ಟಿ20 ವಿಶ್ವಕಪ್ 2022: ಟೀಂ ಇಂಡಿಯಾ ಪಂದ್ಯಗಳ ಸಂಪೂರ್ಣ ಮಾರ್ಗದರ್ಶಿ

ರೋಹಿತ್ ಶರ್ಮಾ ಅವರು ಇದೇ ಮೊದಲ ಬಾರಿಗೆ ತಮ್ಮ ವೃತ್ತಿಜೀವನದಲ್ಲಿ ಟಿ20 ವಿಶ್ವಕಪ್‌ನಲ್ಲಿ ನಾಯಕರಾಗಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಟೀಂ ಇಂಡಿಯಾ ಪೂರ್ಣ ತಂಡ, ಸಂಪೂರ್ಣ ವೇಳಾಪಟ್ಟಿ, ಭಾರತೀಯ ಕಾಲ ಮಾನ ಪ್ರಕಾರ(IST)ದಂತೆ ಪಂದ್ಯದ ಸಮಯ, ಹವಾಮಾನ ವಿವರ; ಎಲ್ಲಾ ವಿವರಗಳು ಇಲ್ಲಿವೆ

ಟೀಮ್ ಇಂಡಿಯಾ ತನ್ನ ಮೂವರು ಅಗ್ರ ಆಟಗಾರರಾದ ರವೀಂದ್ರ ಜಡೇಜಾ, ದೀಪಕ್ ಚಹಾರ್ ಮತ್ತು ಜಸ್ಪ್ರೀತ್ ಬುಮ್ರಾ ಅವರಿಲ್ಲದೆ ಕಣಕ್ಕಿಳಿಯುತ್ತಿದೆ. ಗಾಯದ ಸಮಸ್ಯೆಯಿಂದ ಸ್ಟಾರ್ ಆಟಗಾರರನ್ನು ಕಳೆದುಕೊಂಡರೂ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಟೀಂ ಇಂಡಿಯಾ ಕೂಡಾ ಒಂದೆನಿಸಿದೆ.

ಟಿ20 ವಿಶ್ವಕಪ್ 2022ರಿಂದ ದೀಪಕ್ ಚಾಹರ್ ಕೂಡಾ ಕೊನೆ ಕ್ಷಣದಲ್ಲಿ ಹೊರಬಿದ್ದಿದ್ದು, ಬೂಮ್ರಾ ಬದಲಿಗೆ ಶಮಿಯನ್ನು ತಂಡಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಚಾಹರ್ ಬದಲಿಗೆ ಆಟಗಾರನನ್ನು ಹೆಸರಿಸಿಲ್ಲ. ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಇಬ್ಬರು ಸ್ಟಾಂಡ್ ಬೈ ಆಟಗಾರರಾಗಿದ್ದಾರೆ. ಅಕ್ಟೋಬರ್ 13ರಂದೇ ಆಸ್ಟ್ರೇಲಿಯಾ ವಿಮಾನ ಏರಿದ್ದಾರೆ ಕೂಡಾ.

T20 World Cup 2022: Team India Full squad, complete schedule, time in IST; All details here

ಅಕ್ಟೋಬರ್ 16ರಂದು ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ನಮೀಬಿಯಾ ನಡುವೆ ಸೆಣಸಾಟ ನಡೆದಿದೆ. ಈ ನಡುವೆ ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯಾದ ಹವಾಗುಣಕ್ಕೆ ಹೊಂದಿಕೊಳ್ಳುತ್ತಿದ್ದು, ಅಭ್ಯಾಸ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ.

ಟೀಂ ಇಂಡಿಯಾದ ಬ್ಯಾಟಿಂಗ್ ಶಕ್ತಿಗಳೆನಿಸಿರುವ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾದ ಪಿಚ್‌ಗಳು ಮತ್ತು ಪರಿಸ್ಥಿತಿಗಳ ಹೆಚ್ಚು ತಲೆಕೆಡಿಸಿಕೊಂಡಂತೆ ಕಂಡು ಬಂದಿದ್ದು, ಗಂಟೆಗಟ್ಟಲೆ ನೆಟ್ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಇಬ್ಬರಿಗೂ ಆಸ್ಟ್ರೇಲಿಯಾದ ಪಿಚ್ ಬಗ್ಗೆ ಹೆಚ್ಚಿನ ಅರಿವಿದೆ ಆದರೆ, ಅನೇಕ ಆಟಗಾರರಿಗೆ ಇದು ಮೊಟ್ಟ ಮೊದಲ ಅನುಭವವಾಗಿದೆ. ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹರ್ಷಲ್ ಪಟೇಲ್, ಅರ್ಷ್ ದೀಪ್ ಸಿಂಗ್ ಹಿರಿಯ ಆಟಗಾರರಿಂದ ಸಲಹೆ ಪಡೆದುಕೊಳ್ಳುತ್ತಿದ್ದಾರೆ.

T20 World Cup 2022: Team India Full squad, complete schedule, time in IST; All details here

ಅಕ್ಟೋಬರ್ 12ರಂದು ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯ ಗೆದ್ದರೂ ಪರ್ಥ್ ಪಿಚ್ ನಲ್ಲಿ ಕೆಎಲ್ ರಾಹುಲ್ ಆರ್ಭಟದ ನಡುವೆ ಸೋಲು ಕಂಡಿದೆ. ಅಕ್ಟೋಬರ್ 17ರಂದು ಅಧಿಕೃತವಾಗಿ ಅಭ್ಯಾಸ ಪಂದ್ಯವಾಡಲಿದ್ದು, ಅತಿಥೇಯ ಆಸ್ಟ್ರೇಲಿಯಾ ಎದುರಾಳಿಯಾಗಿದೆ. ನಂತರ ಅಕ್ಟೋಬರ್ 19ರಂದು ನ್ಯೂಜಿಲೆಂಡ್ ವಿರುದ್ಧ ಮತ್ತೊಂದು ಅಭ್ಯಾಸ ಪಂದ್ಯ ನಿಗದಿಯಾಗಿದೆ. ಅಕ್ಟೋಬರ್ 23ರಂದು ಮೆಲ್ಬೋರ್ನ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಟೀಂ ಇಂಡಿಯಾ ಎದುರಿಸಲಿದೆ.

ಟೀಂ ಇಂಡಿಯಾ: ರೋಹಿತ್ ಶರ್ಮ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾವ್, ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷ್ ದೀಪ್ ಸಿಂಗ್

ಸ್ಟ್ಯಾಂಡ್ ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ನೋಯಿ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.

ಐಸಿಸಿ ಪುರುಷರ T20 ವಿಶ್ವಕಪ್ 2022 ರ ಭಾರತ ಸಂಪೂರ್ಣ ವೇಳಾಪಟ್ಟಿ

ಭಾರತ vs ಪಾಕಿಸ್ತಾನ: ಅಕ್ಟೋಬರ್ 23, ಭಾನುವಾರ ಮಧ್ಯಾಹ್ನ 1:30 IST

ಭಾರತ ವಿರುದ್ಧ A2 : ಅಕ್ಟೋಬರ್ 27, ಗುರುವಾರ ಮಧ್ಯಾಹ್ನ 12:30 IST

ಭಾರತ vs ದಕ್ಷಿಣ ಆಫ್ರಿಕಾ: ಅಕ್ಟೋಬರ್ 30, ಭಾನುವಾರ ಸಂಜೆ 4:30 PM IST

ಭಾರತ vs ಬಾಂಗ್ಲಾದೇಶ: ನವೆಂಬರ್ 2, ಬುಧವಾರ ಮಧ್ಯಾಹ್ನ 1:30 IST

ಭಾರತ vs B1: ನವೆಂಬರ್ 6, ಭಾನುವಾರ ಮಧ್ಯಾಹ್ನ 1:30 IST

ಎಂಎಸ್ ಧೋನಿ ನಾಯಕತ್ವದಲ್ಲಿ 2007ರಲ್ಲಿ ಟೀಂ ಇಂಡಿಯಾದಲ್ಲಿ ಚೊಚ್ಚಲ ವಿಶ್ವ ಟ್ವೆಂಟಿ 20 ಗೆದ್ದುಕೊಂಡಿದ್ದು, ರೋಹಿತ್ ಶರ್ಮಾ ನೇತೃತ್ವದಲ್ಲಿ ಎರಡನೇ ಬಾರಿಗೆ ಕಪ್ ಎತ್ತಿ ಹಿಡಿಯುವುದೇ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+