India vs Sri Lanka: ಅಟಪಟ್ಟು, ಸಮರವಿಕ್ರಮ ಅಬ್ಬರ; ಭಾರತವನ್ನು ಸೋಲಿಸಿ ಮೊದಲ ಏಷ್ಯಾಕಪ್ ಗೆದ್ದ ಶ್ರೀಲಂಕಾ

ಡಂಬುಲಾದಲ್ಲಿ ನಡೆದ ಮಹಿಳಾ ಏಷ್ಯಾಕಪ್‌ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಇತಿಹಾಸ ನಿರ್ಮಿಸಿದೆ. 7 ಬಾರಿ ಏಷ್ಯಾಕಪ್ ಚಾಂಪಿಯನ್ ಭಾರತವನ್ನು ಮಣಿಸಿದ ಶ್ರೀಲಂಕಾ ಚೊಚ್ಚಲ ಮಹಿಳಾ ಏಷ್ಯಾಕಪ್ ಗೆದ್ದು ಬೀಗಿದೆ.

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸ್ಮೃತಿ ಮಂಧಾನ, ರಿಚಾ ಘೋಷ್ ಜೆಮಿಮಾ ರೋಡ್ರಿಗಸ್‌ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 165 ರನ್ ಕಲೆಹಾಕಿತು.

Sri Lanka Triumphs Over India for First Women s Asia Cup Victory

ಈ ಸವಾಲಿನ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ 18.4 ಓವರ್ ಗಳಲ್ಲೇ 2 ವಿಕೆಟ್ ಕಳೆದುಕೊಂಡು 167 ರನ್ ಗಳಿಸುವ ಮೂಲಕ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಪ್ ಗೆಲ್ಲುವ ಕನಸು ನನಸು ಮಾಡಿಕೊಂಡಿತು.

ಸ್ಮೃತಿ ಮಂಧಾನ, ರಿಚಾ ಘೋಷ್ ಆಸರೆ

ಸ್ಮೃತಿ ಮಂಧಾನ 47 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್ ಗಳಿಸಿದರು. ಜೆಮಿಮಾ ರೋಡ್ರಿಗಸ್ 16 ಎಸೆತಗಳಲ್ಲಿ 29 ರನ್ ಗಳಿಸಿದರೆ, ರಿಚಾ ಘೋಷ್ 14 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿದರು.

ಶ್ರೀಲಂಕಾ ಪರ ಕವಿಶಾ ದಿಹಾರಿ 2 ವಿಕೆಟ್ ಪಡೆದರೆ, ಪ್ರಬೋದನಿ, ಸಚಿನಿ ನಿನಂಶಾಲ ಮತ್ತು ಚಾಮರಿ ಅಟಪಟ್ಟು ತಲಾ ಒಂದು ವಿಕೆಟ್ ಪಡೆದರು.

ಚಾಮರಿ ಅಟಪಟ್ಟು, ಸಮರವಿಕ್ರಮ ಅಬ್ಬರ

166 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಆರಂಭದಲ್ಲೇ ಆಘಾತ ಸಿಕ್ಕಿತು. ವಿಶ್ಮಿ ಗುಣರತ್ನೆ 1 ರನ್ ಗಳಿಸಿದ್ದಾಗ ರನೌಟ್ ಆದರು. ಆದರೆ ಬಳಿಕ ಜೊತೆಯಾದ ಚಾಮರಿ ಅಟಪಟ್ಟು ಮತ್ತು ಹರ್ಷಿತಾ ಸಮರವಿಕ್ರಮ ಭಾರತದ ಬೌಲರ್ ಗಳ ಬೆವರಿಳಿಸಿದರು. ಅಟಪಟ್ಟು 43 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್ ಸಹಿತ 61 ರನ್ ಗಳಿಸಿದರೆ, ಸಮರವಿಕ್ರಮ 51 ಎಸೆತಗಳಲ್ಲಿ 6 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 69 ರನ್ ಗಳಿಸಿದರು. ಕವಿಶಾ ದಿಹಾರಿ ಕೂಡ 16 ಎಸೆತಗಳಲ್ಲಿ 1 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 30 ರನ್ ಗಳಿಸಿ ಗೆಲುವನ್ನು ಸುಲಭವಾಗಿಸಿದರು.

ಈ ಗೆಲುವಿನ ಮೂಲಕ ಶ್ರೀಲಂಕಾ ಮಹಿಳಾ ತಂಡದ ಏಷ್ಯಾಕಪ್ ಗೆಲ್ಲುವ 20 ವರ್ಷಗಳ ಕನಸು ನನಸಾಗಿದೆ. 9 ಬಾರಿ ಏಷ್ಯಾಕಪ್‌ ಪಂದ್ಯಾವಳಿ ನಡೆದಿದ್ದು, ಭಾರತ 7 ಬಾರಿ ಪ್ರಶಸ್ತಿ ಗೆದ್ದಿದ್ದು, ಬಾಂಗ್ಲಾದೇಶ ಒಮ್ಮೆ ಪ್ರಶಸ್ತಿ ಗೆದ್ದಿತ್ತು, 9ನೇ ಪಂದ್ಯಾವಳಿಯಲ್ಲಿ ಶ್ರೀಲಂಕಾ ಚಾಂಪಿಯನ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+