ಸೋಡಾಗೆ ಹಾಕ್ತಾರೆ ಉಪ್ಪು, ಆರ್‌ಸಿಬಿಗೆ ಈ ಸಾರಿ ಕಪ್ಪು!

ಆರ್‌ಸಿಬಿ ಬೆಂಗಳೂರು ತಂಡ ನಿನ್ನೆ ಗುಜರಾತ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ನಂತರ ಅಭಿಮಾನಿಗಳ ಸಂಭ್ರಮ ಡಬಲ್ ಆಗಿದೆ. ಯಾಕಂದ್ರೆ ಆರ್‌ಸಿಬಿ ಮುಂದಿನ ಹಂತಕ್ಕೆ ಹೋಗಿ ಕಪ್ ಗೆಲ್ಲುವುದು ಕೂಡ ಈ ದಿಗ್ವಿಜಯದಿಂದ ಸಾಧ್ಯವಾಗಿದೆ. ಹೀಗಾಗಿಯೇ ಆರ್‌ಸಿಬಿ ಫ್ಯಾನ್ಸ್ ಮತ್ತೆ ಖುಷಿಯಲ್ಲಿ ಕುಣಿದಾಡಿದ್ದಾರೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಡಿಸೈನ್ ಡಿಸೈನ್ ಪೋಸ್ಟ್ ಹಾಕುತ್ತಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯ ಆರಂಭದಲ್ಲಿ ಇದು ಆರ್‌ಸಿಬಿಯ ಹೊಸ ಅಧ್ಯಾಯ ಅಂತಾ ಹೇಳಿದ್ದರು. ಆರಂಭದಲ್ಲಿ ಆರ್‌ಸಿಬಿ ಸೋಲು ಕಂಡಿದ್ದರೂ, ಈಗ ಕೊಹ್ಲಿ ಮಾತಿನ ರೀತಿಯೇ ಆರ್‌ಸಿಬಿ ತಂಡ ಸಾಲು ಸಾಲು ಗೆಲುವು ಸಾಧಿಸುತ್ತಿದೆ. ಹೀಗಿದ್ದಾಗ ಆರ್‌ಸಿಬಿ ಫ್ಯಾನ್ಸ್ ಇದು ನಿಜವಾದ ಹೊಸ ಅಧ್ಯಾಯ ಅಂತಿದ್ದಾರೆ. ಮತ್ತೊಂದು ಕಡೆ, 'ಸೋಡಾಗೆ ಹಾಕ್ತಾರೆ ಉಪ್ಪು, ಆರ್‌ಸಿಬಿಗೆ ಈ ಸಾರಿ ಕಪ್ಪು!' ಅಂತಾ ಡೈಲಾಗ್ ಕೂಡ ಹೇಳುತ್ತಿದ್ದಾರೆ.

Social Media Went Crazy After Royal Challengers Bengaluru Team Won Against Gujarat Titans

ಈ ರೀತಿ ನಮ್ಮ ಆರ್‌ಸಿಬಿ ತಂಡಕ್ಕೆ ಎಲ್ಲಾ ಕಡೆಯಿಂದ ಕೂಡ ಭಾರಿ ಸಪೋರ್ಟ್ ಸಿಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಪಂದ್ಯದ ವಿಡಿಯೋ ಕ್ಲಿಪ್ ಶೇರ್ ಮಾಡಿಕೊಂಡು ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. 'ಹಾಗೇ ಈ ಸಲ ಕಪ್ ನಮ್ದೆ' ಅಂತಾನೂ ಹೇಳುತ್ತಿದ್ದಾರೆ. ಹಾಗಾದ್ರೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶೇರ್ ಮಾಡುತ್ತಿರುವ ವಿಡಿಯೋಸ್ ಯಾವುವು? ಮುಂದೆ ಓದಿ.

ಆರ್‌ಸಿಬಿ ರಕ್ಷಣೆ ಮಾಡಿದ್ದು ಯಾರು?

ನಿನ್ನೆ ಆರ್‌ಸಿಬಿ ತಂಡವು, ಗುಜರಾತ್ ತಂಡವನ್ನು ಕೇವಲ 147 ರನ್‌ಗಳಿಗೆ ಕಟ್ಟಿ ಹಾಕಿತ್ತು. 148 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಮೊದಲನೇ ವಿಕೆಟ್‌ಗೆ 5.5 ಓವರ್‌ಗಳಲ್ಲಿ 92 ರನ್‌ ಚಚ್ಚಿ ಬಿಸಾಡಿತ್ತು. 92 ರನ್‌ ಆಗುವ ತನಕ ಒಂದೇ ಒಂದು ವಿಕೆಟ್ ಕೂಡ ಆರ್‌ಸಿಬಿ ತಂಡ ಕಳೆದುಕೊಂಡಿರಲಿಲ್ಲ. ಆದ್ರೆ 117 ರನ್ ಆಗುವಷ್ಟರಲ್ಲಿ ಬರೋಬ್ಬರಿ 6 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ಇದಾದ ನಂತರ RCB ಅಭಿಮಾನಿಗಳು ಪರದಾಡಿದರು. ಆಗಲೇ ನೋಡಿ, ನಮ್ಮ ಡಿಕೆ ಅವರು ಅಂದ್ರೆ ದಿನೇಶ್ ಕಾರ್ತಿಕ್ ಅವರು ಭರ್ಜರಿ ಬ್ಯಾಟಿಂಗ್ ಮಾಡಿ ಆರ್‌ಸಿಬಿ ತಂಡವನ್ನು ರಕ್ಷಿಸಿದರು.

ಆರ್‌ಸಿಬಿ ತಂಡಕ್ಕೆ ಹ್ಯಾಟ್ರಿಕ್ ಗೆಲುವು

RCB ತಂಡದ ಸಂಕಷ್ಟದ ಸಮಯದಲ್ಲಿ ರೊಚ್ಚಿಗೆದ್ದ ಡಿಕೆ ಅಂದ್ರೆ ದಿನೇಶ್ ಕಾರ್ತಿಕ್ ಹಾಗೂ ಸ್ವಪ್ನಿಲ್ ಸಿಂಗ್ ಗುಜರಾತ್ ಬೌಲರ್‌ಗಳನ್ನ ಚಚ್ಚಿ ಬಿಸಾಡಿದರು. ಕೇವಲ 13.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿ ಆರ್‌ಸಿಬಿ ಗೆಲ್ಲಲು ಕಾರಣ ಆದರು. ಈ ಮೂಲಕ ಆರ್‌ಸಿಬಿ ತಂಡ ಈಗ ಸತತ 3 ಗೆಲುವು ಕಾಣುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದು, ಮುಂದಿನ ಹಂತ ಸುಲಭವಾಗುತ್ತಿದೆ. ಹಾಗೇ ಬೇರೆ ತಂಡಗಳಿಗೆ ಇದೀಗ ಭಯ ಶುರುವಾಗಿದ್ದು, ಕಪ್‌ಗೆ ಆರ್‌ಸಿಬಿ ಮುತ್ತಿಡುತ್ತಾ? ಅಂತಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+