Get Updates
Get notified of breaking news, exclusive insights, and must-see stories!

SRH IPL 2024: ಸನ್‌ರೈಸರ್ಸ್‌ ತಂಡದ ಬೌಲಿಂಗ್ ವಿಭಾಗಕ್ಕೆ ಪೆಟ್ಟು; ಟೂರ್ನಿಯಿಂದ ಹೊರ ನಡೆದ ಸ್ಪಿನ್‌ ಬೌಲರ್‌

ಐಪಿಎಲ್‌ 2024ರಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಗಾಯದಿಂದ ಬಳಲುತ್ತಿರುವ ಸ್ಟಾರ್‌ ಸ್ಪಿನ್ ಬೌಲರ್‌ ಒಬ್ಬರು ಪ್ರಸಕ್ತ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ. ಇದರಿಂದ ಸನ್‌ ತಂಡದ ಸ್ಪಿನ್ ವಿಭಾಗಕ್ಕೆ ಪೆಟ್ಟು ಬೀಳಲಿದೆ.

ಸನ್‌ರೈಸರ್ಸ್ ಹೈದರಾಬಾದ್ ಈ ವರ್ಷ ಹರಾಜಿನಲ್ಲಿ ಪಡೆದುಕೊಂಡ ಸ್ಟಾರ್‌ ಆಟಗಾರ ಲೆಗ್‌ಸ್ಪಿನ್ನರ್ ವನಿಂದು ಹಸರಂಗಾ. ಇತ್ತೀಚಿಗೆ ಅವರು ಗಾಯಕ್ಕೆ ತುತ್ತಾಗಿದ್ದರು. ಅವರನ್ನು ದುಬೈನಲ್ಲಿ ಗಾಯದ ತಪಾಸಣೆ ನಡೆಸಲಾಗಿದೆ ಎಂಬ ಮಾಹಿತಿ ಹೊರ ಬಂದಿದ್ದು, ಎಡಗಾಲಿನ ಹಿಮ್ಮಡಿಯಲ್ಲಿ ನಿರಂತರ ನೋವಿನಿಂದ ಬಳಲುತ್ತಿರುವ ಇವರು ಐಪಿಎಲ್ 2024 ರಿಂದ ಹೊರಗುಳಿದಿದ್ದಾರೆ.

SRH IPL 2024 A Blow to the Bowling Department of the Sunrisers Team A Spin Bowler Out of the Tournament

ಸನ್‌ ತಂಡಕ್ಕೆ ಪೆಟ್ಟು

ಡಿಸೆಂಬರ್ 2023 ರಲ್ಲಿ ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ ವನಿಂದು ಹಸರಂಗಾ ಅವರನ್ನು ಸನ್‌ರೈಸರ್ಸ್ ಹೈದರಾಬಾದ್‌ 1.50 ಕೋಟಿ ರೂ ಮೂಲ ಬೆಲೆ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಇದಕ್ಕೂ ಮುನ್ನ ಅವರು ಆರ್‌ಸಿಬಿ ಪರ ಐಪಿಎಲ್‌ನಲ್ಲಿ ಆಡಿದ್ದರು. ಹಸರಂಗ ಇನ್ನೂ ಸನ್ ರೈಸರ್ಸ್ ತಂಡವನ್ನು ಸೇರಿಕೊಂಡಿರಲಿಲ್ಲ. ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಮಾಹಿತಿಯಂತೆ ಇವರ ಅಲಭ್ಯತತೆಯ ಬಗ್ಗೆ ಬಿಸಿಸಿಐಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಎಸ್‌ಎಲ್‌ಸಿ ವೈದ್ಯಕೀಯ ಸಿಬ್ಬಂದಿ ಹಸರಂಗ ಅವರ ಹಿಮ್ಮಡಿ ಗಾಯವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರು. ಐಪಿಎಲ್‌ನಲ್ಲಿ ಆಡಲು ಎಸ್‌ಎಲ್‌ಸಿಯಿಂದ ಅನುಮತಿ ಪಡೆಯುವ ಮೊದಲು ಹಸರಂಗ ಅವರು ತಜ್ಞರ ಸಮಾಲೋಚನೆಗಾಗಿ ವಿದೇಶ ಪ್ರವಾಸ ಮಾಡಬೇಕಾಗಿತ್ತು. ಹಸರಂಗ ಕಳೆದ ತಿಂಗಳು ಮಾರ್ಚ್‌ನಲ್ಲಿ ಶ್ರೀಲಂಕಾದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಸರಣಿಯಲ್ಲಿ ಕಣಕ್ಕೆ ಇಳಿದಿದ್ದರು. ಇವರು ಲಂಕಾ ಪರ ಏಕದಿನ ಮತ್ತು ಟಿ-20 ಸರಣಿಗಳಲ್ಲಿ ಬೌಲಿಂಗ್ ಮಾಡಿದ್ದರು.

ಸನ್‌ರೈಸರ್ಸ್ ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ ಅವರು ಗುರುವಾರ ದುಬೈನಲ್ಲಿರುವ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದು, ನಂತರ ಅವರು ತಂಡದಿಂದ ಹೊರಗುಳಿಯಲಿದ್ದಾರೆ ಸುದ್ದಿ ಬೆಳಕಿಗೆ ಬಂದಿದೆ ಎಂದು ಹೇಳಿದರು.

SRH IPL 2024 A Blow to the Bowling Department of the Sunrisers Team A Spin Bowler Out of the Tournament

ಹಸರಂಗ್‌ಗೆ ರಿಪ್ಲೇಸ್‌ಮೆಂಟ್‌?

ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಸ್ಪಿನ್‌ ವಿಭಾಗವನ್ನು ಬಲಪಡಿಸಿಕೊಳ್ಳಲು ಈಗ ಸ್ಪಿನ್ ಬೌಲರ್‌ರನ್ನು ಹುಡುಕುವ ಅವಶ್ಯಕತೆ ಇದೆ. ತಂಡ ಇನ್ನಷ್ಟೇ ಸ್ಟಾರ್‌ ಸ್ಪಿನ್ ಬೌಲರ್‌ ವನಿಂದು ಹಸರಂಗ ಅವರ ಬದಲಿ ಆಟಗಾರನನ್ನು ಹೆಸರಿಸಬೇಕಿದೆ.

2022ರ ಐಪಿಎಲ್ ಹರಾಜಿನಲ್ಲಿ ಬೆಂಗಳೂರು 10.75 ಕೋಟಿ ರೂ. ಅವರು 2022 ರಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಇವರು 7.54 ರ ಎಕನಾಮಿಯೊಂದಿಗೆ 26 ವಿಕೆಟ್‌ಗಳನ್ನು ಪಡೆದರು. ಆದರೆ 2023 ರಲ್ಲಿ ಅವರು ಕೇವಲ ಎಂಟು ಪಂದ್ಯಗಳನ್ನು ಆಡಿ 8.9 ರ ಎಕನಾಮಿಯೊಂದಿಗೆ ಒಂಬತ್ತು ವಿಕೆಟ್‌ಗಳನ್ನು ಪಡೆದರು.

ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಪ್ರಸಕ್ತ ಋತುವಿನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಈಗಾಗಲೇ ಆಡಿದ 4 ಪಂದ್ಯಗಳಲ್ಲಿ 2 ಜಯ, 2 ಸೋಲುಗಳನ್ನು ಕಂಡಿದ್ದು, ನಾಲ್ಕು ಅಂಕವನ್ನು ಕಲೆ ಹಾಕಿದೆ. ಅಲ್ಲದೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಸನ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆಯನ್ನು ಬರೆದಿದೆ. ಪ್ರಸಕ್ತ ವರ್ಷದ ಫಾರ್ಮ್‌ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಲ್ಲದೆ ಬಹು ವರ್ಷಗಳಿಂದ ಕಾಡುತ್ತಿರುವ ಪ್ರಶಸ್ತಿ ಬರವನ್ನು ಈ ಬಾರಿ ನೀಗಿಸುವ ಆಶಯ ಹೊಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+