ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿ20 ವಿಶ್ವಕಪ್: ಬಾಂಗ್ಲಾದೇಶ ಮಣಿಸಿ ಸೆಮಿಫೈನಲ್‌ಗೆ ಹತ್ತಿರವಾದ ಭಾರತ

|
Google Oneindia Kannada News

ಅಡಿಲೇಡ್, ನವೆಂಬರ್ 2: ಕನ್ನಡಿಗ ಕೆ. ಎಲ್. ರಾಹುಲ್ ಹಾಗೂ ರನ್‌ ಮಷಿನ್ ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕ ಹಾಗೂ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಮಳೆ ಅಡಚಣೆಗೊಳಗಾಗಿದ್ದ ಪಂದ್ಯದಲ್ಲಿ ಭಾರತ ತಂದ 5 ರನ್‌ಗಳ ರೋಚಕ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಬುಧವಾರ ಅಡಿಲೇಡ್‌ನಲ್ಲಿ ನಡೆದ ವಿಶ್ವಕಪ್‌ನ ಸೂಪರ್‌ 12ನೇ ತನ್ನ 4 ನೇ ಪಂದ್ಯದಲ್ಲಿ ಭಾರತ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್‌ಗಳಿಸಿತ್ತು. ಕಳೆದ ಮೂರು ಪಂದ್ಯಗಳಲ್ಲಿ ವಿಫಲರಾಗಿದ್ದ ಕನ್ನಡಿಗ ರಾಹುಲ್ 32 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 50, ವಿರಾಟ್‌ ಕೊಹ್ಲಿ 44 ಎಸೆತಗಳಲ್ಲಿ 8 ಬೌಂಡರಿ ,1 ಸಿಕ್ಸರ್‌ ಸೇರಿದಂತೆ ಅಜೇಯ 64 ಹಾಗೂ ಸೂರ್ಯಕುಮಾರ್ ಯಾದವ್‌ರ ವೇಗದ 30 ರನ್‌ಗಳು ಟೀಮ್ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಯಿತು.

ಫೀಫಾ ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಈ ಜನಪ್ರಿಯ ನಟಫೀಫಾ ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಈ ಜನಪ್ರಿಯ ನಟ

ಭಾರತಕ್ಕೆ ಸೋಲಿನ ಭೀತಿ ಮೂಡಿಸಿದ್ದ ಲಿಟ್ಟನ್ ದಾಸ್; 185 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಮೊದಲ 7 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 66 ರನ್‌ಗಳಿಸಿತ್ತು. ಆರಂಭಿಕ ಬ್ಯಾಟರ್ ಲಿಟನ್ ದಾಸ್‌ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಟೀಮ್ ಇಂಡಿಯಾಗೆ ಸೋಲಿನ ಭೀತಿ ಮೂಡಿಸಿದ್ದರು. ಅಲ್ಲದೆ ಇದೇ ಸಂದರ್ಭದಲ್ಲಿ ಮಳೆ ಬಂದಿದ್ದರಿಂದ ಡೆಕ್ವರ್ಥ್ ಲೂಯಿಸ್‌ ನಿಯಮದ ಪ್ರಕಾರ ಬಾಂಗ್ಲಾದೇಶ 17 ರನ್‌ಗಳ ಮುನ್ನಡೆ ಸಾಧಿಸಿತ್ತು.

T20I world cup: India Beat Bangladesh by 5 runs

ಮಳೆ ನಿಂತ ಬಳಿಕೆ ವಿಕೆಟ್‌ಗಳ ಸುರಿಮಳೆ; ಮಳೆ ಬಂದಾಗ ಭಾರತ ಪಂದ್ಯವನ್ನು ಕಳೆದುಳ್ಳುವ ಭೀತಿ ಎದುರಾಗಿತ್ತು. ಆದರೆ ಮಳೆ ನಿಂತ ಬಳಿಕ ಓವರ್‌ಗಳನ್ನು ಕಡಿತ ಮಾಡಿ 16 ಓವರ್‌ಗಳಿಗೆ 151 ರನ್‌ಗಳ ಗುರಿ ನಿಗದಿ ಮಾಡಲಾಗಿತ್ತು. ಅಂದರೆ ಉಳಿದ 9 ಓವರ್‌ಗಳಲ್ಲಿ ಬಾಂಗ್ಲಾ 85 ರನ್‌ಗಳಿಸಬೇಕಿತ್ತು. ಆಗಲೂ ಬಾಂಗ್ಲಾ ತಂಡವೇ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ ಎಂದು ಭಾವಿಸಲಾಗಿತ್ತು.

ಆದರೆ ಪಂದ್ಯ ಪುನಾರಂಭದ ಮೊದಲ ಓವರ್‌ನಲ್ಲೇ ಅದ್ಭುತವಾಗಿ ಆಡುತ್ತಿದ್ದ ಲಿಟನ್ ದಾಸ್‌ ರನ್‌ಔಟ್‌ ಆದರು. ಇವರ ವಿಕೆಟ್ ಬೆನ್ನಲ್ಲೆ ಬಾಂಗ್ಲಾದೇಶ ತಂಡದ ಯಾವೊಬ್ಬ ಬ್ಯಾಟರ್ ಹೆಚ್ಚು ಸಮಯ ಕ್ರೀಸ್‌ನಲ್ಲಿ ಉಳಿಯಲಿಲ್ಲ. 8ನೇ ಓವರ್‌ನಲ್ಲಿ ದಾಸ್, 9ನೇ ಓವರ್‌ನಲ್ಲಿ ನಜ್ಮುಲ್ ಹೊಸೈನ್ ಶಂಟೊ (21),12ನೇ ಓವರ್‌ನಲ್ಲಿ ಅಫೀಫ್ ಹೊಸೇನ್ (3) ಹಾಗೂ ನಾಯಕ ಶಕಿಬ್ ಹಲ್ ಹಸನ್ (13), 13ನೇ ಓವರ್‌ನಲ್ಲಿ ಯಾಸಿರ್ ಅಲಿ (1) ಹಾಗೂ ಮೊಸದಿಕ್ ಹೊಸೈನ್ (6) ಬಂದಷ್ಟೇ ವೇಗವಾಗಿ ಪೆವಿಲಿಯನ್‌ಗೆ ಮರಳಿದರು.

ಕೊನೆಯ ಓವರ್‌ನಲ್ಲಿ ಬಾಂಗ್ಲಾದೇಶ ತಂಡಕ್ಕೆ ಗೆಲ್ಲಲು 20 ರನ್‌ಗಳ ಅವಶ್ಯಕತೆಯಿತ್ತು. ಅಂತಿಮ ಓವರ್‌ ಮಾಡಿದ ಯುವ ಬೌಲರ್ ಅರ್ಷ್‌ದೀಪ್ ಸಿಂಗ್ ತಲಾ ಒಂದು ಸಿಕ್ಸರ್-ಫೋರ್ ಬಿಟ್ಟುಕೊಟ್ಟರು ಒಟ್ಟಾರೆ 15 ರನ್‌ ನೀಡಿ 5 ರನ್‌ಗಳ ರೋಚಕ ಜಯ ತಂದುಕೊಟ್ಟರು.

T20I world cup: India Beat Bangladesh by 5 runs

ಜಯವರ್ದನೆ ದಾಖಲೆ ಮುರಿದ ವಿರಾಟ್; ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ವಿರಾಟ್‌ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ 16 ರನ್‌ಗಳನ್ನು ದಾಖಲಿಸುತ್ತಿದ್ದಂತೆ ವಿಶ್ವಕಪ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ಬ್ಯಾಟರ್ ಎನಿಸಿಕೊಂಡರು. ಅವರು ಶ್ರೀಲಂಕಾದ ಬ್ಯಾಟರ್ ಮಹೇಲಾ ಜಯವರ್ದನೆ ದಾಖಲೆ ಮುರಿದರು.

ಜಯವರ್ದನೆ ವಿಶ್ವಕಪ್ ಇತಿಹಾಸದಲ್ಲಿ 31 ಇನ್ನಿಂಗ್ಸ್‌ಗಳಿಂದ 1016ರನ್‌ಗಳಿಸಿದ್ದರು. ವಿರಾಟ್ ಕೊಹ್ಲಿ 23 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆಯನ್ನು ಬ್ರೇಕ್ ಮಾಡಿದರು. ವಿರಾಟ್ ಕೊಹ್ಲಿ 88ರ ಸರಾಸರಿಯಲ್ಲಿ 1065 ರನ್‌ಗಳಿಸಿದ್ದಾರೆ.

English summary
Virat Kohli and KL Rahul half centuries help India pull off a narrow win against Bangladesh in the T20 World Cup Super 12 match,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X