SRH vs GT: ಪ್ಲೇಆಫ್‌ಗೆ ಅರ್ಹತೆ ಪಡೆದ ಎಸ್‌ಆರ್‌ಎಚ್; ಒಂದು ಸ್ಥಾನಕ್ಕೆ ಆರ್‌ಸಿಬಿ vs ಸಿಎಸ್‌ಕೆ ಹಣಾಹಣಿ
ಹೈದರಾಬಾದ್‌ನಲ್ಲಿ ಭಾರಿ ಮಳೆಯಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ರದ್ದಾಗಿದೆ. ಗುಜರಾತ್ ಟೈಟಾನ್ಸ್ 8ನೇ ಸ್ಥಾನದಲ್ಲಿ ತಮ್ಮ ಅಭಿಯಾನ ಮುಗಿಸಿದೆ.
ಸನ್‌ರೈಸರ್ಸ್ ಹೈದರಾಬಾದ್ ಕೆಕೆಆರ್ ಮತ್ತು ರಾಜಸ್ಥಾನ ರಾಯಲ್ಸ್ ಬಳಿಕ ಮೂರನೇ ತಂಡವಾಗಿ ಪ್ಲೇಆಫ್ ತಲುಪಿದೆ. 13 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 14 ಅಂಕ ಪಡೆದಿದ್ದ ಸನ್‌ರೈಸರ್ಸ್ ಹೈದರಾಬಾದ್ ಇಂದು ಪಂದ್ಯ ರದ್ದಾದ ಬಳಿಕ ಒಂದು ಅಂಕ ಪಡೆದು 15 ಅಂಕಗಳೊಂದಿಗೆ ಪ್ಲೇ ಆಫ್ ಪ್ರವೇಶಿಸಿದೆ.

ಪ್ಲೇ ಆಫ್ ತಲುಪಲು ಇನ್ನೊಂದು ಸ್ಥಾನಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನೇರ ಹಣಾಹಣಿ ನಡೆಯಲಿದೆ.
ಪಂದ್ಯಕ್ಕೆ ಆಸ್ಪದ ಕೊಡದ ಮಳೆ
ಸಂಜೆಯಿಂದಲೇ ಹೈದರಾಬಾದ್‌ನಲ್ಲಿ ವ್ಯಾಪಕ ಮಳೆಯಾಗಿತ್ತು, 8 ಗಂಟೆ ವೇಳೆಗೆ ಮಳೆ ಬಿಡುವು ಕೊಟ್ಟಿತ್ತು, ಟಾಸ್‌ಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುವಾಗಲೇ ಮತ್ತೆ ಮಳೆ ಶುರುವಾಯಿತು, ಬಳಿಕ ಮಳೆ ಬಿಡುವು ಕೊಡಲೇ ಇಲ್ಲ.
10 ಗಂಟೆಯವರೆಗೂ ಮಳೆ ನಿಲ್ಲುತ್ತದೆ ಎಂದು ಕಾಯಲಾಯಿತು ಆದರೂ ಮಳೆ ಕಡಿಮೆಯಾಗದ ಕಾರಣ ಅಂಪೈರ್ ಗಳು ಪಂದ್ಯವನ್ನು ರದ್ದು ಮಾಡಲು ನಿರ್ಧರಿಸಿದರು. ಈ ಮೂಲಕ ಎರಡೂ ತಂಡಗಳಿಗೂ ಒಂದೊಂದು ಅಂಕಗಳನ್ನು ನೀಡಲಾಯಿತು.
ಸನ್‌ರೈಸರ್ಸ್ ಹೈದರಾಬಾದ್ ಮುಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣೆಸಲಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಅವಕಾಶ ಕೂಡ ಇದೆ. ಆದರೆ ರಾಜಸ್ಥಾನ ರಾಯಲ್ಸ್ ಮುಂದಿನ ಪಂದ್ಯದಲ್ಲಿ ಸೋತರೆ ಮಾತ್ರ ಎಸ್‌ಆರ್ ಎಚ್‌ಗೆ ಎರಡನೇ ಸ್ಥಾನಕ್ಕೇರಲಿ ಅವಕಾಶ ಇರಲಿದೆ.
ಈಗ ಒಂದು ಸ್ಥಾನಕ್ಕೆ ಎರಡು ತಂಡಗಳು ಸ್ಪರ್ಧೆ ಮಾಡುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎರಡಲ್ಲಿ ಒಂದು ತಂಡಕ್ಕೆ ಮಾತ್ರ ಈಗ ಪ್ಲೇ ಆಫ್ ತಲುಪಲು ಅವಕಾಶ ಇದೆ. ಮೇ 18ರಂದು ಎರಡೂ ತಂಡಗಳು ಮುಖಾಮುಖಿಯಾಗಲಿದ್ದು, ದೊಡ್ಡ ಅಂತರದಲ್ಲಿ ಗೆದ್ದರೆ ಆರ್ ಸಿಬಿ ಪ್ಲೇ ಆಫ್ ತಲುಪಲಿದೆ. ಮಳೆಯಿಂದ ಪಂದ್ಯ ರದ್ದಾದರೆ ಸಿಎಸ್‌ಕೆ ಪ್ಲೇ ಆಫ್ ಪ್ರವೇಶಿಸಲಿದೆ.












Click it and Unblock the Notifications