ವಿರಾಟ್ ಕೊಹ್ಲಿ ಕ್ರಿಕೆಟ್ ಅಲ್ಲ ಕುಂಟೆಬಿಲ್ಲೆ ಆಡಬೇಕಂತೆ!
ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ತಮ್ಮ ತನು, ಮನ, ಧನ ಎಲ್ಲವನ್ನೂ ಅರ್ಪಿಸಿದ್ದಾರೆ. 2008ರಿಂದ ಹಿಡಿದು, 2024ರ ತನಕ ಒಂದೇ ತಂಡದ ಪರವಾಗಿ ಆಡುತ್ತಿದ್ದಾರೆ. ಆರ್‌ಸಿಬಿಗೆ ವಿರಾಟ್ ಕೊಹ್ಲಿ ಕಳೆದ 16 ವರ್ಷಗಳಿಂದಲೂ ದುಡಿಯುತ್ತಿದ್ದಾರೆ. ಹೀಗಿದ್ದರೂ ವಿರಾಟ್‌ಗೆ ವಿರೋಧಿಗಳು ಕೂಡ ಹೆಚ್ಚಾಗಿದ್ದು, ನಿನ್ನೆಯಿಂದ ಅವರೆಲ್ಲಾ ಬಾಯಿ ಬಡಿದುಕೊಳ್ಳುತ್ತಿದ್ದಾರೆ.
ಆರ್‌ಸಿಬಿ ನಿನ್ನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗೆಲುವುನ್ನ ಸಾಧಿಸಲು ವಿರಾಟ್ ಕೊಹ್ಲಿ ಕೂಡ ಪ್ರಮುಖ ಕಾರಣವಾಗಿದ್ದರು. ಯಾಕಂದ್ರೆ ಹೈದರಾಬಾದ್ ತಂಡದ ವಿರುದ್ಧ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್ ಶುರು ಮಾಡಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಕ್ಕಿತ್ತು ಹೀಗಿದ್ದಾಗ ಮಧ್ಯದಲ್ಲಿ ಪರಿಸ್ಥಿತಿ ಆತಂಕ ಮೂಡಿಸಿತ್ತು ಆದ್ರೆ ಆಗ ಕಿಂಗ್ ವಿರಾಟ್ ಕೊಹ್ಲಿ ಗಟ್ಟಿಯಾಗಿ ನಿಂತು ಇಡೀ ಸನ್ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಬುಡವನ್ನೇ ಅಲ್ಲಾಡಿಸಿದರು.

ಕೊಹ್ಲಿ ವಿರೋಧಿಗಳ ಮಾತು ಏನು?
ಕೇವಲ 43 ಬಾಲ್ ಆಡಿ, ಭರ್ಜರಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 51 ರನ್ ಗಳಿಸಿದರು. ಹೀಗಿದ್ದರೂ ವಿರಾಟ್ ಕೊಹ್ಲಿ, ಸ್ಲೋ ಬ್ಯಾಟಿಂಗ್ ಆಡಿದ್ದಾರೆ ಅಂತಾ ವಿರೋಧಿಗಳು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ವಿಚಾರದ ಕುರಿತಾಗಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದ್ದು. ವಿರಾಟ್ ಕೊಹ್ಲಿ ವಿರೋಧಿ ಗ್ಯಾಂಗ್, ವಿರಾಟ್ ಕೊಹ್ಲಿ ಕ್ರಿಕೆಟ್ ಅಲ್ಲ ಕುಂಟೆಬಿಲ್ಲೆ ಆಡಲಿ ಅಂತಾ ಪೋಸ್ಟ್ ಹಾಕುತ್ತಿದ್ದಾರೆ. ಹೀಗೆ ವಿರಾಟ್ ಕೊಹ್ಲಿ ವಿರುದ್ಧ ಮಾತನಾಡುತ್ತಿರುವ ವಿರೋಧಿಗಳಿಗೆ, ಆರ್‌ಸಿಬಿ ಅಭಿಮಾನಿ ಬಳಗ ಕೂಡ ಚಳಿ ಬಿಡಿಸುತ್ತಿದೆ.
You Either Die A Hero or You Live Long Enough To See Yourself Become a Villain! Kohli strike rate debate is getting real. Unadkat could’ve taken one wicket fewer & Hyderabad would’ve been left chasing 160-170!#Chokli is still disrespectful!#RCBvsSRHpic.twitter.com/IiJIWOtJsX
— Pranav Pratap Singh (@PranavMatraaPPS) April 25, 2024
ಆರ್‌ಸಿಬಿ ತಂಡ ನಿನ್ನೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸಿದೆ. ಆರ್‌ಸಿಬಿ ತಂಡ 206 ರನ್ ಗಳಿಸಿ ಹೈದರಬಾದ್‌ಗೆ ಸವಾಲಿನ ಮೊತ್ತ ನೀಡಿತ್ತು. ಆದರೆ 171 ರನ್‌ಗೆ ಹೈದರಾಬಾದ್ ತಂಡ ತನ್ನ ಓವರ್‌ಗಳನ್ನ ಖಾಲಿ ಮಾಡಿಕೊಂಡು ಹೀನಾಯವಾಗಿ ಸೋಲು ಕಂಡರು. ಈ ಮೂಲಕವಗಿ ಭರ್ಜರಿ 35 ರನ್ ಅಂತರದ ಗೆಲುವಿನ ಮೂಲಕ ಆರ್‌ಸಿಬಿ ತನ್ನ ಪ್ಲೇಆಫ್ ಕನಸನ್ನ ಈಗಲೂ ಜೀವಂತವಾಗಿ ಉಳಿಸಿಕೊಂಡಿದೆ. ಹಾಗೇ ವಿರಾಟ್ ಕೊಹ್ಲಿ & ರಜತ್ ಪಾಟಿದಾರ್ ಆಟಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ. ಹೀಗಾಗಿ ವಿರಾಟ್ ವಿರುದ್ಧವಾಗಿ ಮಾತನಾಡುತ್ತಿರುವವರಿಗೆ ಸರಿಯಾಗಿ ಉತ್ತರ ನೀಡುತ್ತಿದ್ದಾರೆ ಆರ್‌ಸಿಬಿ ಫ್ಯಾನ್ಸ್.
ಹೈದರಾಬಾದ್ ತಂಡಕ್ಕೆ ಸಂಕಷ್ಟ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತ ನಂತರ, ಸನ್‌ರೈಸರ್ಸ್ ಹೈದರಾಬಾದ್ ತಂಡ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಈ ಸಂಕಷ್ಟಗಳನ್ನು ಎದುರಿಸಿ, ಇದೀಗ ಪ್ಲೇಆಫ್‌ಗೆ ಹೋಗುವುದು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ದೊಡ್ಡ ಸವಾಲಿನ ಕೆಲಸವಾಗಿದೆ. ಈ ನಡುವೆ ಆರ್‌ಸಿಬಿ ತಂಡದ ಪ್ಲೇಆಫ್ ಕನಸು ಇನ್ನೂ ಜೀವಂತವಾಗಿದೆ. ಹೇಗಂದ್ರೆ ಮುಂದಿನ ಎಲ್ಲಾ ಪಂದ್ಯಗಳನ್ನ ಗೆದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ ಕಮಾಲ್ ಮಾಡಬೇಕು. ಆ ಮೂಲಕ ಮುಂದಿನ ಹಂತಕ್ಕೆ ಹೋಗಲು ರಣತಂತ್ರ ಹೂಡಬೇಕಿದೆ. ಇದರಲ್ಲಿ ಒಂದಷ್ಟು ಸಣ್ಣ ಎಡವಟ್ಟು ನಡೆದರೂ ಆರ್‌ಸಿಬಿಗೆ ಮುಂದಿನ ಹಂತದ ಕನಸು ನನಸಾಗುವುದಿಲ್ಲ.












Click it and Unblock the Notifications