Smriti Mandhana : ಆರ್‌ಸಿಬಿ ಸೇರಲು ಉತ್ಸುಕಳಾಗಿದ್ದೇನೆ: ನಮಸ್ಕಾರ ಬೆಂಗಳೂರು ಎಂದ ಸ್ಮೃತಿ ಮಂಧಾನ

3.4 ಕೋಟಿಯ ಭಾರೀ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಮೃತಿ ಮಂಧಾನ ಅವರನ್ನು ಖರೀದಿಸಿದೆ.

ಬೆಂಗಳೂರು, ಫೆಬ್ರವರಿ. 14: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಸೇರಿರುವ ಭಾರತದ ಉಪನಾಯಕಿ ಸ್ಮೃತಿ ಮಂಧಾನ ಅವರು ತಂಡವನ್ನು ಸೇರುವ ಖುಷಿ ಹಂಚಿಕೊಂಡಿದ್ದು, ಬೆಂಗಳೂರಿಗರಿಗೆ ನಮಸ್ಕಾರ ಹೇಳಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ, 3.4 ಕೋಟಿಯ ದೊಡ್ಡ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪಾಲಾಗಿದ್ದಾರೆ.

ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನಗಾಗಿ ಎರಡು ಫ್ರಾಂಚೈಸಿಗಳ ನಡುವೆ ಬೃಹತ್ ಬಿಡ್ಡಿಂಗ್ ನಡೆದಿದೆ. ಮೂಲ ಬೆಲೆ 50 ಲಕ್ಷಕ್ಕೆ ಇದ್ದ್ದ್ಉ, ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ಎರಡೂ ಕೂಡ ಸ್ಮೃತಿ ಮಂಧಾನಗಾಗಿ ಬಿಡ್ ಹೆಚ್ಚಿಸುತ್ತಾ ಹೋಗಿದ್ದವು. ಕೊನೆಗೆ ಆರ್‌ಸಿಬಿ 3.4 ಕೋಟಿಗೆ ಬಿಡ್ ಗೆದ್ದಿದೆ.

ಆರ್‌ಸಿಬಿ ತಂಡಕ್ಕೆ ಸೇರುವ ಉತ್ಸಾಹದಲ್ಲಿರುವ ಸ್ಮೃತಿ ಮಂಧಾನ, "ನಾವು ಪುರುಷರ ಹರಾಜನ್ನು ನೋಡುತ್ತಿದ್ದೇವು. ಮಹಿಳೆಯರು ಈ ರೀತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸುತ್ತಿರುವುದು ದೊಡ್ಡ ಖುಷಿಯ ಕ್ಷಣವಾಗಿದೆ. ಆರ್‌ಸಿಬಿ ಒಂದು ಅತ್ಯಾಕರ್ಷಕ ಫ್ರಾಂಚೈಸಿ. ಉತ್ತಮ ಅಭಿಮಾನಿಗಳನ್ನು ಹೊಂದಿದ್ದಾರೆ. ನಾನು ಆರ್‌ಸಿಬಿ ಭಾಗವಾಗಲು ಉತ್ಸುಕಳಾಗಿದ್ದೇನೆ. ನಮಸ್ಕಾರ ಬೆಂಗಳೂರು. ಆರ್‌ಸಿಬಿಯ ಕೆಂಪು ಬಣ್ಣವನ್ನು ಎದುರಿಸಲು ನಿಜವಾಗಿಯೂ ಉತ್ಸುಕನಾಗಿದ್ದೇನೆ. ಎಲ್ಲಾ ಅಭಿಮಾನಿಗಳು, ನಮ್ಮನ್ನು ಬೆಂಬಲಿಸುತ್ತಲೇ ಇರುತ್ತಾರೆ" ಎಂದು ಹೇಳಿದ್ದಾರೆ.

Smriti Mandhana says Namaskara Bengaluru, heres the reason

ಸ್ಮೃತಿ ಮಂಧಾನ ಅವರ ನಮಸ್ಕಾರ ಬೆಂಗಳೂರು ಟ್ವೀಟ್ ಕೂಡ ಭಾರೀ ವೈರಲ್ ಆಗಿದೆ. ಕನ್ನಡಿಗರು ಈಗಾಗಲೇ ಆಕೆಯನ್ನು ಕರ್ನಾಟಕದ ಕ್ರಶ್ ಎಂದು ಕರೆಯುತ್ತಿದ್ದು, ಮುಮದಿನ ದಿನಗಳಲ್ಲಿ ಮತ್ತಷ್ಟು ಪ್ರೋತ್ಸಾಹ ಕೊಡುವ ಮಾತುಗಳನ್ನಾಡಿದ್ದಾರೆ. ಸ್ಮೃತಿ ಮಂಧಾನ ಪೇಸ್ ಮತ್ತು ಸ್ಪಿನ್ ಎರಡನ್ನೂ ಆಡುವ ವಿಶ್ವದ ಅಗ್ರ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಮೃತಿ ಮಂಧಾನ, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಇಂದ್ರಾಣಿ ರಾಯ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭನಾ, ಎರಿನ್ ಬರ್ನ್ಸ್, ಹೀದರ್ ನೈಟ್, ಡೇನ್ ವ್ಯಾನ್ ನೀಕರ್ಕ್, ಪ್ರೀತಿ ಬೋಸ್, ಪೂನಂ ಖೇಮ್ನಾರ್, ಕೋಮಲ್ ಝಂಝಾದ್, ಮೇಗನ್ ಶುಟ್, ಸಹನಾ ಪವಾರ್ ಇದ್ದಾರೆ.

ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿಗೆ ಒಟ್ಟು 1,525 ಆಟಗಾರರು ನೋಂದಾಯಿಸಿಕೊಂಡಿದ್ದರು. ಅಂತಿಮ ಪಟ್ಟಿಯನ್ನು 409 ಆಟಗಾರರಿದ್ದರು. ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಆವೃತ್ತಿಯನ್ನು ಮುಂಬೈನಲ್ಲಿ ಮಾರ್ಚ್ 4 ರಿಂದ 26 ರವರೆಗೆ ಮುಂಬೈನ ಎರಡು ಸ್ಥಳಗಳಲ್ಲಿ ನಡೆಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+