Shreyanka Patil: 1% ಅವಕಾಶ ಸಾಕು; ಆರ್‌ಸಿಬಿ ಗೆಲುವಿನ ಬಗ್ಗೆ ಶ್ರೇಯಾಂಕಾ ಹೇಳಿದ್ದೇನು?

ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಆರ್‌ಸಿಬಿ ಸಿಎಸ್‌ಕೆ ವಿರುದ್ಧ 27 ರನ್‌ಗಳಿಂದ ಗೆದ್ದು ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದೆ.

ಮೇ 3 ರಂದು ಅಂಕಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದ ಆರ್‌ಸಿಬಿ ಪ್ಲೇಆಫ್‌ಗೆ ಪ್ರವೇಶಿಸುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ, ಆದರೆ ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇಆಫ್‌ಗೆ ಪ್ರವೇಶಿಸಿದೆ. ಅಭಿಮಾನಿಗಳು ಸಿಎಸ್‌ಕೆ ವಿರುದ್ಧದ ಗೆಲುವನ್ನು ಅದ್ಭುತ ಎಂದು ಬಣ್ಣಿಸಿದ್ದಾರೆ.

Shreyanka Patil Tweets After RCB s Win Against CSK and Qualified for Playoffs

ಆರ್‌ಸಿಬಿ ಸಿಎಸ್‌ಕೆ ನಡುವಿನ ಪಂದ್ಯದ ವೇಳೆ ಮೈದಾನದಲ್ಲಿ ಆರ್‌ಸಿಬಿ ಮಹಿಳಾ ತಂಡದ ಆಟಗಾರರು ಹಾಜರಿದ್ದರು. ಆರ್‌ಸಿಬಿಗೆ ಕಪ್ ಗೆದ್ದುಕೊಟ್ಟ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ, ಆಶಾ ಶೋಭನಾ, ಶ್ರೇಯಾಂಕಾ ಪಾಟೀಲ್ ಮತ್ತು ಡೆಲ್ಲಿ ಕ್ಯಾಟಿಟಲ್ಸ್ ಆಟಗಾರ್ತಿ ಜೆಮಿಮಾ ಕೂಡ ಇದ್ದರು.

ಶ್ರೇಯಾಂಕಾ ಪಾಟೀಲ್ ಹೇಳಿದ್ದೇನು?

ಮೈದಾನದಲ್ಲಿ ಆರ್‌ಸಿಬಿ ರೋಚಕ ಗೆಲುವಿಗೆ ಸಾಕ್ಷಿಯಾದ ಶ್ರೇಯಾಂಕಾ ಪಾಟೀಲ್ ಟ್ವೀಟ್ ಮಾಡಿದ್ದು, ಇನ್ನು ರೋಚಕ ಪ್ರಯಾಣ ಬಾಕಿ ಇದೆ ಎಂದು ಹೇಳಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು "ಕೇವಲ 1 % ಅವಕಾಶ, ಕೆಲವೊಮ್ಮೆ ಅದೆ ಸಾಕಾಗುತ್ತದೆ" ಅಂದು ಆರ್‌ಸಿಬಿ ಕ್ವಾಲಿಫೈ ಆಗುತ್ತದೆ ಎಂದಾಗ ನಗುತ್ತಿದ್ದರು, ಈಗಲೂ ಕಾಲ ಮಿಂಚಿಲ್ಲ, ಆರ್ ಸಿಬಿ ರೈಲಿಗೆ ಹತ್ತಿಕೊಳ್ಳಿ, ರೋಚಕ ಪ್ರಯಾಣದಲ್ಲಿ ಜೊತೆಯಾಗಿ" ಎಂದು ಹೇಳಿದ್ದಾರೆ.

ಆರ್‌ಸಿಬಿ ಪ್ಲೇಆಫ್ ತಲುಪುತ್ತದೆ ಎಂದಾಗ ಎಲ್ಲರೂ ನಕ್ಕಿದ್ದರೂ, ಆದರೆ ಪ್ರತಿ ಪಂದ್ಯ ಗೆದ್ದಾಗ ಅಭಿಮಾನಿಗಳು ಮಾತ್ರ ಆರ್‌ಸಿಬಿ ಪ್ಲೇ ಆಫ್ ಲೆಕ್ಕಾಚಾರದ ಬಗ್ಗೆ ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಇತರ ತಂಡದ ಅಭಿಮಾನಿಗಳು ಆರ್‌ಸಿಬಿ ಅಭಿಮಾನಿಗಳನ್ನು ಆಡಿಕೊಂಡಿದ್ದೇ ಹೆಚ್ಚು, ಆದರೆ ಅಭಿಮಾನಿಗಳ ಹಾರೈಕೆ, ಕೆಚ್ಚೆದಯ ಆಟದ ಜೊತೆಗೆ ಅದೃಷ್ಟ ಕೂಡ ಜೊತೆಯಾಗಿದ್ದು, ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಿದೆ.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕೂಡ ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತಾಗ ಹೀಗೆಯೇ ಆಗಿತ್ತು, ಆದರೆ ಬಳಿಕ ಸತತವಾಗಿ ಪಂದ್ಯಗಳನ್ನು ಗೆದ್ದಿದ್ದ ಮಂಧಾನ ಪಡೆ ಚೊಚ್ಚಲ ಪ್ರಶಸ್ತಿ ಗೆದ್ದು ಬೀಗಿತ್ತು. ಐಪಿಎಲ್‌ನಲ್ಲಿ ಕೂಡ ಅದೇ ಇತಿಹಾಸ ಮರುಕಳಿಸಲಿ ಎನ್ನುವ ಆಸೆ ಅಭಿಮಾನಿಗಳದ್ದಾಗಿದೆ.

ಇನ್ನು ಮೂರು ಪಂದ್ಯಗಳಲ್ಲಿ ಆರ್‌ಸಿಬಿಯ 16 ವರ್ಷಗಳ ಪ್ರಶಸ್ತಿ ಬರ ಕೊನೆಯಾಗಲಿದೆ. ಇದು ಕೋಟ್ಯಂತರ ಅಭಿಮಾನಿಗಳು ಪ್ರಾರ್ಥನೆಯೂ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+