Sunil Gavaskar: ವಯಸ್ಸಿಗಿಂತ ಹೆಚ್ಚು ಏಕದಿನ ಶತಕಗಳಿರಬೇಕು: ರೋಹಿತ್ ಶರ್ಮಾ ಬಗ್ಗೆ ಬೇಸರ ಹೊರಹಾಕಿದ ಸುನಿಲ್ ಗವಾಸ್ಕರ್

Sunil Gavaskar: ಮುಲ್ಲನ್‌ಪುರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ಹಾಗೂ ಹಿರಿಯ ಆಟಗಾರ ರೋಹಿತ್ ಶರ್ಮಾ ಶತಕ ಗಳಿಸಲು ವಿಫಲರಾದರು. ಈ ಕುರಿತು ಪ್ರತಿಕ್ರಿಯಿಸಿದ ಟೀಮ್ ಇಂಡಿಯಾ ಮಾಜಿ ಕ್ರಿಕೆಟ್‌ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಪಂದ್ಯದಲ್ಲಿ ಭಾರತ ಸೋಲನುಭವಿಸಿತು. ರೋಹಿತ್ ಶರ್ಮಾ ಅವರು ಉತ್ತಮವಾಗಿ ಆಡಿ 92 ರನ್ ಗಳಿಸಿ, ಕೇವಲ 8 ರನ್‌ಗಳಿಂದ ಶತಕ ವಂಚಿತರಾದರು. ಇದು ತಮಗೆ ತೀವ್ರ ಬೇಸರ ಮೂಡಿಸಿದೆ ಎಂದು ಸುನೀಲ್ ಗವಾಸ್ಕರ್ ಅವರು ಜಿಯೋ ಹಾಟ್‌ಸ್ಟಾರ್ ಜೊತೆ ಮಾತನಾಡುವಾಗ ಹೇಳಿದರು.

Sunil Gavaskar on Rohit Sharma He Should Have Scored 100 After Missing Century by 8 Runs in ODI

ಬೇಸರ ವ್ಯಕ್ತಪಡಿಸಿದ ಸುನೀಲ್ ಗವಾಸ್ಕರ್

ಪ್ರಸ್ತುತ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 35 ಶತಕಗಳನ್ನು ಬಾರಿಸಿದ್ದಾರೆ. 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಮುಗಿಯುವ ವೇಳೆಗೆ ಅವರಿಗೆ 40 ವರ್ಷ ವಯಸ್ಸಾಗಲಿದ್ದು, ಆ ನಂತರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆಯಿದೆ. ಅವರು ನಿವೃತ್ತಿಯಾಗುವಷ್ಟರಲ್ಲಿ ತಮ್ಮ ವಯಸ್ಸಿಗಿಂತಲೂ ಹೆಚ್ಚು ಏಕದಿನ ಶತಕಗಳನ್ನು ಗಳಿಸಿ ವೃತ್ತಿಜೀವನವನ್ನು ಮುಗಿಸಬೇಕು. ಆದ್ದರಿಂದಲೇ ರೋಹಿತ್ ಈ ಪಂದ್ಯದಲ್ಲಿ ಶತಕ ಪೂರ್ಣಗೊಳಿಸಬೇಕಿತ್ತು ಎಂದು ಸುನೀಲ್ ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ವಯಸ್ಸಿಗಿಂತ ಹೆಚ್ಚಿನ ಏಕದಿನ ಶತಕಗಳಿರಬೇಕು'

'ರೋಹಿತ್ ನಿವೃತ್ತಿಯಾಗುವ ಹೊತ್ತಿಗೆ ಅವರ ವಯಸ್ಸಿಗಿಂತ ಹೆಚ್ಚಿನ ಏಕದಿನ ಶತಕಗಳು (40ಕ್ಕಿಂತ ಹೆಚ್ಚು) ಅವರ ಖಾತೆಯಲ್ಲಿರಬೇಕು ಎಂಬುದು ನನ್ನ ವೈಯಕ್ತಿಕ ಆಸೆ. ಮೂರನೇ ಏಕದಿನ ಪಂದ್ಯದಲ್ಲೇ ಶತಕ ಗಳಿಸಿದ್ದರೆ ತಮ್ಮ 36ನೇ ಶತಕದೊಂದಿಗೆ ಅವರು ಈ ಸಾಧನೆಗೆ ಮತ್ತಷ್ಟು ಹತ್ತಿರವಾಗುತ್ತಿದ್ದರು,' ಎಂದು ಹೇಳಿದ್ದಾರೆ.

'ಒಬ್ಬ ಆಟಗಾರ ನಿವೃತ್ತಿಯಾದಾಗ ಅವರ ವಯಸ್ಸಿಗಿಂತ ಶತಕಗಳ ಸಂಖ್ಯೆ ಹೆಚ್ಚಿರುವುದು ಅವರ ಸುದೀರ್ಘ ವೃತ್ತಿಜೀವನದ ಉನ್ನತ ಗುಣಮಟ್ಟವನ್ನು ತೋರಿಸುತ್ತದೆ. ನನ್ನ ನಿವೃತ್ತಿಯ ಸಮಯದಲ್ಲಿ (38 ವರ್ಷ) ನನಗೂ ನನ್ನ ವಯಸ್ಸಿಗೆ ಸಮನಾಗಿ ಟೆಸ್ಟ್ ಶತಕಗಳನ್ನು ಗಳಿಸುವ ಆಸೆಯಿತ್ತು. ಆದರೆ ಮೂರು ಬಾರಿ 90 ರನ್‌ಗಳ ಆಸುಪಾಸಿನಲ್ಲೇ ಔಟ್ ಆಗಿ ಅದು ಸಾಧ್ಯವಾಗಲಿಲ್ಲ,' ಎಂದು ನೆನಪಿಸಿಕೊಂಡಿದ್ದಾರೆ.

'ರೋಹಿತ್ ಶರ್ಮಾ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ'

'2023ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಆಡುತ್ತಿದ್ದ ಶೈಲಿಗೆ ಹೋಲಿಸಿದರೆ, ಈ ದಿನಗಳಲ್ಲಿ ಅವರ ಬ್ಯಾಟಿಂಗ್ ಶೈಲಿಯಲ್ಲಿ ಸ್ವಲ್ಪ ಬದಲಾವಣೆಯನ್ನು ಕಾಣುತ್ತಿದ್ದೇನೆ. ಮೂರು ವರ್ಷಗಳ ಹಿಂದಿನ ರೋಹಿತ್ ಅತ್ಯಂತ ಭಯಾನಕವಾಗಿದ್ದರು ಮತ್ತು ಮೊದಲ ಎಸೆತದಿಂದಲೇ ಎದುರಾಳಿಗಳ ಮೇಲೆ ದಂಡಯಾತ್ರೆ ನಡೆಸುತ್ತಿದ್ದರು. ಆದರೆ, ಇಂದಿನ ರೋಹಿತ್ ತಮ್ಮ ವಿಕೆಟ್‌‌ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಅವರು ಕೇವಲ 30-40 ರನ್ ಗಳಿಸುವ ಬ್ಯಾಟರ್ ಅಲ್ಲ, ಬದಲಿಗೆ ಭರ್ಜರಿ ಶತಕ ಬಾರಿಸುವ ಆಟಗಾರ. ಈ ಪಂದ್ಯದಲ್ಲಿ ಶತಕ ತಪ್ಪಿದ್ದರೂ, ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದರು,' ಎಂದು ಗವಾಸ್ಕರ್ ತಿಳಿಸಿದ್ದಾರೆ.

ಒಬ್ಬ ಬ್ಯಾಟರ್ ಆಗಿ ಶತಕ ಗಳಿಸುವುದು ಕೂಡ ತಮ್ಮ ಕರ್ತವ್ಯ ಎಂಬುದನ್ನು ಅವರು ಸಾಬೀತುಪಡಿಸುತ್ತಿದ್ದಾರೆ ಮತ್ತು ಅವರು ದೊಡ್ಡ ಮೊತ್ತ ಗಳಿಸಿದರೆ, ಕೇವಲ 70-80 ಎಸೆತಗಳಲ್ಲೇ ಶತಕ ಪೂರೈಸುತ್ತಾರೆ. 50 ಓವರ್‌ಗಳ ಪಂದ್ಯದಲ್ಲಿ ಇದು ಅತ್ಯುತ್ತಮ ರನ್ ರೇಟ್ ಆಗಿರುವುದರಿಂದ ತಂಡಕ್ಕೂ ಸಹಕಾರಿ, ಜೊತೆಗೆ ನಿಧಾನಗತಿಯ ಬ್ಯಾಟಿಂಗ್ ಎಂದು ಟೀಕಿಸುವ ಸೋಶಿಯಲ್ ಮೀಡಿಯಾ ಟೀಕಾಕಾರರನ್ನು ಬಾಯಿ ಮುಚ್ಚಿಸುತ್ತದೆ ಎಂದು ಗವಾಸ್ಕರ್ ಹೇಳಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಕಣಕ್ಕೆ ಇಳಿದ ಆರಂಭದಿಂದಲೇ ಎದುರಾಳಿ ಬೌಲರ್‌ಗಳ ದಂಡಯಾತ್ರೆ ನಡೆಸುವುದೇ ಹಿಟ್‌ ಮಾನ್‌ ಕೆಲಸ.. ಈಗಲೂ ಕೂಡ ಅವರು ಅದನ್ನೇ ಮುಂದುವರೆಸಿದ್ದಾರೆ. ಆದರೆ ಶತಕದ ಸಮೀಪಕ್ಕೆ ಬಂದು ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಕಡೆ ನಡೆದಿರುವುದು ಗವಾಸ್ಕರ್ ಹಾಗೂ ಅಭಿಮಾನಿಗಳಿಗೆ ಬೇಸರ ತಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+