Steve Smith: ಏಕದಿನ ಕ್ರಿಕೆಟ್‌ಗೆ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ವಿದಾಯ
Steve Smith: ಚಾಂಪಿಯನ್ಸ್ ಟ್ರೋಫಿ 2025 ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಸೋಲನುಭವಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
ನಿನ್ನೆ (ಮಾರ್ಚ್ 05) ನಡೆದ ಚಾಂಪಿಯನಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಸೋಲನುಭವಿಸಿತ್ತು. ಇದರ ಬೆನ್ನಲ್ಲೆ ಇದೀಗ ಸ್ಟೀವ್ ಸ್ಮೀತ್ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಪಂದ್ಯದ ನಂತರ ಸ್ಮಿತ್ ಅವರು ಏಕದಿನ ಕ್ರಿಕೆಟ್‌ನಿಂದ ತಕ್ಷಣವೇ ನಿವೃತ್ತರಾಗುವುದಾಗಿ ತಂಡದ ಆಟಗಾರರಿಗೆ ತಿಳಿಸಿದರು.

ಸ್ಟೀವ್ ಸ್ಮಿಟರ್ ಟೆಸ್ಟ್ ಮತ್ತು ಟಿ 20 ಅಂತಾರರಾಷ್ಟ್ರೀಯ ಪಂದ್ಯಗಳನ್ನು ಆಡಲಿದ್ದಾರೆ. ಸ್ಮಿತ್ ಆಸ್ಟ್ರೇಲಿಯಾದ ಅತ್ಯಂತ ಆಕ್ರಮಣಕಾರಿ ಕ್ರಿಕೆಟ್ ಆಟಗಾರರಾಗಿದ್ದು, ಇದೀಗ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಲೆಗ್ ಸ್ಪಿನ್ ಆಲ್ರೌಂಡರ್ ಆಗಿ 2010ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾದಾರ್ಪಣೆ ಮಾಡಿದ ಬಳಿಕ ಸ್ಮಿತ್ 170 ಏಕದಿನ ಪಂದ್ಯಗಳಲ್ಲಿ 43.28 ಸರಾಸರಿಯಲ್ಲಿ 5,800 ರನ್ ಕಲೆಹಾಕಿದ್ದಾರೆ ಮತ್ತು 12 ಶತಕಗಳು ಮತ್ತು 35 ಅರ್ಧಶತಕಗಳು ಮತ್ತು 34.67 ಸರಾಸರಿಯಲ್ಲಿ 28 ವಿಕೆಟ್‌ಳನ್ನು ಪಡೆದ ಕೀರ್ತಿ ಇರದ್ದಾಗಿದೆ.
ಆಸ್ಟ್ರೇಲಿಯಾದ 2015 ಮತ್ತು 2023 ಐಸಿಸಿ ವಿಶ್ವಕಪ್ ವಿಜೇತ ತಂಡಗಳ ಭಾಗ ಆಗಿದ್ದ ಸ್ಮಿತ್ ಅವರು 2015ರಲ್ಲಿ ಏಕದಿನ ಕ್ರಿಕೆಟ್ ನಾಯಕರಾದರು. ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಅನುಭವಿ ಆಟಗಾರ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು.
ಸ್ವೀವ್ ಸ್ಮಿತ್ ಅವರು 2015 ಮತ್ತು 2021ರಲ್ಲಿ ಆಸ್ಟ್ರೇಲಿಯನ್ ಪುರುಷರ ಏಕದಿನ ಕ್ರಿಕೆಟ್ ವರ್ಷದ ಆಟಗಾರ ಪ್ರಶಸ್ತಿ ಲಭಿಸಿದೆ. 2015ರಲ್ಲಿ ಐಸಿಸಿ ಪುರುಷರ ಏಕದಿನ ಕ್ರಿಕೆಟ್‌ನಲ್ಲಿ ತಂಡದ ಸದಸ್ಯರಾಗಿದ್ದರು. ಇದೀಗ ನಿನ್ನೆ ಟೀಂ ಇಂಡಿಯಾ ವಿರುದ್ಧ ನಡೆದ ಚಾಂಪಿಯನಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ್ ಮಾಡಿದರು.
ಈ ಮೂಲಕ ಟ್ಟೀವ್ ಸ್ಮಿತ್ ಅವರು 79 ರನ್ ಸಿಡಿಸಿದರು. ಆದರೂ ಕೂಡ ಟೀಂ ಇಂಡಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಸೋಲನುಭವಿಸಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 264 ರನ್‌ಗಳಿಗೆ ಭಾರತದ ಬೌಲರ್‌ಗಳಿಗೆ ಎಲ್ಲಾ ವಿಕೆಟ್‌ಗಳನ್ನು ಒಪ್ಪಿಸಿತು.
ಮೊಹಮ್ಮದ್ ಶಮಿ 3 ವಿಕೆಟ್, ವರುಣ್ ಚಕ್ರವರ್ತಿ ಹಾಗೂ ಜಡೇಜಾ ತಲಾ 2 ವಿಕೆಟ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದು ಆಸ್ಟ್ರೇಲಿಯಾವನ್ನು 264 ರನ್‌ಗಳಿಗೆ ಕಟ್ಟಿಹಾಕಿ. ಈ ಗುರಿಯನ್ನು ಭಾರತವು ಸುಲಭವಾಗಿ ತಲುಪಿ ಗೆದ್ದು ಬೀಗಿದೆ.
ಟೀಂ ಇಂಡಿಯಾವು 48.1 ಓವರ್‌ಗಳಲ್ಲಿ 267 ರನ್ ಚಚ್ಚುವ ಮೂಲಕ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಭಾರತವು 2023ರ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಸೋಲಿನ ಸೇಡು ತೀರಿಸಿಕೊಂಡಿತು.
ಭಾರತದ ಪರ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 84 ರನ್, ಶ್ರೇಯಸ್ ಅಯ್ಯರ್ 45, ಕೆಎಲ್ ರಾಹುಲ್ ಔಟಾಗದೇ 42 ರನ್, ಹಾರ್ದಿಕ್ ಪಾಂಡ್ಯ 28 ರನ್ ಚಚ್ಚುವ ಮೂಲಕ ಸೆಮಿಫೈನಲ್‌ನಲ್ಲಿ ಆಸಿಸ್ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗಿದೆ.
-
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ಸೂರ್ಯಕುಮಾರ್ ಯಾದವ್ ಹಳೆಯ ಫೋಟೋ ವೈರಲ್: ಪೆಟ್ರೋಲ್ ಬಂಕ್ನಲ್ಲಿ ನಿಂತಿದ್ದ ಆ ಹುಡುಗ ಇಂದು ವಿಶ್ವಕಪ್ ವಿಜೇತ ನಾಯಕ! -
ಕ್ರೀಡಾಂಗಣದಲ್ಲೇ ಇಶಾನ್ ಕಿಶಾನ್ಗೆ ಮುತ್ತಿಟ್ಟ ಅದಿತಿ ಹುಂಡಿಯಾ ಯಾರು? ಅಭಿಷೇಕ್ ಶರ್ಮಾ ಸೋದರಿ ನಂಟು ರಿವೀಲ್ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್ -
ವಿರಾಟ್ ಕೊಹ್ಲಿಯ ದಶಕದ ಹಳೆಯ ದಾಖಲೆ ಅಳಿಸಿದ ಸಂಜು ಸ್ಯಾಮ್ಸನ್ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ












Click it and Unblock the Notifications