WPL RCB vs UPW: ಆರ್‌ಸಿಬಿ ವಿರುದ್ಧ ಯುಪಿ ವಾರಿಯರ್ಸ್‌ಗೆ ರೋಚಕ ಗೆಲುವು
ಮಹಿಳಾ ಸೂಪರ್ ಲೀಗ್ ಇತಿಹಾಸದಲ್ಲೇ ಮೊದಲ ಸೂಪರ್ ಓವರ್ ಗೆ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಿದೆ. ಸೋಮವಾರ ನಡೆದ ರಣರೋಚಕ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಯುಪಿ ವಾರಿಯರ್ಸ್ ಗೆದ್ದು ಬೀಗಿದೆ. ಸೂಪರ್ ಓವರ್ ನಲ್ಲಿ ಸೋಫಿ ಎಕಲ್‌ಸ್ಟನ್ ಬಿಗಿ ಬೌಲಿಂಗ್ ಮಾಡುವ ಮೂಲಕ ಯುಪಿ ವಾರಿಯರ್ಸ್ ಗೆಲುವನ್ನು ಸುಲಭವಾಗಿಸಿದರು.
ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 180 ರನ್ ಕಲೆಹಾಕಿತು. ಎಲ್ಲಿಸ್ ಪೆರ್‍ರಿ 56 ಎಸೆತಗಳಲ್ಲಿ 9 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 90 ರನ್ ಗಳಿಸಿದರು. ಡೇನಿಯಲ್ ವ್ಯಾಟ್ ಹಾಡ್ಜ್ 41 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಹಿತ 57 ರನ್ ಗಳಿಸಿದರು. ಇವರಿಬ್ಬರನ್ನು ಹೊರತುಪಡಿಸಿದರೆ ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ರನ್ ಗಳಿಸಲಿಲ್ಲ.

ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಯುಪಿ ವಾರಿಯರ್ಸ್ ಸ್ಫೋಟಕ ಆರಂಭ ಪಡೆಯಿತು. ಕಿರಣ್ ನ್ಯಾವಿಗೆರೆ 12 ಎಸೆತಗಳಲ್ಲೇ 4 ಬೌಂಡರಿ 1 ಸಿಕ್ಸರ್ ಸಹಿತ 24 ರನ್ ಗಳಿಸಿದರು. ನಾಯಕಿ ದೀಪ್ತಿ ಶರ್ಮಾ 13 ಎಸೆತಗಲ್ಲಿ 25 ರನ್ ಗಳಿಸಿದರು. ಶ್ವೇತಾ ಶೆರವಾತ್ 31 ರನ್ ಗಳಿಸಿದರೆ, ಉಮಾ ಚೆಟ್ರಿ 14 ರನ್ ಗಳಿಸಿದರು.
ಸೋಲಿನ ಸುಳಿಯಲ್ಲಿದ್ದ ಯುಪಿ ವಾರಿಯರ್ಸ್‌ಗೆ ಸೋಫಿ ಎಕಲ್‌ಸ್ಟನ್ ಆಸರೆಯಾದರು. 19 ಎಸೆತಗಳಲ್ಲಿ 1 ಬೌಂಡರಿ 4 ಸಿಕ್ಸರ್ ಸಹಿತ 33 ರನ್ ಗಳಿಸಿದರು. ಕೊನೆಯ ಎಸೆತದಲ್ಲಿ ಯುಪಿ ವಾರಿಯರ್ಸ್‌ಗೆ 1 ರನ್ ಬೇಕಿದ್ದಾಗ ರನೌಟ್ ಆಗುವ ಮೂಲಕ ಪಂದ್ಯ ಟೈನಲ್ಲಿ ಅಂತ್ಯವಾಯಿತು.
ಸೋಫಿ ಎಕಲ್‌ಸ್ಟನ್ ಹೋರಾಟ
ಬಳಿಕ ನಡೆದ ಸೂಪರ್ ಓವರ್ ನಲ್ಲಿ ಆರ್ ಸಿಬಿ ವೇಗಿ ಕಿಮ್ ಗಾರ್ತ್ ಕೇವಲ 8 ರನ್ ಬಿಟ್ಟುಕೊಟ್ಟರು. ಆರ್ ಸಿಬಿ ಗೆಲುವಿಗೆ 9 ರನ್ ಬೇಕಿತ್ತು, ಫಾರ್ಮ್‌ನಲ್ಲಿದ್ದ ಎಲ್ಲಿಸ್ ಪೆರ್‍ರಿ ಅವರನ್ನು ಬಿಟ್ಟು ಸ್ಮೃತಿ ಮಂಧಾನ ಮತ್ತು ರಿಷಾ ಘೋಷ್ ಸೂಪರ್ ಓವರ್ ಆಡಲು ಬಂದರು. ಸೋಫಿ ಎಕಲ್‌ಸ್ಟನ್ ಇಬ್ಬರನ್ನು ತಮ್ಮ ಸ್ಪಿನ್ ದಾಳಿಯಿಂದ ಕಾಡಿದರು. ಇಬ್ಬರೂ ಬೌಂಡರಿ ಗಳಿಸಲು ಮಾಡಿದ ಪ್ರಯತ್ನಗಳು ವಿಫಲವಾದವು. ಅಂತಿಮವಾಗಿ 4 ರನ್ ಮಾತ್ರ ಗಳಿಸಿದ ಆರ್ ಸಿಬಿ ಸೋಲೋಪ್ಪಿಕೊಂಡಿದೆ.












Click it and Unblock the Notifications