ವೈಭವ್ ಸೂರ್ಯವಂಶಿ 'A' ಆಕಾರದ ಸಂಭ್ರಮಾಚರಣೆಯ ಹಿಂದಿನ ಉದ್ದೇಶ ಏನು? 'ವಂಡರ್ ಕಿಡ್‌' ಭಾವನಾತ್ಮಕ ಸಂದೇಶ ವೈರಲ್

Vaibhav Sooryavanshi: ಹರಾರೆಯಲ್ಲಿ ಗುರುವಾರ (ಜುಲೈ 23) ನಡೆದ ಟಿ20 ಪಂದ್ಯದಲ್ಲಿ ಭಾರತ ತಂಡವು ಜಿಂಬಾಬ್ವೆ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿಗೆ ಪ್ರಮುಖ ಕಾರಣನಾದ 15 ವರ್ಷದ ವೈಭವ್ ಸೂರ್ಯವಂಶಿ ಅವರ ವಿಶೇಷ ಸಂಭ್ರಮಾಚರಣೆ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಹಾಗಾದ್ರೆ ಇದರ ಹಿಂದಿನ ಉದ್ಧೇಶ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವಿಶ್ವದಾಖಲೆಯ ಅರ್ಧಶತಕ ಸಿಡಿಸಿ ಮಿಂಚಿದ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ವಿಶೇಷ ಸಂಭ್ರಮಾಚರಣೆ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಹೀಗೆ ಸಂಭ್ರಮಿಸಲು ಕಾರಣ ಏನು ಎನ್ನುವ ಮಾಹಿತಿಯನ್ನು ವಂಡರ್ ಕಿಡ್ ಬಿಚ್ಚಿಟ್ಟಿದ್ದಾರೆ.

Vaibhav Sooryavanshi A Celebration Explained Emotional Tribute to Mother After Record T20 Fifty

ವೈಭವ್ ಸೂರ್ಯವಂಶಿ ಭಾವುಕ ಕ್ಷಣ ವೈರಲ್

ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ತಕ್ಷಣವೇ ವೈಭವ್ ತಮ್ಮ ಎರಡು ಕೈಗಳ ಬೆರಳುಗಳಿಂದ 'A' ಆಕಾರವನ್ನು ತೋರಿಸಿ ಮೈದಾನದಲ್ಲೇ ಆನಂದಬಾಷ್ಪ ಹರಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ (15 ವರ್ಷ 118 ದಿನಗಳು) ಎಂಬ ಇತಿಹಾಸ ಬರೆದ ತಕ್ಷಣ ಅವರು ತೋರಿದ ಈ ಭಾವುಕ ನಡೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ವೈಭವ್ ವಿಶೇಷ ಸಂಭ್ರಮಾಚರಣೆ ಹಿಂದಿನ ಉದ್ದೇಶವೇನು?

ಈ ಸಂಭ್ರಮಾಚರಣೆಯ ಹಿಂದಿನ ರಹಸ್ಯವನ್ನು ವೈಭವ್ ಸೂರ್ಯವಂಶಿ ಈ ಹಿಂದೆಯೇ ಹಂಚಿಕೊಂಡಿದ್ದರು. ತಮ್ಮ ತಾಯಿ ಆರತಿ ಅವರ ಮೇಲಿನ ಅಪಾರ ಪ್ರೀತಿ ಮತ್ತು ಗೌರವಕ್ಕಾಗಿ ಈ ರೀತಿ ಮಾಡುವುದಾಗಿ ಹೇಳಿದರು. 'ತಮ್ಮ ತಾಯಿಯ ಹೆಸರಿನ ಮೊದಲ ಅಕ್ಷರ 'A' ಆಗಿದೆ. ಆದ್ದರಿಂದ ಮೈದಾನದಲ್ಲಿ ಮಾಡುವ ಸಾಧನೆ ಮತ್ತು ರನ್‌ಗಳನ್ನು ತಮ್ಮ ತಾಯಿಗೆ ಸಮರ್ಪಿಸುವುದು ಅಭ್ಯಾಸವಾಗಿದೆ,' ಎಂದು ಅವರು ಹೇಳಿಕೊಂಡಿದ್ದಾರೆ.

ಕ್ರೀಡಾಭಿಮಾನಿಗಳ ಮನ ಗೆದ್ದ ವಂಡರ್ ಕಿಡ್‌ ಸಂಭ್ರಮಾಚರಣೆ

ಐಪಿಎಲ್ 2026ರ ಪಂದ್ಯಗಳ ವೇಳೆಯೂ ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡಿದ್ದ ವೀಡಿಯೊದಲ್ಲಿ ವೈಭವ್ ಈ ಕುರಿತು ಮಾತನಾಡುತ್ತಾ, 'ನನ್ನ ಪ್ರತಿಯೊಂದು ಯಶಸ್ಸಿನ ಹಿಂದೆ ನನ್ನ ತಾಯಿಯ ಶ್ರಮ ಹಾಗೂ ಆಶೀರ್ವಾದ ಇದೆ. ಆದ್ದರಿಂದ ಪ್ರತಿಯೊಂದು ಅರ್ಧಶತಕ ಅಥವಾ ಶತಕವನ್ನು ಅವರಿಗೆ ಅರ್ಪಿಸುತ್ತೇನೆ,' ಎಂದು ಹೇಳಿದ್ದರು. ಅದೇ ಭಾವನಾತ್ಮಕ ಸಂಭ್ರಮಾಚರಣೆಯನ್ನು ಇಂದು ಕೂಡ ಅವರು ಮಾಡಿದ್ದು, ಕ್ರೀಡಾಭಿಮಾನಿಗಳ ಮನ ಗೆದ್ದಿದ್ದಾರೆ.

ವಿಶ್ವ ಕ್ರಿಕೆಟ್ ದಿಗ್ಗಜರಿಂದ ಮೆಚ್ಚುಗೆಗಳ ಸುರಿಮಳೆ

ಅಂತಾರಾಷ್ಟ್ರೀಯ ಮಟ್ಟದ ಇಷ್ಟೊಂದು ದೊಡ್ಡ ವೇದಿಕೆಯಲ್ಲಿ ಕಿರಿಯ ವಯಸ್ಸಿನಲ್ಲೇ ಇಂತಹ ಅದ್ಭುತ ಸಾಧನೆ ಮಾಡಿ, ತಕ್ಷಣವೇ ತಾಯಿಯನ್ನು ನೆನೆದ ವೈಭವ್ ಅವರ ವಿನಮ್ರತೆಗೆ ಸಹ ಆಟಗಾರರು, ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಮುಕ್ತಕಂಠದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 'ವೈಭವ್ ನೀವು ಒಬ್ಬ ಅದ್ಭುತ ಪ್ರತಿಭೆಯಾಗಿದ್ದು, ಮುಂದಿನ ದಿನಗಳಲ್ಲಿ ನೀವು ಇನ್ನೂ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುತ್ತೀರಿ ಎಂಬ ಭರವಸೆ ನಮಗಿದೆ.' ಎಂದು ಹೇಳುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ಇಂದಿನ ಪಂದ್ಯದಲ್ಲಿ ಜಿಂಬಾಬ್ವೆ ನೀಡಿದ 126 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಅರ್ಧಶತಕ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರ ಜವಾಬ್ದಾರಿಯುತ ಆಟದಿಂದ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಒಟ್ಟಿನಲ್ಲಿ ಇದೀಗ ವೈಭವ್ ಮೈದಾನದಲ್ಲಿ ಮಾಡಿದ ವಿಶೇಷ ಸಂಭ್ರಮಾಚರಣೆ ಕ್ರಿಕೆಟ್‌ ಪ್ರೇಮಿಗಳ ಮನ ಗೆದ್ದಿದೆ. ಈ ಕ್ಯೂಟ್‌ ಫೋಟೋಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+