದಿಗ್ಗಜರ ಗಮನ ಸೆಳೆದಿದ್ದಾರೆ. ಅವರ ಜವಾಬ್ದಾರಿಯುತ ನಡೆಗೆ ಇದೀಗ ಸಾಮಾಜಿಕ ಜಾಲತಾಣಗಲ್ಲಿ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ. ಮತ್ತೊಂದಯ ಅವನು ಇನ್ನೂ ಚಿಕ್ಕ ಬಾಲಕ, ಇನ್ನೂ ತಿಳಿವಳಿಕೆ, ಜವಾಬ್ದಾರಿ ಬರಲು ತುಂಬಾ ಸಮಯ ಬೇಕಾಗುತ್ತದೆ ಎಂದು ಟೀಕೆ ಮಾಡಿದವರಿಗೂ ಇದು ತಕ್ಕ ತಿರುಗೇಟು ಕೊಟ್ಟಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+