Manu Bhaker: ಒಲಂಪಿಕ್ ಪದಕ ಗೆದ್ದ ಬೆನ್ನಲ್ಲೇ ಪ್ರಮುಖ ಬ್ರ್ಯಾಂಡ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಮನು ಭಾಕರ್
ತಿರುವನಂತಪುರಂ, ಜುಲೈ. 31: ಪ್ಯಾರಿಸ್ ಒಲಿಂಪಿಕ್ ಗೇಮ್ಸ್‌ನಲ್ಲಿ ದೇಶಕ್ಕೆ ಎರಡು ಕಂಚಿನ ಪದಕಗಳನ್ನು ಗೆದ್ದ ಭಾರತದ ಪಿಸ್ತೂಲ್ ಶೂಟರ್ ಮನು ಭಾಕರ್ ಬಗ್ಗೆ ಇಡೀ ದೇಶವೆ ಹೆಮ್ಮೆ ಪಡುತ್ತಿದೆ. ಮೈದಾನದಲ್ಲಿ ಕಷ್ಟ ಪಡುತ್ತಿರುವ ಅವರು, ಹೊರಗಡೆಯೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.
ಹೌದು... ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ತಮ್ಮದಾಗಿಸಿಕೊಂಡಿರುವ ಮನು ಭಾಕರ್ ಅವರ ಫೋಟೋಗಳನ್ನು ಹಲವಾರು ಬ್ರ್ಯಾಂಡ್‌ಗಳು ಬಳಸಿಕೊಳ್ಳುತ್ತಿವೆ. ಅವರ ಸಾಧನೆಗಳನ್ನು ಹೊಗಳುವ ಭರದಲ್ಲಿ ತಮ್ಮ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಿಕೊಳ್ಳುತ್ತಿವೆ. ಹೀಗಾಗಿ ಅಂತಹ ಪ್ರಮುಖ ಬ್ರ್ಯಾಂಡ್‌ಗಳ ವಿರುದ್ಧ ಮನು ಭಾಕರ್ ಟೀಂ ಕಾನೂನು ಸಮರಕ್ಕೆ ಮುಂದಾಗಿದೆ.

ಪ್ರಮುಖ ಬ್ರ್ಯಾಂಡ್‌ಗಳಿಗೆ ನೋಟಿಸ್ ಕಳುಹಿಸಿದ ಮನು ಭಾಕರ್ ತಂಡ!
ವರದಿಯೊಂದರ ಪ್ರಕಾರ, ಮನು ಭಾಕರ್ ಅವರ ತಂಡದಿಂದ ಅನೇಕ ಬ್ರ್ಯಾಂಡ್‌ಗಳಿಗೆ ಕಾನೂನು ನೋಟಿಸ್‌ಗಳನ್ನು ಕಳುಹಿಸಲಾಗಿದೆ. ಮನು ಭಾಕರ್ ಅವರ ತಂಡವು ಭಾರತೀಯ ಶೂಟರ್‌ಗೆ ಯಾವುದೇ ಬೆಂಬಲ ನೀಡದೆ, ಅವರಿಗೆ ಸ್ಪಾನ್ಸರ್ ಮಾಡದೆ ಅವರ ಫೋಟೋ ಬಳಸಿಕೊಂಡು ಅಭಿನಂದನಾ ಜಾಹೀರಾತುಗಳನ್ನು ಹಾಕಿರುವುದಕ್ಕೆ ಆಕ್ಷೇಪ ವ್ಯಕತಪಡಿಸಿದೆ. ಅಂತಹ ಜಾಹೀರಾತುಗಳನ್ನು ಬಿಡುಗಡೆ ಮಾಡುವ ಹಕ್ಕು ಇಲ್ಲ ಎಂದು ನೋಟಿಸ್ ನೀಡಿದೆ.

ಮನು ಭಾಕರ್ ಅವರ ಕೆಲಸಗಳನ್ನು ನಿರ್ವಹಿಸುವ ಐಒಎಸ್ ಸ್ಪೋರ್ಟ್ಸ್ ಮತ್ತು ಎಂಟರ್‌ಟೈನ್‌ಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕ ನೀರವ್ ತೋಮರ್ ಎಕನಾನಿಕ್ ಟೈಮ್ಸ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. "ಮನು ಭಾಕರ್ ಜೊತೆ ಸಂಬಂಧ ಹೊಂದಿಲ್ಲದ ಸುಮಾರು ಎರಡು ಡಜನ್ ಬ್ರಾಂಡ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಆಕೆಯ ಚಿತ್ರಗಳನ್ನು ಒಳಗೊಂಡ ಅಭಿನಂದನಾ ಜಾಹೀರಾತುಗಳನ್ನು ಬಿಡುಗಡೆ ಮಾಡಿವೆ. ಇದು ಅನಧಿಕೃತ 'ಮೊಮೆಂಟ್ ಮಾರ್ಕೆಟಿಂಗ್' ಮತ್ತು ಕಾನೂನು ಕ್ರಮಗಳಿಗೆ ಪ್ರೇರೇಪಿಸುತ್ತದೆ" ಎಂದಿದ್ದಾರೆ.
ಮನು ಭಾಕರ್ ಅವರ ಪ್ರಕರಣ ಒಂದೆ ಅಲ್ಲ, ಪ್ಯಾರಿಸ್ ಗೇಮ್ಸ್‌ನಲ್ಲಿ ಹಲವಾರು ಇತರ ಭಾರತೀಯ ಕ್ರೀಡಾಪಟುಗಳು ಸಹ ಇಂತಹ ಬ್ರ್ಯಾಂಡ್‌ಗಳಿಂದ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. "ನಮ್ಮ ಅಥ್ಲೀಟ್‌ಗಳಿಗೆ ಪ್ರಾಯೋಜಕತ್ವ ನೀಡದ ಬ್ರ್ಯಾಂಡ್‌ಗಳು ಕಾನೂನುಬದ್ಧವಾಗಿ ಅವರ ಚಿತ್ರಗಳನ್ನು ಜಾಹೀರಾತುಗಳಲ್ಲಿ ಬಳಸುವಂತಿಲ್ಲ. ಹಾಗೆ ಮಾಡಿದರೆ ನಾವು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ" ಎಂದು ಬಾಕ್ಸರ್ ನಿಖತ್ ಜರೀನ್ ಮತ್ತು ಬ್ಯಾಡ್ಮಿಂಟನ್ ಆಟಗಾರರಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಅವರನ್ನು ಪ್ರತಿನಿಧಿಸುವ ಬೇಸ್‌ಲೈನ್ ವೆಂಚರ್ಸ್‌ನ ವಕ್ತಾರರು ತಿಳಿಸಿದ್ದಾರೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications