ಬೆಂಗಳೂರಿನಲ್ಲಿ 2016ರಂದು ನಡೆದಿದ್ದ ಟಿ20 ಪಂದ್ಯವನ್ನು ನೆನಪಿಸಿದ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ ಪಂದ್ಯ

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಕಾದಾಟವನ್ನು ನಡೆಸಿದವು. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಕಪ್‌ ಗೆದ್ದು ಸಂಭ್ರಮಿಸಿದೆ. ಆದರೆ ಈ ಪಂದ್ಯ ನಿಜಕ್ಕೂ ಇತಿಹಾಸದ ಪುಟ ಸೇರುತ್ತದೆ. ಆದರೆ ಈ ಪಂದ್ಯ 2016 ಆ ಒಂದು ಟಿ20 ವಿಶ್ವಕಪ್‌ ಪಂದ್ಯದ ನೆನಪು ತರುತ್ತದೆ.

ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಮಣಿಸಿ ಐಸಿಸಿ ಪ್ರಶಸ್ತಿ ಬರದ ನೋವನ್ನು ನೀಗಿಸಿಕೊಂಡಿದೆ. ಭರ್ಜರಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಪಡೆ ಅರ್ಹ ಜಯ ದಾಖಲಿಸಿದೆ.ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮಾಡಿದ ಕೊನೆಯ ಓವರ್‌ ಎಲ್ಲರ ಮನಸ್ಸಿನಲ್ಲೂ ಅಚ್ಚಳಿಯದೇ ಉಳಿಯುತ್ತದೆ. ಸೊಗಸಾದ ಬೌಲಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ ಅಬ್ಬರ ನಡೆಸಿದರು. ಹಾರ್ದಿಕ್‌ ಹೀಗೆ ಕೊನೆಯ ಓವರ್‌ ಟಿ20 ವಿಶ್ವಕಪ್‌ನಲ್ಲಿ ಬೌಲಿಂಗ್ ಮಾಡಿದ್ದು ಇದೆ ಮೊದಲೇನಲ್ಲ. ಇದಕ್ಕೂ ಮುನ್ನ ಸಹ ಈ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ.

The final match against South Africa was reminiscent of the 2016 T20 match against Bangladesh

ಚಿನ್ನಸ್ವಾಮಿಯಲ್ಲಿ ಚಿನ್ನದಂತಹ ಬೌಲಿಂಗ್

ಭಾರತ ಹಾಗೂ ಬಾಂಗ್ಲಾದೇಶಗಳ ನಡುವೆ 2016ರಲ್ಲೂ ಇಂತಹದ್ದೇ ಒಂದು ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳ ಸಾಕ್ಷಿ ಆಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 146 ರನ್‌ ಸೇರಿಸಿತ್ತು. ಬಾಂಗ್ಲಾ ಗೆಲುವಿಗೆ 147 ರನ್ ಟಾರ್ಗೆಟ್ ನೀಡಲಾಯಿತು. ಆದರೆ ಈ ಪಂದ್ಯದಲ್ಲೂ 2024ರ ಟಿ20 ವಿಶ್ವಕಪ್‌ ಫೈನಲ್ ರೀತಿಯ ಚಮತ್ಕಾರವೇ ಆಯಿತು.

ಆ ಪಂದ್ಯವೂ ಟೀಮ್ ಇಂಡಿಯಾ ಪಾಲಿಗೆ ಮಹತ್ವದಾಗಿತ್ತು. ಮುಂದಿನ ಹಂತಕ್ಕೆ ಪ್ರವೇಶಿಸಲು ಗೆಲುವು ಅನಿವಾರ್ಯವಾಗಿತ್ತು. ಈ ವೇಳೆ ಕೂಲ್‌ ಕ್ಯಾಪ್ಟನ್‌ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ನಾಯಕತರಾಗಿದ್ದರು. ಈಗ ಅನುಭವಿ ಆಟಗಾರರಾಗಿರುವ ಜಸ್ಪ್ರಿತ್ ಬುಮ್ರಾ ಹಾಗೂ ಹಾರ್ದಿಕ್‌ ಪಾಂಡ್ಯ ಸೇರಿದಂತೆ ಹಲವು ಆಟಗಾರರು ಆಗಲೂ ತಂಡದಲ್ಲಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ ಸನ್ನವೇಶದ ರೀತಿಯೇ ಆ ದಿನವೂ ಸನ್ನಿವೇಶ ಇತ್ತು. ಆದರೆ ಒತ್ತಡವನ್ನು ಮೆಟ್ಟಿ ನಿಂತಿದ್ದು ಆಗಿನ ಯಂಗ್‌ ಮ್ಯಾನ್‌ ಹಾರ್ದಿಕ್ ಪಾಂಡ್ಯ.

ಕೊನೆಯ ಓವರ್‌ನಲ್ಲಿ ಅಬ್ಬರಿಸಿದ್ದ ಹಾರ್ದಿಕ್ ಪಾಂಡ್ಯ

ಕೊನೆಯ ಓವರ್‌ಗಳಲ್ಲಿ ಬಾಂಗ್ಲಾ ಗೆಲುವಿಗೆ 11 ರನ್‌ ಅವಶ್ಯಕತೆ ಇತ್ತು. ಧೋನಿ ಹಿಂದೆ ಮುಂದೆ ಯೋಚಿಸದೆ ಚೆಂಡನ್ನು ಹಾರ್ದಿಕ್ ಪಾಂಡ್ಯ ಅವರ ಕೈಗೆ ನೀಡಿದರು. ಯುವ ಆಟಗಾರರನ್ನು ಬೆಳೆಸ ಬೇಕು ಎಂಬ ಮನಸ್ಥಿತಿ ಆಗಲೇ ಧೋನಿ ಅವರಲ್ಲಿತ್ತು. ಹಾರ್ದಿಕ್ ಪಾಂಡ್ಯ, ಕೊನೆಯ ಓವರ್‌ನಲ್ಲಿ ಬಾಂಗ್ಲಾ ತಂಡವನ್ನು ಕಟ್ಟಿ ಹಾಕಿದರು. ಮೊದಲ ಮೂರು ಎಸೆತಗಳಲ್ಲಿ 9 ರನ್‌ ಬಂದಿದ್ದರೂ ಧೃತಿ ಗೆಡದ ಹಾರ್ದಿಕ್ ಪರ್ಫೆಕ್ಟ್‌ ಲೈನ್‌ ಹಾಗೂ ಲೆಂಥ್‌ ನಲ್ಲಿ ದಾಳಿ ಸಂಘಟಿಸಿದರು.

The final match against South Africa was reminiscent of the 2016 T20 match against Bangladesh

ಕೊನೆಯ ಮೂರು ಎಸೆತಗಳ್ಲಲಿ ಬಾಂಗ್ಲಾ ತಂಡದ ಮೂರು ಬ್ಯಾಟರ್‌ಗಳು ರನ್‌ ಕಲೆ ಹಾಕಲು ಪರದಾಡಿ ಪೆವಲಿಯನ್‌ ಸೇರಿದರು. ಟೀಮ್ ಇಂಡಿಯಾ ಸೋಲು ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು. ಇದಕ್ಕೆ ಕಾರಣ ಧೋನಿಯ ಚಾಣಕ್ಯ ತನ ಹಾಗೂ ಹಾರ್ದಿಕ್ ಪಾಂಡ್ಯ ಬೌಲಿಂಗ್. ಆಗಲೇ ಹಾರ್ದಿಕ್‌ ಕೊನೆಯ ಓವರ್‌ ಹೇಗೆ ಬೌಲಿಂಗ್ ಮಾಡಬೇಕು ಎಂದು ಕರಗತ ಮಾಡಿಕೊಂಡಿದ್ದರು. ಆ ಅನುಭವ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ ಕೈ ಹಿಡಿಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+