Smriti Mandhana: ಆರ್‌ಸಿಬಿ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ ಸ್ಮೃತಿ ಮಂದಾನ: ಟ್ವೀಟ್ ಪೋಸ್ಟರ್ ಭಾರೀ ವೈರಲ್
RCB Captain Tweet Post viral: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಇದುವರೆಗೂ 6 ಪಂದ್ಯಗಳ್ನು ಆಡಿದೆ. ಇವುಗಳಲ್ಲಿ 2 ಗೆಲುವು, 4 ಪಂದ್ಯಗಳಲ್ಲಿ ಸೋಲನುಭವಿಸಿದೆ. ಅದರಲ್ಲೂ ಈ ನಾಲ್ಕು ಸತತ ಮ್ಯಾಚ್ ಸೋತಿರುವುದು ತವರು ಅಂಗಳವಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎನ್ನುವುದೇ ಇದೀಗ ಅಚ್ಚರಿ ವಿಷಯವಾಗಿದೆ. ಈ ಬಗ್ಗೆ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನ ಅವರು ತಮ್ಮ ಟ್ವೀಟ್ ಖಾತೆ ಮೂಲಕ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ.
2025ರ ಮಹಿಳಾ ಪ್ರೀಮಿಯರ್ ಲೀಗ್‌ನ ಆರಂಭದಲ್ಲಿ ಸ್ಮೃತಿ ಮಂದಾನ ಪಡೆಯು ಎರಡು ಪಂದ್ಯಗಳನ್ನು ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಬಳಿಕ ತವರು ಅಂಗಳ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 4 ಪಂದ್ಯಗಳಲ್ಲಿ ಸತತ ಸೋಲನುಭವಿಸಿತು. ಈ ಬಗ್ಗೆ ರಾಯಲ್ ಚಾಲೆಂಜರ್ಸ್ ತಂಡದ ಕ್ಯಾಪ್ಟನ್ ಸ್ಮೃತಿ ಮಂಧಾನ ಅಭಿಮಾನಿಗಳಲ್ಲಿ ಕ್ಷಮೆಯಾಚನೆ ಮಾಡಿದ್ದಾರೆ.

ಮುಂದಿನ ಕೆಲವು ಪಂದ್ಯಗಳಲ್ಲಿ ನಮಗೆ ಏನಾದರೂ ಸಿಗುತ್ತದೆ ಎಂದು ಆಶಿಸುತ್ತೇನೆ. ಬೆಂಗಳೂರಿನಲ್ಲಿ ನಾವು ಅಭಿಮಾನಿಗಳಿಗಾಗಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯ ಆಗಲಿಲ್ಲ. ಆದರೆ, ಕ್ರಿಕೆಟ್‌ನಲ್ಲಿ ನೀವು ಹಿಂದಿನದನ್ನು ಮರೆಯಬೇಕು. ನಾವು ಅದನ್ನು ಮರೆತು ಮುಂದುವರೆಯಬೇಕು. ಇಷ್ಟು ಸೋಲುಗಳಾದರೂ ಕೂಡ ಅಭಿಮಾನಿಗಳು ಮಾತ್ರ ಆರ್‌ಸಿಬಿ.. ಆರ್‌ಸಿಬಿ.. ಎಂದು ಕೂಗುತ್ತಾ ಪ್ರೀತಿ ತೋರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೆ ಜೊತೆಗೆ ಸ್ಟೇಡಿಯಂ ತುಂಬಾ ನಮ್ಮ ತಂಡ ಆಟಗಾರ್ತಿಯರ ಹೆಸರನ್ನೂ ಕೂಗುತ್ತಾ ವಿಜೃಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದ್ದರಿಂದ ಆರ್‌ಸಿಬಿ ಅಭಿಮಾನಿಗಳು ವಿಶ್ವದ ಅತ್ಯುತ್ತಮ ಅಭಿಮಾನಿಗಳು ಎಂದು ಹೇಳಿದರು. ಅಲ್ಲದೆ, ಎಲ್ಲಿಸ್ ಪೆರ್ರಿ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ಮಾಡಿ ಎದುರಾಳಿ ತಂಡಗಳಿಗೆ ಭಯ ಹುಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅವರ ಆಟದ ವೈಖರಿಗೆ ಒಂದು ಸಲಾಂ ಅಂತಲೂ ಹೇಳಿದ್ದಾರೆ.
ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ನಾವು 5 ವಿಕೆಟ್‌ಗಳ ನಷ್ಟದಿಂದ ನಿಗದಿತ 20 ಓವರ್‌ಗಳಲ್ಲ 147 ರನ್‌ಗಳನ್ನಷ್ಟೇ ಕಲೆಹಾಕಿತು. ಇಷ್ಟು ರನ್‌ಗಳನ್ನಯ ಕಲೆಹಾಕಲು ಎಲ್ಲಿಸ್ ಪೆರ್ರಿ ಪಾತ್ರ ಪ್ರಮುಖವಾಗಿತ್ತು. ನಾವು ಉತ್ತಮ ಆರಂಭವನ್ನು ಪಡೆಯಬಹುದಿತ್ತು. ಬ್ಯಾಟಿಂಗ್ ವಿಷಯಕ್ಕೆ ಬಂದರೆ ಮೊದಲ ಇನ್ನಿಂಗ್ಸ್‌ನಲ್ಲಿ 145 ರನ್‌ಗಳು ಉತ್ತಮ ಪ್ರಯತ್ನ ಎಂದು ನಾನು ಭಾವಿಸಿದೆ. ಆದರೆ ಇದು ಸಾಕಗಲಿಲ್ಲ. ನಾವು ನೀಡಿದ 148 ರನ್‌ಗಳ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 15.3 ಓವರ್‌ಗಳಲ್ಲಿಯೇ ತಲುಪಿ ಗೆದ್ದಿತು ಎಂದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ನಾಲ್ಕನೇ ಪಂದ್ಯ ಇದಾಗಿದೆ. ಆದರೆ, ನಾವು ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಧ್ಯ ಆಗಲಿಲ್ಲ. ಆದರೆ ನಾವು ಕೈಕಟ್ಟಿ ಕೂರುವುದಿಲ್ಲ ಎಂದು ಸ್ಮೃತಿ ಮಂದಾನ ಅವರು ಟ್ವೀಟ್ ಮೂಲಕ ಪೋಸ್ಟ್ ಮಾಡಿದ್ದಾರೆ. ಇದು ಅಭಿಮಾನಿಗಳಿಗೆ ಮತ್ತಷ್ಟು ಹುಮ್ಮಸ್ಸು ತುಂಬಿದಂತಾಗಿದೆ. ಸತತ ನಾಲ್ಕು ಸೋಲುಗಳ ಬಳಿಕ ಅಭಿಮಾನಿಗಳು ತಮ್ಮ ಆರ್‌ಸಿಬಿ ಟೀಂ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡದೇ ಸೋತರೂ ಅರ್‌ಸಿಬಿ, ಗೆದ್ದರೂ ಆರ್‌ಸಿಬಿ ಎಂದು ಹೇಳುತ್ತಿದ್ದಾರೆ. ಇದರಿಂದಲೇ ಗೊತ್ತಾಗುತ್ತದೆ ಆರ್‌ಸಿಬಿ ಅಭಿಮಾನಿಗಳ ಪವರ್ ಏನಂತ.
ಹೀಗೆ ಆರ್‌ಸಿಬಿ ಅಭಿಮಾನಿಗಳು ಬೆಂಗಳೂರು ತಂಡ ಎಷ್ಟೇ ಬಾರಿ ಸೋತರೂ ಯಾವಾಗಲೂ ಗೆದ್ದೆತ್ತಿನ ಬಾಲ ಹಿಡಿದಂತೆ ಗೆದ್ದ ಟೀಂ ಪರ ಘೋಷಣೆ ಕೂಗುವುದಿಲ್ಲ. ಬದಲಾಗಿ ಆರ್‌ಸಿಬಿ ಎದುರಾಳಿ ಟೀಂನವರಿಗೆ ಉರಿಸುತ್ತಾ ಬೆಂಗಳೂರು ತಂಡಕ್ಕೆ ಸಪೋರ್ಟ್ ಮಾಡುವ ಮೂಲಕ ಅಪಾರ ಅಭಿಮಾನವನ್ನು ಮೆರೆಯುತ್ತಿದ್ದಾರೆ. ಇದನ್ನೂ ಕಂಡ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮ್ ಪ್ರೀತ್ ಕೂಡ ಒಂದು ಕ್ಷಣ ಧಂಗಾದ ಘಟನೆಯೂ ನಡೆದಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಮೊದಲು ಮುಂಬೈ ಇಂಡಿಯನ್ಸ್ ಬಳಿಕ ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ವಿರುದ್ಧ ಆರ್‌ಸಿಬಿ ಅತತ ನಾಲ್ಕು ಸೋಲು ಕಂಡಿದೆ. ಇಷ್ಟಾದರೂ ಕೂಡ ಅಭಿಮಾನಿಗಳು ಮಾತ್ರ ನಮ್ಮ ಸಪೋರ್ಟ್ ಯಾವಾಗಲೂ ಆರ್‌ಸಿಬಿಗೆನೇ ಅಂತಿದ್ದಾರೆ. ಈ ಮಾತುಗಳನ್ನು ಕೇಳಿಸಿಕೊಂಡಿರುವ ಎದುರಾಳಿ ತಂಡದವರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿಮಾನಿ ಬಳಗ ಇರುತ್ತದೆಯೇ ಅಂತಲೂ ಆಶ್ಚರ್ಯದಿಂದ ನೋಡಿದ ಉದಾಹರಣೆಗಳಿವೆ.












Click it and Unblock the Notifications