ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

T20 World Cup 2022: ಸೂಪರ್ 12 ಪ್ರವೇಶಿಸಿದ ತಂಡಗಳು, ಟೂರ್ನಿ ವೇಳಾಪಟ್ಟಿಯ ಮಾಹಿತಿ

|
Google Oneindia Kannada News

ಆಸ್ಟ್ರೇಲಿಯಾದಲ್ಲಿ 2022ರ ಟಿ20 ವಿಶ್ವಕಪ್‌ ನಡೆಯುತ್ತಿದ್ದು, ಶುಕ್ರವಾರ ಅರ್ಹತಾ ಸುತ್ತಿನ ಪಂದ್ಯಗಳು ಮುಗಿದಿದೆ. ಜಿಂಬಾಬ್ವೆ ತಂಡ ಸ್ಕಾಟ್ಲೆಂಡ್ ವಿರುದ್ಧ 9 ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತು, ಈ ಮೂಲಕ ಸೂಪರ್‌ 12 ಸಂಪೂರ್ಣ ದೊರೆತಿದೆ.

ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಎ ಗುಂಪಿನಲ್ಲಿ ಶ್ರೀಲಂಕಾ, ನೆದರ್ಲೆಂಡ್ಸ್ , ನಮೀಬಿಯಾ, ಯುಎಇ, ಬಿ ಗುಂಪಿನಲ್ಲಿ ಜಿಂಬಾಬ್ವೆ, ಐರ್ಲೆಂಡ್‌, ಸ್ಕಾಟ್ಲೆಂಡ್ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ಸೂಪರ್ 12ನ 4 ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದವು. ಅಂತಿಮವಾಗಿ ಎ ಗುಂಪಿನಿಂದ ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್, ಬಿ ಗುಂಪಿನಲ್ಲಿ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು ಸೂಪರ್‌ 12 ಹಂತಕ್ಕೆ ಪ್ರವೇಶಿಸಿವೆ.

ಏಷ್ಯಾಕಪ್‌ 2023: ಭಾರತ ಕ್ರಿಕೆಟ್ ತಂಡದಿಂದ ಪಾಕಿಸ್ತಾನ ಪ್ರವಾಸ: ಕ್ರೀಡಾ ಸಚಿವ ಠಾಕೂರ್ ಹೇಳಿದ್ದೇನು?ಏಷ್ಯಾಕಪ್‌ 2023: ಭಾರತ ಕ್ರಿಕೆಟ್ ತಂಡದಿಂದ ಪಾಕಿಸ್ತಾನ ಪ್ರವಾಸ: ಕ್ರೀಡಾ ಸಚಿವ ಠಾಕೂರ್ ಹೇಳಿದ್ದೇನು?

ಅರ್ಹತಾ ಸುತ್ತು ಮುಗಿದಿದ್ದು ಶನಿವಾರದಿಂದ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ 2021ರ ವಿಶ್ವಕಪ್‌ನ ಫೈನಲಿಸ್ಟ್‌ಗಳಾದ ಅತಿಥೇಯ ಹಾಗೂ ಹಾಲಿ ಚಾಂಪಿಯನ್‌ ತಂಡ ಆಸ್ಟ್ರೇಲಿಯಾ ತಂಡ ಹಾಗೂ ರನ್ನರ್‌ ಅಪ್ ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಾಡಲಿದೆ.

T20 World Cup Super 12 schedule, all Squads, Venues Check Other Details

ಸೂಪರ್‌ 12 ತಂಡಗಳ
ಗುಂಪು 1: ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್‌, ಶ್ರೀಲಂಕಾ, ಐರ್ಲೆಂಡ್‌
ಗುಂಪು 2: ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನೆದರ್ಲೆಂಡ್ಸ್, ಜಿಂಬಾಬ್ವೆ

ಗುಂಪು 1ರಲ್ಲಿರುವ ತಂಡಗಳ ಆಟಗಾರರ ವಿವರ

ಅಫ್ಘಾನಿಸ್ತಾನ: ಮೊಹಮ್ಮದ್ ನಬಿ (ನಾಯಕ), ನಜಿಬುಲ್ಲಾ ಝದ್ರಾನ್, ರಹಮಾನುಲ್ಲಾ ಗುರ್ಬಾಜ್, ಅಜ್ಮತುಲ್ಲಾ ಒಮರ್ಜಾಯ್, ದರ್ವಿಶ್ ರಸೂಲಿ, ಫರೀದ್ ಅಹ್ಮದ್ ಮಲಿಕ್, ಫಜಲ್ ಹಕ್ ಫಾರೂಕಿ, ಹಜರತುಲ್ಲಾ ಝಾಜೈ, ಇಬ್ರಾಹಿಂ ಝದ್ರಾನ್, ಮುಜೀಬ್ ಉರ್ ರಹಮದ್, ಸಲ್ ಹಕ್ಮದ್, ನವೀಬ್ ಉರ್ ರಹಮದ್ , ಉಸ್ಮಾನ್ ಘನಿ.
ಸ್ಟ್ಯಾಂಡ್‌ಬೈ ಆಟಗಾರರು: ಅಫ್ಸರ್ ಝಜೈ, ಶರಫುದ್ದೀನ್ ಅಶ್ರಫ್, ರಹಮತ್ ಶಾ, ಗುಲ್ಬದಿನ್ ನೈಬ್.

ಆಸ್ಟ್ರೇಲಿಯಾ: ಆ್ಯರೋನ್ ಫಿಂಚ್ (ನಾಯಕ), ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ಜೋಶ್ ಹೇಜಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಝಂಪಾ.

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕುರಾನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲಿ, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಅಲೆಕ್ಸ್ ಹೇಲ್ಸ್.

T20 World Cup Super 12 schedule, all Squads, Venues Check Other Details

ಸ್ಟ್ಯಾಂಡ್‌ ಬೈ ಆಟಗಾರರು: ಲಿಯಾಮ್ ಡಾಸನ್, ರಿಚರ್ಡ್ ಗ್ಲೀಸನ್, ಟೈಮಲ್ ಮಿಲ್ಸ್

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಿಮ್ ಸೌಥಿ, ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್, ಜಿಮ್ಮಿ ನೀಶಮ್, ಡೇರಿಲ್ ಮಿಚೆಲ್, ಆಡಮ್ ಮಿಲ್ನೆ, ಮಾರ್ಟಿನ್ ಗಪ್ಟಿಲ್, ಲಾಚ್ಲಮ್ ಫರ್ಗುಸನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಮೈಕಲ್ ಬ್ರೇಸ್‌ವೆಲ್, ಟ್ರೆಂಟ್ ಬೌಲ್ಟ್ .

ಐರ್ಲೆಂಡ್: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಮಾರ್ಕ್ ಅದೈರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಸಿಮಿ ಸಿಂಗ್, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಗ್ರಹಾಂ ಹ್ಯೂಮ್.

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್(ವಿಕೀ), ಧನಂಜಯ ಡಿ ಸಿಲ್ವಾ, ದನುಷ್ಕ ಗುಣತಿಲಕ, ಭಾನುಕಾ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣರತ್ನೆ, ಲಹಿರು ಕುಮಾರ, ಪ್ರಮೋದ್ ಮದುಶನ್, ಮಹೀಶ್ ತೀಕ್ಷಣ, ದುಷ್ಮಂತ ಚಮೀರ, ದಿಲನ್ ಚಮೀರ ಅಸಲಂಕಾ, ಜೆಫ್ರಿ ವಾಂಡರ್ಸೆ

T20 World Cup Super 12 schedule, all Squads, Venues Check Other Details

ಗುಂಪು 2ರ ತಂಡಗಳ ಆಟಗಾರರ ವಿವರ
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.

ಸ್ಟ್ಯಾಂಡ್‌ ಬೈ ಆಟಗಾರರು: ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್,

ಬಾಂಗ್ಲಾದೇಶ: ಶಕಿಬ್ ಅಲ್ ಹಸನ್, ಸಬ್ಬಿರ್ ರೆಹಮಾನ್, ಮೆಹಿದಿ ಹಸನ್ ಮಿರಾಜ್, ಅಫೀಫ್ ಹೊಸೈನ್, ಮೊಸಾದೆಕ್ ಹೊಸೈನ್, ಲಿಟ್ಟನ್ ದಾಸ್, ಯಾಸಿರ್ ಅಲಿ, ನೂರುಲ್ ಹಸನ್, ಮುಸ್ತಫಿಜುರ್ ರೆಹಮಾನ್, ಸೈಫುದ್ದೀನ್, ತಸ್ಕಿನ್ ಅಹ್ಮದ್, ಎಬಾಡೋತ್ ಹೊಸೈನ್, ಹಸನ್ ನಜ್ ಮಹ್ಮುದ್, ನಜ್ಮುಲ್ ಹೊಸೈನ್, ನಾಸುನ್ ಅಹ್ಮದ್‌

ಸ್ಟ್ಯಾಂಡ್‌ಬೈ ಆಟಗಾರರು: ಶೋರಿಫುಲ್ ಇಸ್ಲಾಂ, ಮಹೇದಿ ಹಸನ್, ರಿಶಾದ್ ಹೊಸೈನ್, ಸೌಮ್ಯ ಸರ್ಕಾರ್.

ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, ಶಾನ್ ಮಸೂದ್, ಉಸ್ಮಾನ್ ಮಸೂದ್ .

ಸ್ಟ್ಯಾಂಡ್‌ಬೈ ಆಟಗಾರರು: ಫಖರ್ ಜಮಾನ್, ಮೊಹಮ್ಮದ್ ಹ್ಯಾರಿಸ್, ಶಹನವಾಜ್ ದಹಾನಿ.

ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ಹೆನ್ರಿಕ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಎನ್ರಿಚ್ ನಾರ್ಕಿಯ, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ರಿಲೀ ರೊಸೋವ್, ತಬ್ರೈಜ್ ಶಾಮ್ಸ್, ತ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್.

ಸ್ಟ್ಯಾಂಡ್‌ಬೈ ಆಟಗಾರರು: ಜಾರ್ನ್ ಫಾರ್ಟುಯಿನ್, ಆಂಡಿಲ್ ಫೆಹ್ಲುಕ್ವಾಯೊ, ಲಿಜಾಡ್ ವಿಲಿಯಮ್ಸ್.

ನೆದರ್ಲೆಂಡ್ಸ್: ಕಾಲಿನ್ ಅಕರ್ಮನ್, ಶರೀಜ್ ಅಹ್ಮದ್, ಟಾಮ್ ಕೂಪರ್, ಬ್ಯಾಸ್ ಡಿ ಲೀಡ್, ಸ್ಕಾಟ್ ಎಡ್ವರ್ಡ್ಸ್, ಬ್ರೆಂಡನ್ ಗ್ಲೋವರ್, ಫ್ರೆಡ್ ಕ್ಲಾಸೆನ್, ಸ್ಟೀಫನ್ ಮೈಬರ್ಗ್, ಮ್ಯಾಕ್ಸ್ ಓ'ಡೌಡ್, ಟಿಮ್ ಪ್ರಿಂಗಲ್, ವಿಕ್ರಮ್ ಸಿಂಗ್, ಲೋಗನ್ ವ್ಯಾನ್ ಬೀಕ್, ಟಿಮ್ ವ್ಯಾನ್ ಡೆರ್ ಗುಟೆನ್, ವ್ಯಾನ್ ಡರ್ ಮರ್ವೆ, ಪಾಲ್ ವ್ಯಾನ್ ಮೀಕೆರೆನ್.

ಜಿಂಬಾಬ್ವೆ: ವೆಸ್ಲಿ ಮಾಧೆವೆರ್, ರೆಗಿಸ್ ಚಕಬ್ವಾ(ನಾಯಕ), ಟೋನಿ ಮುನ್ಯೊಂಗಾ, ಸೀನ್ ವಿಲಿಯಮ್ಸ್, ಸಿಕಂದರ್ ರಾಜಾ, ಮಿಲ್ಟನ್ ಶುಂಬಾ, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ರಿಚರ್ಡ್ ನಾಗರವ, ಟೆಂಡೈ ಚಟಾರಾ, ವೆಲ್ಲಿಂಗ್ಟನ್ ಮಸಕಡ್ಜಾ, ಕ್ರೇಗ್ ಎರ್ವಿನ್, ಬ್ಲೆಸಿಂಗ್ ಮುಜರಬನಿ, ಬ್ರಾಡ್‌ ಎವಾನ್ಸ್ ಕ್ಲೈವ್ ಮಡಂಡೆ

2022 ರ ಐಸಿಸಿ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಾದ್ಯಂತ ಒಟ್ಟು ಏಳು ಸ್ಥಳಗಳಲ್ಲಿ ನಡೆಯಲಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಸೆಮಿಫೈನಲ್‌ಗಳು ಅಡಿಲೇಡ್ ಓವಲ್ ಮತ್ತು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತದೆ.

ಟಿ20 ವಿಶ್ವಕಪ್ ಭಾರತದ ವೇಳಾಪಟ್ಟಿ
ಅಕ್ಟೋಬರ್-23 : ಭಾರತ vs ಪಾಕಿಸ್ತಾನ - ಮೆಲ್ಬೋರ್ನ್
ಅಕ್ಟೋಬರ್-27: ಭಾರತ vs ನೆದರ್ಲೆಂಡ್ಸ್ - ಸಿಡ್ನಿ ಕ್ರಿಕೆಟ್
ಅಕ್ಟೋಬರ್- 30: ಭಾರತ vs ದಕ್ಷಿಣ ಆಫ್ರಿಕಾ - ಪರ್ತ್
ನವೆಂಬರ್-2: ಭಾರತ vs ಬಾಂಗ್ಲಾದೇಶ -ಅಡಿಲೇಡ್ ಓವಲ್
ನವೆಂಬರ್-6: ಭಾರತ vs ಜಿಂಬಾಬ್ವೆ - ಮೆಲ್ಬೋರ್ನ್‌

English summary
T20 World Cup Super 12 Start from October 22, current champion Australia and New Zealand played first match of super 12 at sydney. check here super 12 teams The ICC T20 World Cup 2022 final will be played on November 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X