ಶ್ರೇಯಾಂಕಾ ಪಾಟೀಲ್ ಕುಟುಂಬ ನೋಡಿ, ಅಪ್ಪ & ಅಮ್ಮ ಹೀಗಿದ್ದಾರೆ! ಪಕ್ಕಾ ದೈವ ಭಕ್ತಿಯ ಕುಟುಂಬ!

ಶ್ರೇಯಾಂಕಾ ಪಾಟೀಲ್ ಅಂದ್ರೆ ಏನ್ ಹವಾ ಇದೆ ಗೊತ್ತಾ? ಕರ್ನಾಟಕದಲ್ಲಿ ಮಾತ್ರ ಅಲ್ಲ, ಇಡೀ ದೇಶದಲ್ಲಿ ಹವಾ ಇಟ್ಟಿದ್ದಾರೆ ನಮ್ 'ಟಗರು ಪುಟ್ಟಿ' ಶ್ರೇಯಾಂಕಾ ಪಾಟೀಲ್ ಅವರು. ಅದ್ರಲ್ಲೂ ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಕುಡಿ ಶ್ರೇಯಾಂಕಾ ಪಾಟೀಲ್. ಈಗ ತಮ್ಮ ಕುಟುಂಬದ ಜೊತೆಗೆ ಶ್ರೇಯಾಂಕಾ ಪಾಟೀಲ್ ದೇವಾಲಯಕ್ಕೆ ತೆರಳಿರುವ ಫೋಟೋ ಫುಲ್ ವೈರಲ್ ಆಗುತ್ತಿವೆ.

ಆರ್‌ಸಿಬಿ ಬೆಂಗಳೂರು ತಂಡದ ಸ್ಟಾರ್ ಪ್ಲೇಯರ್ ಶ್ರೇಯಾಂಕಾ ಪಾಟೀಲ್, ಭಾರತ ಕ್ರಿಕೆಟ್ ತಂಡದಲ್ಲಿ ಕೂಡ ಹವಾ ಇಟ್ಟಿದ್ದಾರೆ. ಅದರಲ್ಲೂ ಶ್ರೇಯಾಂಕಾ ಪಾಟೀಲ್ ಅಂದ್ರೆ ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ. ಈ ಕಾರಣಕ್ಕೆ ಶ್ರೇಯಾಂಕಾ ಪಾಟೀಲ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದಾರೆ. ಇದೇ ಸಮಯದಲ್ಲಿ, ನಮ್ಮ 'ಟಗರು ಪುಟ್ಟಿ' ಶ್ರೇಯಾಂಕಾ ಪಾಟೀಲ್ ದೇವಸ್ಥಾನಕ್ಕೆ ಹೋಗಿರುವ ಫೋಟೋಸ್ ವೈರಲ್ ಆಗುತ್ತಿವೆ. ಶ್ರೇಯಾಂಕಾ ಪಾಟೀಲ್ ಕುಟುಂಬದ ಫೋಟೋ ನೋಡಲು ಮುಂದೆ ಓದಿ.

Shreyanka Patil s Family Visits Mahadasohi Temple Witness the Devotion of Her Parents

ಅಪ್ಪ & ಅಮ್ಮನ ಜೊತೆ ಶ್ರೇಯಾಂಕಾ

ಮೊದಲೇ ಹೇಳಿದಂತೆ ಶ್ರೇಯಾಂಕಾ ಪಾಟೀಲ್ ಅವರದ್ದು ಪಕ್ಕಾ ಸಂಪ್ರದಾಯಸ್ಥ ಕುಟುಂಬ ಆಗಿದೆ. ಹೀಗಾಗಿಯೇ ಪೂಜೆ, ದೇಗುಲಕ್ಕೆ ಭೇಟಿ ನೀಡುವುದು ಮಾಮೂಲು. ಈಗಲು ಕೂಡ ತಮ್ಮ ಕುಟುಂಬ ಸದಸ್ಯರ ಜೊತೆ ಶ್ರೇಯಾಂಕಾ ಪಾಟೀಲ್ ಅವರು ದೇಗುಲಕ್ಕೆ ಭೇಟಿಯನ್ನ ನೀಡಿದ್ದಾರೆ. ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ದೇವಾಲಯಕ್ಕೆ ಭೇಟಿ ನೀಡಿದ್ದು, ಈ ಬಗ್ಗೆ ಸಂಸ್ಥಾನ ಕೂಡ ವಿಶೇಷ ಪೋಸ್ಟ್ ಹಾಕಿದೆ.

ಶರಣಬಸವೇಶ್ವರರ ಸಂಸ್ಥಾನ ಇದೀಗ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ, 'ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ದೇವಾಲಯಕ್ಕೆ ಇಂದು ಇಂಡಿಯಾ ಕ್ರಿಕೆಟ್ ತಂಡದ ಆಟಗಾರತಿ ಹಾಗೂ ರೋಯಲ್ ಚಾಲೆಂಜರ್ ಬೆಂಗಳೂರು ತಂಡದ ಆಟಗಾರತಿ ಕಲಬುರ್ಗಿಯ ಹೆಮ್ಮೆಯ ಮಹಿಳೆ ಶ್ರೇಯಾಂಕ್ ಪಾಟೀಲ ಅವರು ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಮತ್ತು ಪರಮ ಪೂಜ್ಯ ಡಾ || ಶರಣಬಸವಪ್ಪ ಅಪ್ಪಾಜಿ ಅವರ ಆಶೀರ್ವಾದ ಪಡೆದು ಕೊಂಡರು ಅವರು ಇನ್ನು ಉನ್ನತ್ತ ಸ್ಥಾನಕ್ಕೆ ಹೋಗಲೆಂದು ಅಪ್ಪಾಜಿ ಹಾರೈಸಿದರು' ಎಂದು ಬರೆದುಕೊಳ್ಳಲಾಗಿದೆ.

ಕಲಬುರಗಿ ಮೂಲದ ಕನ್ನಡತಿ ಶ್ರೇಯಾಂಕಾ

ಆರ್‌ಸಿಬಿ ಬೆಂಗಳೂರು ಮಹಿಳಾ ತಂಡದ ಆಟಕ್ಕೆ ಕೋಟ್ಯಂತರ ಫ್ಯಾನ್ಸ್ ಫಿದಾ ಆಗಿದ್ದು, 2024ರ ಸಾಲಿನ WPL ಕಪ್ ಗೆದ್ದು ಇತಿಹಾಸ ನಿರ್ಮಾಣ ಮಾಡಲು ಕನ್ನಡತಿ ಶ್ರೇಯಾಂಕ ಪಾಟೀಲ್ ಶ್ರಮ ತುಂಬಾ ದೊಡ್ಡದಾಗಿದೆ. ಶ್ರೇಯಾಂಕಾ ಪಾಟೀಲ್ ಅವರು ಮೂಲತಃ ಕಲಬುರಗಿ ಜಿಲ್ಲೆಯವರು ಅವರ ತಂದೆ ಕಲಬುರಗಿ ಮೂಲದ ರಾಜೇಶ್ ಪಾಟೀಲ್ ಬೆಂಗಳೂರಿನಲ್ಲೇ ನೆಲೆಸಿದ ಕಾರಣಕ್ಕೆ, ಬೆಂಗಳೂರಿನಲ್ಲೇ ಓದಿ ಬೆಳೆದಿದ್ದಾರೆ ಶ್ರೇಯಾಂಕಾ. ಇದೀಗ, ಆರ್‌ಸಿಬಿ ಮಹಿಳಾ ತಂಡದಲ್ಲಿ ಪ್ರಮುಖ ಆಟಗಾರ್ತಿ ಆಗಿರುವ ಶ್ರೇಯಾಂಕಾ ಅವರು. ಭಾರತೀಯ ಕ್ರಿಕೆಟ್ ತಂಡದಲ್ಲಿಯು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.

ಒಟ್ನಲ್ಲಿ ಹೀಗೆ ಶ್ರೇಯಾಂಕಾ ಪಾಟೀಲ್ ಅವರು ಎಲ್ಲೆಲ್ಲೂ ಫುಲ್ ವೈರಲ್ ಆಗುತ್ತಿದ್ದಾರೆ. ಈ ನಡುವೆ ಶ್ರೇಯಾಂಕಾ ಅವರ ಆಟಕ್ಕೆ ಅಭಿಮಾನಿಗಳು ಹೆಚ್ಚಾಗಿದ್ದು, ಸಿಕ್ಕಾಪಟ್ಟೆ ಬಂಬಲವು ಸಿಗುತ್ತಿದೆ. ಮತ್ತೊಂದು ಕಡೆ ಹಿರಿಯರ ಆಶೀರ್ವಾದ ಶ್ರೇಯಾಂಕಾ ಪಾಟೀಲ್ ಸಾಧನೆ ಈಗ ಮತ್ತಷ್ಟು ಹುಮ್ಮಸ್ಸು ತುಂಬುತ್ತಿದೆ.

ರೊಟ್ಟಿ, ಶೇಂಗಾ ಚಟ್ನಿ, ಮೊಸರು ಇಷ್ಟ!

ಆಹಾರ ಸಂಸ್ಕೃತಿ ವಿಚಾರದಲ್ಲಿ ಉತ್ತರ ಕರ್ನಾಟಕ ಸಾಕಷ್ಟು ಶ್ರೀಮಂತಿಕೆಯನ್ನು ಹೊಂದಿದೆ. ಈ ಕಾರಣಕ್ಕೆ, ದೇಶಾದ್ಯಂತ ಉತ್ತರ ಕರ್ನಾಟಕ ಆಹಾರ ಶೈಲಿಗೆ ದೊಡ್ಡ ಹೆಸರು ಕೂಡ ಇದೆ. ಅದರಲ್ಲೂ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶ ದೊರೆಯುವ ಊಟಕ್ಕೆ ನಮ್ಮ ರಾಜ್ಯದ ಉತ್ತರ ಕರ್ನಾಟಕ ಫೇಮಸ್. ಜೋಳದ ರೊಟ್ಟಿ, ಬಗೆ ಬಗೆಯ ಕಾಳುಗಳು, ಶೇಂಗಾ ಚಟ್ನಿ, ಮೊಸರು ಹೀಗೆ ಎಲ್ಲವನ್ನೂ ಇಷ್ಟಪಟ್ಟು ಜನ ತಿಂತಾರೆ. ಅದ್ರಲ್ಲೂ ಕ್ರಿಕೆಟ್ ಸ್ಟಾರ್ ಶ್ರೇಯಾಂಕಾ ಅವರಿಗೆ ತಮ್ಮ ಊರಿನ ಊಟ ಜೋಳದ ರೊಟ್ಟಿ ಅಂದ್ರೆ ಪ್ರಾಣವಂತೆ. ಶ್ರೇಯಾಂಕಾ ಪಾಟೀಲ್ ಇನ್ನೂ ಚಿಕ್ಕ ಹುಡುಗಿ & ಅವರ ವಯಸ್ಸು ಈಗಿನ್ನು 21 ವರ್ಷ. ಹೀಗಿದ್ದರೂ ಅವರು ಮಾಡಿರುವ ಸಾಧನೆ ಇಡೀ ದೇಶಕ್ಕೆ ಇಷ್ಟವಾಗಿದೆ. ಆರ್‌ಸಿಬಿ ಮಾತ್ರ ಅಲ್ಲ, ಇಂಡಿಯನ್ ಕ್ರಿಕೆಟ್ ತಂಡಕ್ಕೂ ಆಡಿದ್ದಾರೆ ನಮ್ಮ ಕನ್ನಡತಿ ಶ್ರೇಯಾಂಕಾ. ಚಿಕ್ಕ ವಯಸ್ಸಿಗೆ ದೊಡ್ಡ ಮಟ್ಟದಲ್ಲಿ ಹೆಸರನ್ನ ಸಂಪಾದಿಸಿದ್ದಾರೆ. ಹಾಗೇ ಕೋಟಿ ಕೋಟಿ ಅಭಿಮಾನಿಗಳನ್ನ ಗಳಿಸಿದ್ದಾರೆ ಶ್ರೇಯಾಂಕಾ ಪಾಟೀಲ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+