ಶ್ರೇಯಾಂಕಾ ಪಾಟೀಲ್ ಅಪ್ಪನ ಸವಾಲ್: ಬಾಯಲ್ಲಿ ಕ್ಯಾಚ್ ಹಿಡಿತಾರಂತೆ!
ಶ್ರೇಯಾಂಕಾ ಪಾಟೀಲ್ ಅವರು ಈಗ ಕನ್ನಡ ನಾಡಿನ ಮನಸ್ಸು ಗೆದ್ದಿದ್ದಾರೆ. ಹೀಗಾಗಿಯೇ ಕನ್ನಡಿಗರ ಕಡೆಯಿಂದ 'ಟಗರು ಪುಟ್ಟಿ' ಎಂಬ ಬಿರುದು ಕೂಡ ಪಡೆದಿದ್ದಾರೆ ಶ್ರೇಯಾಂಕಾ ಪಾಟೀಲ್. ಹೀಗಿದ್ದಾಗ ಶ್ರೇಯಾಂಕಾ ಪಾಟೀಲ್ ತಮ್ಮ ತಂದೆ ಜೊತೆಗೆ ಹೆಂಗೆಲ್ಲಾ ಜಗಳವನ್ನ ಮಾಡ್ತಾರೆ ಗೊತ್ತಾ? ಹಂಗೆ ಮಗಳಿಗೆ ಶ್ರೇಯಾಂಕಾ ಪಾಟೀಲ್ ಅಪ್ಪ ಏನೆಲ್ಲಾ ಸವಾಲುಗಳನ್ನ ಹಾಕ್ತಾರೆ? ಆ ಬಗ್ಗೆ ಸಂಪೂರ್ಣ ವಿಡಿಯೋ ನೋಡಲು ಮುಂದೆ ಓದಿ.
ಶ್ರೇಯಾಂಕಾ ಪಾಟೀಲ್ ಬೌಲಿಂಗ್ ಕಂಡು, ಇದೀಗ ಜಗತ್ತೇ ಹೌದೌದು ಎಂದು ಬೀಗುತ್ತಿದೆ. ಕೆಲವು ತಿಂಗಳ ಹಿಂದೆ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದ ಶ್ರೇಯಾಂಕಾ ಪಾಟೀಲ್ ಅವರು ತಮ್ಮ ಜೀವನದ ಏಳು & ಬೀಳು ವಿವರಿಸಿದ್ದರು. ಇದೇ ವೇಳೆ ತಮ್ಮ ಅಪ್ಪನ ಜೊತೆಗೆ, ಯಾವ ವಿಚಾರಕ್ಕೆ ಕಿರಿಕ್ ಆಗುತ್ತೆ ಅನ್ನೋದನ್ನ ಕೂಡ ವಿವರಿಸಿದ್ದರು. ಅಪ್ಪನ ಪಕ್ಕದಲ್ಲೇ ಕೂತು, ಮಾತನಾಡಿದ್ದ ಶ್ರೇಯಾಂಕಾ ಪಾಟೀಲ್ ತಮ್ಮ ತಂದೆಯ ಜೊತೆ ಯಾವ ಕಾರಣಕ್ಕೆ ಆಗಾಗ ಜಗಳ ಆಗುತ್ತೆ? ಅಂತಾ ವಿವರಿಸಿದ್ದು, ಆ ವಿಡಿಯೋ ಇಲ್ಲಿದೆ ಮುಂದೆ ಓದಿ.

ಬಾಯಲ್ಲಿ ಕ್ಯಾಚ್ ಹಿಡಿತಾರಂತೆ!
ಶ್ರೇಯಾಂಕಾ ಪಾಟೀಲ್ ಅವರು ಈಗ ದೊಡ್ಡ ಸ್ಟಾರ್ ಕ್ರಿಕೆಟರ್ ಆಗಿ ಬೆಳೆದು ನಿಂತಿರುವುದಕ್ಕೆ ಅವರ ತಂದೆಗೂ ಹೆಮ್ಮೆ ಇದೆ. ಹೀಗೆ ತಮ್ಮ ಮಗಳ ಜೊತೆಗೆ ಸಂದರ್ಶನ ಒಂದರಲ್ಲಿ ಚರ್ಚೆ ಮಾಡುವಾಗ, ಮನೆಯಲ್ಲಿ ಅಪ್ಪ & ಮಗಳ ನಡುವೆ ಯಾವ ಕಾರಣಕ್ಕೆ ಜಗಳ ಆಗುತ್ತದೆ? ಅಂತಾ ವಿವರಿಸಿದ್ದಾರೆ. ಆಗ ಶ್ರೇಯಾಂಕಾ ಅವರು, ತಮ್ಮ ತಂದೆ ಬಗ್ಗೆ ಕಂಪ್ಲೆಂಟ್ ಅನ್ನು ಹೇಳುತ್ತಾ ಕುತೂಹಲಕಾರಿ ವಿಚಾರ ಒಂದನ್ನ ವಿವರಿಸಿದ್ದಾರೆ. ಆ ವಿಡಿಯೋ ನೋಡೋಕೆ ಮುಂದೆ ಓದಿ.
ಹೌದು, ಶ್ರೇಯಾಂಕಾ ಪಾಟೀಲ್ ಅವರ ಅಪ್ಪ ರಾಜೇಶ್ ಪಾಟೀಲ್ ಪದೇ ಪದೇ ಮಗಳನ್ನ ರೇಗಿಸುತ್ತಾರಂತೆ. ಮಗಳು ಕ್ರಿಕೆಟ್ ಮ್ಯಾಚ್ ಮುಗಿಸಿ ಮನೆಗೆ ಬಂದಾಗ ಶ್ರೇಯಾಂಕಾ ಆಟದ ಬಗ್ಗೆ ಕಾಲು ಎಳೆಯುವ ಅವರು, ನಾನು ಬಾಯಲ್ಲೇ ಕ್ಯಾಚ್ ಹಿಡಿಯುತ್ತಿದ್ದೆ ಬಿಡು ಅಂತಾ ಚಾಲೆಂಜ್ ಹಾಕುತ್ತಾರಂತೆ. ಅಲ್ಲದೆ ಪ್ಯಾಡ್ ಇಲ್ಲದೆ ಒಂದೇ ಕೈಯಲ್ಲಿ ನಿನ್ನ ಬೌಲಿಂಗ್‌ಗೆ, ನಾನು ಬ್ಯಾಟಿಂಗ್ ಮಾಡ್ತೀನಿ ಅಂತಾನೂ ಶ್ರೇಯಾಂಕಾ ಪಾಟೀಲ್ ಅವರಿಗೆ, ಅವರ ಅಪ್ಪ ಚಾಲೆಂಜ್ ಹಾಕುತ್ತಾರಾಂತೆ. ಹೀಗೆ ಅಪ್ಪ & ಮಗಳ ಜಗಳದ ವಿಡಿಯೋ ವೈರಲ್ ಆಗ್ತಿದೆ.
'ಟಗರು ಪುಟ್ಟಿ'ಗೆ ಫ್ಯಾನ್ಸ್ ಬೆಂಬಲ
ಹೀಗೆ ಶ್ರೇಯಾಂಕಾ ಪಾಟೀಲ್ ಅವರು ತಮ್ಮ ತಂದೆ ಜೊತೆಗೆ ತಮಾಷೆಗೆ ಮಾತು ಮಾತಿನಲ್ಲೇ ಫೈಟಿಂಗ್ ಮಾಡುವ ವಿಡಿಯೋ ವೈರಲ್ ಆಗುತ್ತಿದೆ. ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಜನ ಈ ವಿಡಿಯೋ ನೋಡಿ ನಕ್ಕಿದ್ದಾರೆ. ಹಾಗೇ ಅಪ್ಪ & ಮಗಳ ನಡುವೆ ಇರುವ ಉತ್ತಮ ಬಾಂಡಿಂಗ್ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ 'ಟಗರು ಪುಟ್ಟಿ' ಶ್ರೇಯಾಂಕಾ ಪಾಟೀಲ್ ಅವರಿಗೆ ಆಲ್‌ದಿ ಬೆಸ್ಟ್ ಹೇಳುತ್ತಿದ್ದಾರೆ.












Click it and Unblock the Notifications