Suryakumar Yadav: ವಿರಾಟ್ ಕೊಹ್ಲಿ 125 ಪಂದ್ಯಗಳಲ್ಲಿ ಮಾಡಿದ್ದ ದಾಖಲೆಯನ್ನು 69 ಪಂದ್ಯಗಳಲ್ಲೇ ಸರಿಗಟ್ಟಿದ ಸೂರ್ಯ!
ಭಾರತ ಟಿ20 ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಮೊದಲ ಪಂದ್ಯದಲ್ಲೇ ಅಮೋಘ ದಾಖಲೆ ಬರೆದಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 58 ರನ್ ಗಳಿಸಿದರು. ಅವರ ಅರ್ಧಶತಕದ ನೆರವಿನಿಂದ ಭಾರತ 213 ರನ್ ಕಲೆಹಾಕಿತ್ತು, ಈ ಪಂದ್ಯವನ್ನು ಭಾರತ 43 ರನ್‌ಗಳಿಂದ ಗೆದ್ದುಕೊಂಡಿತ್ತು.
ಸೂರ್ಯಕುಮಾರ್ ಯಾದವ್ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು. ಇದರೊಂದಿಗೆ ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ 125 ಪಂದ್ಯಗಳಲ್ಲಿ ಮಾಡಿದ್ದ ದಾಖಲೆಯನ್ನು ಸೂರ್ಯಕುಮಾರ್ ಯಾದವ್ 69 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲೇ ಮುರಿದು ಹೊಸ ದಾಖಲೆ ಬರೆದರು.

ವಿಶ್ವದಾಖಲೆ ಬರೆದ ಸೂರ್ಯ
ಸೂರ್ಯಕುಮಾರ್ ಈಗ ಟಿ20 ಅಂತರಾಷ್ಟ್ರೀಯ ಪಂದ್ಯಗಳ ಇತಿಹಾಸದಲ್ಲಿ ಜಂಟಿ ಅತ್ಯಂತ ಹೆಚ್ಚು ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಗಳನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ 125 ಪಂದ್ಯಗಳಲ್ಲಿ ಮಾಡಿದ್ದ ಸಾಧನೆಯನ್ನು ಸೂರ್ಯಕುಮಾರ್ ಯಾದವ್ ಕೇವಲ 69 ಪಂದ್ಯಗಳಲ್ಲಿ ಮಾಡಿದ್ದು, ಕೊಹ್ಲಿ ಸಾಧನೆಯನ್ನು ಸರಿಗಟ್ಟಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪಡೆದವರ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಇದ್ದರೆ, ರೋಹಿತ್ ಶರ್ಮಾ ಐದನೇ ಸ್ಥಾನದಲ್ಲಿದ್ದಾರೆ. ಅತಿ ಹಚ್ಚು ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದವರ ಪಟ್ಟಿ ಈ ಕೆಳಗಿದೆ.
- ಸೂರ್ಯಕುಮಾರ್ ಯಾದವ್ (ಭಾರತ) - 16 (69 ಪಂದ್ಯಗಳಲ್ಲಿ)
- ವಿರಾಟ್ ಕೊಹ್ಲಿ (ಭಾರತ) - 16 (125 ಪಂದ್ಯಗಳಲ್ಲಿ)
- ಸಿಕಂದರ್ ರಜಾ (ಜಿಂಬಾಬ್ವೆ) - 15 (91 ಪಂದ್ಯಗಳಲ್ಲಿ)
- ಮೊಹಮ್ಮದ್ ನಬಿ (ಅಫ್ಘಾನಿಸ್ತಾನ) - 14 (129 ಪಂದ್ಯಗಳಲ್ಲಿ)
- ರೋಹಿತ್ ಶರ್ಮಾ (ಭಾರತ) - 14 (159 ಪಂದ್ಯಗಳಲ್ಲಿ)












Click it and Unblock the Notifications