ಶ್ರೀಲಂಕಾ ಪ್ರವಾಸದಲ್ಲಿ ಜಸ್ಪ್ರಿತ್ ಬುಮ್ರಾ ಸ್ಥಾನ ತುಂಬುವುದು ಯಾರು? ಮೂರು ಆಟಗಾರರ ಮೇಲೆ ಚಿತ್ತ

ಟಿ20 ವಿಶ್ವಕಪ್‌ ಗೆಲುವಿನ ಜೋಶ್ ದಿನ ಕಳೆದಂತೆ ಕಡಿಮೆ ಆಗುತ್ತಿದೆ. ಆಟಗಾರರು ಮುಂದಿನ ಸವಾಲಿಗೆ ಸಿದ್ಧರಾಗುತ್ತಿದ್ದಾರೆ. ಈಗಾಗಲೇ ಜಿಂಬಾಬ್ವೆ ಪ್ರವಾಸವನ್ನು ಮುಗಿಸಿರುವ ಭಾರತದ ಕಿರಿಯರ ತಂಡ, ಭರ್ಜರಿ ಪ್ರದರ್ಶನ ನೀಡಿದೆ. ಇದೇ ತಿಂಗಳು ಭಾರತ ಶ್ರೀಲಂಕಾ ಪ್ರವಾಸ ಬೆಳೆಸಲಿದ್ದು, ತಂಡವನ್ನು ಘೋಷಿಸಬೇಕಿದೆ.

ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಜಸ್ಪ್ರಿತ್‌ ಬುಮ್ರಾ ಅವರಿಗೆ ಈ ಸರಣಿಯ ವೇಳೆ ವಿಶ್ರಾಂತಿ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ. ಶೀಘ್ರದಲ್ಲಿ ಟೀಮ್ ಇಂಡಿಯಾ ಘೋಷಣೆ ಆಗಲಿದ್ದು, ಗೌತಮ್‌ ಗಂಭೀರ್ ಮುಂದಾಳತ್ವದ ತಂಡ ಹೊಸ ಸವಾಲಿಗೆ ತಯಾರಾಗಿದೆ. ಶ್ರೀಲಂಕಾ ಪ್ರವಾಸದಿಂದ ಗಂಭೀರ್ ಕೋಚ್‌ ಹುದ್ದೆಯ ಜವಾಬ್ದಾರಿಯನ್ನು ನಿಭಾಯಿಸಲಿದ್ದು, ಭವಿಷ್ಯದ ತಂಡದ ಕಲ್ಪನೆ ಕಾಣಬಹುದಾಗಿದೆ.

Team India Gears Up for Champions Trophy 2025 New Faces to Shine in Sri Lanka Tour

ಟೀಮ್ ಇಂಡಿಯಾದ ಯಾರ್ಕರ್‌ ಸ್ಪೇಷಲಿಸ್ಟ್‌ ಎಂದೇ ಖ್ಯಾತಿ ಪಡೆದಿರುವ ಜಸ್ಪ್ರಿತ್ ಬುಮ್ರಾ, ಅವರ ಸ್ಥಾನವನ್ನು ಶ್ರೀಲಂಕಾ ಪ್ರವಾಸದಲ್ಲಿ ತುಂಬುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇದಕ್ಕೆ ಯುವ ಆಟಗಾರರತ್ತ ಗೌತಮ್‌ ಗಂಭೀರ್‌ ಚಿತ್ತ ಹೋಗಬಹುದು ಎಂದು ಹೇಳಲಾಗುತ್ತಿದೆ. ಈ ಮೂಲಕ ಚಾಂಪಿಯನ್ಸ್‌ ಟ್ರೋಫಿಗೆ ಈಗಿನಿಂದಲೇ ತಯಾರಿ ನಡೆಸುವ ಉದ್ದೇಶ ಗೌತಿ ಅವರದ್ದಾಗಿದೆ.

ಮುಖೇಶ್ ಕುಮಾರ್

ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಮುಖೇಶ್ ಕುಮಾರ್ ಸ್ಥಿರ ಪ್ರದರ್ಶನ ನೀಡಿದ್ದಾರೆ. ಅವರು ಹೊಸ ಚೆಂಡಿನ ಮೂಲಕ ವಿಕೆಟ್ ಬೇಟೆ ನಡೆಸುವ ಕ್ಷಮತೆಯನ್ನು ಹೊಂದಿದ್ದಾರೆ. ಇದಲ್ಲದೇ ಕಳೆದ ಪಂದ್ಯದಲ್ಲಿ 4 ವಿಕೆಟ್ ಪಡೆದಿದ್ದರು. ಇವರು ಬುಮ್ರಾ ಬದಲಿಗೆ ತಂಡವನ್ನು ಸೇರಬಹುದು.

Team India Gears Up for Champions Trophy 2025 New Faces to Shine in Sri Lanka Tour

ಹರ್ಷಿತ್ ರಾಣಾ

ಐಪಿಎಲ್ 2024 ರಲ್ಲಿ ತಮ್ಮ ಬಿಗುವಿನ ದಾಳಿಯ ಮೂಲಕವೇ ಸದ್ದು ಮಾಡಿರುವ ಬೌಲರ್ ಹರ್ಷಿತ್ ರಾಣಾ. ಅವರು ಹೊಸ ಚೆಂಡಿನೊಂದಿಗೆ ಬೌಲ್ ಮಾಡಬಹುದು. ಇದಲ್ಲದೆ, ಡೆತ್ ಓವರ್‌ಗಳಲ್ಲಿ ಯಾರ್ಕರ್‌ಗಳು ಮತ್ತು ಸ್ಲೋ ಬಾಲ್‌ ಎಸೆಯ ಬಲ್ಲ ಕ್ಷಮತೆ ಹೊಂದಿದ್ದಾರೆ. ಕೆಕೆಆರ್ ಪರ ಆಡುವಾಗ 15ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ. ಇವರು ಸಹ ಬುಮ್ರಾ ಸ್ಥಾನ ತುಂಬ ಬಲ್ಲರು.

ಆಕಾಶ್ ಮಾಧವಲ್

ಮುಂಬೈ ಇಂಡಿಯನ್ಸ್‌ನ ಬೌಲರ್‌ ಆಕಾಶ್‌ ಮಾಧವಲ್‌ ಅವರಿಗೂ ಟೀಮ್ ಇಂಡಿಯಾದಲ್ಲಿ ಸ್ಥಾನ ಲಭಿಸುವ ಸಾಧ್ಯತೆ ಇದೆ. ಅವರು 13 ಪಂದ್ಯಗಳಲ್ಲಿ 19 ವಿಕೆಟ್ ಪಡೆದಿದ್ದಾರೆ. ಇದಲ್ಲದೆ, ಅವರು ಎಡಗೈ ವೇಗದ ಬೌಲರ್. ಅವರ ಸ್ಟ್ರೈಕ್ ಕೂಡ 13.79 ಆಗಿದೆ. ಇವರ ಮೇಲೂ ಕೋಚ್‌ ಒಂದು ಕಣ್ಣು ನೆಟ್ಟಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+