RCB: ಬಯಸಿದ್ದು ಸಿಕ್ಕಿದೆ ಎಂದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ

ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಭಾನುವಾರ ಮುಕ್ತಾಯಗೊಂಡಿದ್ದ ಐದು ಫ್ರಾಂಚೈಸಿಗಳು ಒಟ್ಟು 18 ಆಟಗಾರರನ್ನು ಖರೀದಿ ಮಾಡಿವೆ. ಹಿರಿಯ ಅನುಭವಿ ಆಟಗಾರ್ತಿಯರಿಗಿಂತ ಯುವ ಕ್ರಿಕೆಟಿಗರ ಮೇಲೆ ಫ್ರಾಂಚೈಸಿಗಳು ಆಸಕ್ತಿ ತೋರಿಸಿದ್ದು ಕೆಲವು ಆಟಗಾರರು ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ ಹರಾಜಾದರು. 2024ರ ಮಹಿಳಾ ಪ್ರೀಮಿಯರ್ ಲೀಗ್ ಚಾಂಪಿಯನ್‌ ಆರ್ ಸಿಬಿ ಹರಾಜಿನಲ್ಲಿ ನಾಲ್ವರು ಆಟಗಾರರನ್ನು ಖರೀದಿ ಮಾಡಿದೆ.

10 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದ ಪ್ರೇಮಾ ರಾವತ್‌ರನ್ನು ಬರೋಬ್ಬರಿ 1.20 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದರೆ, ಜೋಶಿತಾ ವಿಜೆ, ರಾಘ್ವಿ ಬಿಸ್ಟ್ ಮತ್ತು ಜಾಗ್ರವಿ ಪವಾರ್ ಅವರನ್ನು ಮೂಲ ಬೆಲೆ 10 ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿತು. ವಿದೇಶಿ ಆಟಗಾರರು ತಂಡದಲ್ಲಿ ಗರಿಷ್ಠ ಮಿತಿಯಲ್ಲಿರುವ ಕಾರಣ, ವಿದೇಶಿ ಆಟಗಾರರನ್ನು ಖರೀದಿಸಲು ಆರ್ ಸಿಬಿಗೆ ಅವಕಾಶ ಇಲ್ಲದ ಕಾರಣ, ನಾಲ್ವರು ಭಾರತೀಯ ಆಟಗಾರ್ತಿಯರನ್ನು ಖರೀದಿ ಮಾಡಿದೆ.

Smriti mandhana verdict on wpl 2025 auction

2024ರಲ್ಲಿ ಚಾಂಪಿಯನ್ ಆಗಿದ್ದ ಆರ್ ಸಿಬಿ ಬಹುತೇಕ ತಮ್ಮ ಹಳೆಯ ತಂಡವನ್ನೇ ಉಳಿಸಿಕೊಂಡಿದೆ. ಈಗ ನಾಲ್ವರನ್ನು ಖರೀದಿ ಮಾಡಿದ್ದರು ಅವರು ಬೆಂಚ್ ಕಾಯಬೇಕಾಗುತ್ತದೆ, ಯಾರಾದರೂ ಗಾಯಗೊಂಡರೆ ಅಥವಾ ವಿಶ್ರಾಂತಿ ಪಡೆದರೆ ಮಾತ್ರ ಈ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಸ್ಮೃತಿ ಮಂಧಾನ ಸಂತಸ

ಹರಾಜು ಮುಗಿದ ಬಳಿಕ ಮಾತನಾಡಿರುವ ನಾಯಕಿ ಸ್ಮೃತಿ ಮಂಧಾನ, ಹರಾಜಿನಲ್ಲಿ ಆರ್ ಸಿಬಿ ಖರೀದಿ ಮಾಡಿದ ಆಟಗಾರ್ತಿಯರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಹರಾಜಿನಲ್ಲಿ ಆರ್ ಸಿಬಿ ಯಾವ ಲೆಕ್ಕಾಚಾರ ಹಾಕಿಕೊಂಡಿತ್ತು, ಯಾರನ್ನು ಖರೀದಿ ಮಾಡಲು ಉದ್ದೇಶಿಸಿತ್ತು ಎನ್ನುವ ಬಗ್ಗೆ ಮಾತನಾಡಿದ್ದಾರೆ. ತಂಡದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ಈ ಬಾರಿ ಕೂಡ ಚಾಂಪಿಯನ್ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹರಾಜಿನಲ್ಲಿ ನಾವು ಏನು ಮಾಡಿದೆವೋ ಅದು ನನಗೆ ಖುಷಿ ಕೊಟ್ಟಿದೆ. ತಂಡಕ್ಕೆ ಏನು ಬೇಕಾಗಿತ್ತೋ ಅದನ್ನು ನಾವು ಪಡೆದುಕೊಂಡಿದ್ದೇವೆ. ಎಲ್ಲಾ ಸವಾಲುಗಳಿಗೆ ತಂಡ ಸಿದ್ದವಾಗಿದೆ. ಪ್ರೇಮಾ ರಾವತ್, ಜೋಶಿತಾ, ರಾಘ್ವಿ ಬಿಸ್ಟ್ ಮತ್ತು ಜಾಗರವಿ ಪವಾರ್ ದೇಶಿಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ, ಆರ್ ಸಿಬಿ ಡ್ರೆಸ್ಸಿಂಗ್‌ ರೂಂ ಸೇರಲು ಮತ್ತು ಅಭಿಮಾನಿಗಳ ಎದುರು ಉತ್ತಮ ಪ್ರದರ್ಶನ ನೀಡಲು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

2025ರ ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ಆರ್ ಸಿಬಿ ತಂಡ

ಸ್ಮೃತಿ ಮಂಧಾನ (ನಾಯಕಿ), ಸಬ್ಬಿನೇನಿ ಮೇಘನಾ, ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭಾನಾ, ಸೋಫಿ ಡಿವೈನ್, ರೇಣುಕಾ ಸಿಂಗ್, ಸೋಫಿ ಮೊಲಿನೆಕ್ಸ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಕನಿಕಾ ಅಹುಜಾ, ಡ್ಯಾನಿ ವ್ಯಾಟ್ , ರಾಘ್ವಿ ಬಿಸ್ಟ್, ಜಾಗರವಿ ಪವಾರ್, ಪ್ರೇಮಾ ರಾವತ್, ಜೋಶಿತಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+