ಓಮಿಕ್ರಾನ್ ಭೀತಿ; ಕ್ರೀಡಾಪಟುಗಳಿಗೆ ಹೊಸ ಮಾರ್ಗಸೂಚಿ ಪ್ರಕಟ

ನವದೆಹಲಿ, ಜನವರಿ 07: ಕೊರೊನಾವೈರಸ್ ಹೊಸ ರೂಪಾಂತರಿ ತಳಿ ಓಮಿಕ್ರಾನ್‌ನಿಂದಾಗಿ ಸೋಂಕು ಪ್ರಕರಣಗಳ ತೀವ್ರ ಏರಿಕೆಯನ್ನು ಎದುರಿಸಲು ಭಾರತೀಯ ಕ್ರೀಡಾ ಪ್ರಾಧಿಕಾರವು ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನ(ಎಸ್‌ಒಪಿ) ಯನ್ನು ತಂದಿದೆ. ಈ ಕ್ರಮಗಳನ್ನು ವಿವಿಧ ರಾಷ್ಟ್ರೀಯ ಉತ್ಕೃಷ್ಟತೆಯ ಕೇಂದ್ರಗಳು (ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ - ಎನ್‌ಸಿಒಇ) ಹಾಗೂ ನಡೆಯುತ್ತಿರುವ ರಾಷ್ಟ್ರೀಯ ತರಬೇತಿ ಶಿಬಿರಗಳಲ್ಲಿ ಕಟ್ಟುನಿಟ್ಟಾಗಿ ಅಳವಡಿಸಬೇಕಾಗುತ್ತದೆ.

ತರಬೇತಿ ಕೇಂದ್ರಗಳಿಗೆ ಆಗಮಿಸಿದ ನಂತರ, ಎಲ್ಲಾ ಕ್ರೀಡಾಪಟುಗಳು ಕಡ್ಡಾಯವಾದ ರ್‍ಯಾಪಿಡ್ ಆಂಟಿಜೆನ್ ಪರೀಕ್ಷೆಗೆ (ಆರ್‌ ಎ ಟಿ) ಒಳಗಾಗುತ್ತಾರೆ. ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಫಲಿತಾಂಶ ಬಂದರೆ, ಅವರು ಸೇರಿದ ಆರನೇ ದಿನದವರೆಗೆ ಕ್ವಾರಂಟೈನ್ ನಲ್ಲಿದ್ದು ಪ್ರತ್ಯೇಕವಾಗಿ ಊಟ ಮತ್ತು ತರಬೇತಿ ಮಾಡುತ್ತಾರೆ. ಆರ್‌ಎಟಿ ಯನ್ನು 5 ನೇ ದಿನದಂದು ಪುನರಾವರ್ತಿಸಲಾಗುತ್ತದೆ. ಧೃಡಪಟ್ಟ ಫಲಿತಾಂಶವನ್ನು ಪಡೆದವರು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗುತ್ತಾರೆ ಮತ್ತು ಅವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತದೆ. ಪರೀಕ್ಷೆಯಲ್ಲಿ ನೆಗಟಿವ್ ಫಲಿತಾಂಶ ಬಂದ ಕ್ರೀಡಾಪಟುಗಳು ಸಾಮಾನ್ಯ ತರಬೇತಿಯನ್ನು ಮುಂದುವರಿಸುತ್ತಾರೆ.

ಮೈಕ್ರೋ ಬಯೋ ಬಬಲ್
ಶಿಬಿರಗಳಾದ್ಯಂತ ಕೋವಿಡ್ ಪಾಸಿಟಿವ್ ಅಥವಾ ರೋಗಲಕ್ಷಣದ ಅಥ್ಲೀಟ್‌ಗಳಿಗೆ ಸರಿಯಾದ ಪ್ರತ್ಯೇಕ ಸೌಲಭ್ಯಗಳನ್ನು ನಿಗದಿಪಡಿಸಲಾಗಿದೆ ಮತ್ತು ಸೌಲಭ್ಯಗಳನ್ನು ದಿನಕ್ಕೆ ಎರಡು ಬಾರಿ ಸ್ಯಾನಿಟೈಸ್ ಮಾಡಲಾಗುತ್ತದೆ. ಮೈಕ್ರೋ ಬಯೋ ಬಬಲ್ ಕೂಡ ಇರುತ್ತದೆ, ಅಲ್ಲಿ ಕ್ರೀಡಾಪಟುಗಳನ್ನು ತರಬೇತಿ ಮತ್ತು ಊಟಕ್ಕಾಗಿ ಸಣ್ಣ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಇತರ ಗುಂಪುಗಳೊಂದಿಗೆ ಸಂವಹನ ನಡೆಸುವುದನ್ನು ತಪ್ಪಿಸಲು ಕ್ರೀಡಾಪಟುಗಳಿಗೆ ಕಟ್ಟುನಿಟ್ಟಾಗಿ ಹೇಳಲಾಗಿದೆ.

Sports Authority of India issues fresh SOPs to combat rising Covid cases

ಪ್ರತಿ 15 ದಿನಗಳಿಗೊಮ್ಮೆ ಎನ್‌ಸಿಒಇನಲ್ಲಿ ಕ್ರೀಡಾಪಟುಗಳು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ವಸತಿ ರಹಿತ ಸಿಬ್ಬಂದಿಗಳ ನಿರ್ದಿಷ್ಟಪಡಿಸದ ಪರೀಕ್ಷೆಯೂ ಇರುತ್ತದೆ. ಆಯಾ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು (ಎನ್‌ಎಸ್‌ಎಫ್‌ಗಳು) ಮತ್ತು ಎಸ್‌ಎಐ ಹೆಚ್‌ಕ್ಯು ಅಧಿಕಾರಿಗಳು ಶಿಫಾರಸು ಮಾಡಿದ ಸ್ಪರ್ಧೆಗಳಲ್ಲಿ ಮಾತ್ರ ಕ್ರೀಡಾಪಟುಗಳು ಭಾಗವಹಿಸಬೇಕೆಂದು ಶಿಫಾರಸು ಮಾಡಲಾಗಿದೆ. ಆಹ್ವಾನಿತ ಪಂದ್ಯಾವಳಿಗಳು ಮತ್ತು ಒಲಿಂಪಿಕ್ಸ್ ಅಲ್ಲದ ಅರ್ಹತಾ ಈವೆಂಟ್‌ಗಳಿಗೆ, ಎನ್‌ಸಿಒಇ ಗಳ ಸಂಬಂಧಿತ ಪ್ರಾದೇಶಿಕ ನಿರ್ದೇಶಕರು (ಆರ್‌ ಡಿ) ಶಿಫಾರಸುಗಳನ್ನು ಮಾಡುತ್ತಾರೆ.

ಆಯಾ ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳು ಆ ನಿರ್ದಿಷ್ಟ ರಾಜ್ಯಗಳಲ್ಲಿ ಈ ವಿಧಾನ (ಎಸ್‌ ಒ ಪಿ) ಗಳ ಬದಲಾಗಿ ಇರುತ್ತವೆ ಎನ್ನುವುದನ್ನು ಸಹ ಗಮನಿಸಬೇಕು. ಆಯಾ ರಾಜ್ಯಗಳ ಕೋವಿಡ್ ಮಾರ್ಗಸೂಚಿ ಅನ್ವಯ ಕ್ರೀಡಾಪಟುಗಳು ಈ ಎಸ್ ಒ ಪಿಯನ್ನು ಪಾಲಿಸುವುದು ಅನಿವಾರ್ಯವಾಗಿದೆ.(ಕ್ರೀಡಾ ಸಚಿವಾಲಯ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+