ಯುಎಸ್‌ ಓಪನ್‌ನಿಂದ ಸೆರೆನಾ ವಿಲಿಯಮ್ಸ್‌ ಹೊರಕ್ಕೆ!

ವಾಷಿಂಗ್‌ಟನ್‌, ಸೆಪ್ಟೆಂಬರ್‌ 03: ಖ್ಯಾತ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಯುಎಸ್‌ ಓಪನ್‌ಗೆ ಮೂರನೇ ಸುತ್ತಿನಲ್ಲಿ ಅಜ್ಲಾ ಟೊಮ್ಲಜಾನೊವಿಕ್ ವಿರುದ್ಧ ಸೋಲುವ ಮೂಲಕ ಯುಎಸ್‌ ಓಪನ್‌ನಿಂದ ಹೊರಕ್ಕೆ ಬಿದ್ದರು. ಈ ಮೂಲಕ ಕೊನೆಯ ಪ್ರಶಸ್ತಿ ಗೆಲ್ಲುವ ಅವರ ಕನಸು ಈಡೇರಲಿಲ್ಲ.

ಈ ಪಂದ್ಯ ಅವರ ವೃತ್ತಿಜೀವನದ ಕೊನೆಯ ಸಿಂಗಲ್ಸ್ ಪಂದ್ಯವಾಗಿರಬಹುದು ಎನ್ನಲಾಗಿದೆ. ಸ್ಪರ್ಧೆಯಲ್ಲಿ ಅಜ್ಲಾ ಟೊಮ್ಲಜಾನೊವಿಕ್‌ಗೆ ತೀವ್ರ ಪೈಪೋಟಿ ನೀಡಿದ್ದ ಸೆರೆನಾ ವಿಲಿಯಮ್ಸ್‌ಗೆ ಈ ಸೋಲು ನುಂಗಲು ಕಷ್ಟಕರವಾಯಿತು. 46ನೇ ಶ್ರೇಯಾಂಕಿತ ಆಸ್ಟ್ರೇಲಿಯನ್‌ ಅಜ್ಲಾ ಟೊಮ್ಲಜಾನೊವಿಕ್‌ ವಿರುದ್ಧ 7-5 6-7 (4) 6-1 ಅಂಕವನ್ನು ಸೆರೆನಾ ವಿಲಿಯಮ್ಸ್‌ ಪಡೆದರು.

ಮೂರನೇ ಸುತ್ತಿಗೆ ಬರುವಷ್ಟರಲ್ಲಿ ಅಜ್ಲಾ ಟೊಮ್ಲಜಾನೊವಿಕ್‌ಗೆ ಯಾವುದೇ ಅವಮಾನವಿಲ್ಲದೆ ಗೆಲುವನ್ನು ಸಮೀಪಿಸಿದರು. ಈ ಮೂಲಕ 23 ಬಾರಿ ಗ್ರ್ಯಾಂಡ್‌ಸ್ಲಾಮ್ ವಿಜೇತೆ ಸೆರೆನಾ ಅವರನ್ನು ಮಣಿಸಿದರು. ವಿಶ್ವ ದರ್ಜೆಯಲ್ಲಿ ಎರಡನೇ ಶ್ರೇಯಾಂಕದಲ್ಲಿರುವ ಸೆರೆನಾ ಅವರು ಅನೆಟ್ ಕೊಂಟಾವೀಟ್ ವಿರುದ್ಧ ಎರಡನೇ ಸುತ್ತಿನಲ್ಲಿ ಗೆಲುವನ್ನು ಪಡೆದ ಮೂರು ಪಂದ್ಯಗಳು ಅವಳ ಅಭಿಮಾನಿಗಳಿಗೆ ಉಡುಗೊರೆಯಾಗಿವೆ. ಪಟ್ಟುಬಿಡದ ಎಂದಿಗೂ ಶರಣಾಗತಿಯ ಮನೋಭಾವವಿಲ್ಲದ ಅವರ ಎರಡು ದಶಕಗಳ ಟೆನಿಸ್‌ ಆಟವು ಪ್ರಬಲ ಸ್ಪರ್ಧೆಯನ್ನು ಅಂತಿಮ ಹಂತದವರೆಗೂ ಪ್ರದರ್ಶಿಸಿತು.

Serena Williams out of the US Open!

ಪಂದ್ಯಕ್ಕೆ 40 ವರ್ಷದ ಸೆರೆನಾ ಸಕಲ ತಯಾರಿಯೊಂದಿಗೆ ಬಂದರು. ಟಾಮ್ಲಜಾನೋವಿಕ್ ಅವರನ್ನು ಮಣಿಸುವ ಎಲ್ಲ ಯೋಜನೆಯನ್ನು ಅವರು ಹೊಂದಿದ್ದರು. ಆದರೆ ಕೊನೆಯಲ್ಲಿ ಪ್ರತಿಸ್ಪರ್ಧಿಗೆ ನಾಕೌಟ್ ಪಂಚ್ ನೀಡಲು ಮತ್ತು ಹೆಚ್ಚು ಸಮಯಗಳ ಸ್ಪರ್ಧೆ ಒಡ್ಡಲು ಅವರು ವಿಫಲವಾದರು.

ವಿಲಿಯಮ್ಸ್ ಕಳೆದ ತಿಂಗಳು ನಿವೃತ್ತಿಯಾಗುವ ಬಗ್ಗೆ ಘೊಷಣೆ ಮಾಡಿದ್ದರು. ಆದರೆ ಯುಎಸ್ ಓಪನ್ ಅನ್ನು ತನ್ನ ಅಂತಿಮ ಪಂದ್ಯವೆಂದು ಎಂದಿಗೂ ದೃಢೀಕರಿಸಲಿಲ್ಲ. 40ರ ವರ್ಷದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್‌ ತಾನು ಏನು ಮಾಡುತ್ತಿದ್ದೇನೆ ಎಂಬುದನ್ನು ವಿವರಿಸಲು ಅತ್ಯುತ್ತಮ ಪದವೆಂದರೆ "ವಿಕಸನ" ಎಂಬುದಾಗಿ (evolution) ಸೂಚಿಸಿದ್ದರು. ಅಲ್ಲದೆ ತನ್ನ ಕುಟುಂಬವನ್ನು ಸಲಹಲು ಬಯಸುತ್ತಿರುವುದಾಗಿ ಹೇಳಿದರು.

Serena Williams out of the US Open!

ನಾನು ನಿವೃತ್ತಿ ಎಂಬ ಪದವನ್ನು ಎಂದಿಗೂ ಇಷ್ಟಪಡುವುದಿಲ್ಲ. ಇದು ಆಧುನಿಕ ಪದದಂತೆ ನನಗೆ ಅನ್ನಿಸುವುದಿಲ್ಲ. ನಾನು ಇದನ್ನು ಸ್ಥಿತ್ಯಂತರವೆಂದು ಯೋಚಿಸುತ್ತಿದ್ದೇನೆ. ಆದರೆ ನಾನು ಆ ಪದವನ್ನು ಹೇಗೆ ಬಳಸುತ್ತೇನೆ ಎಂಬುದರ ಕುರಿತು ಸೂಕ್ಷ್ಮವಾಗಿರಲು ಬಯಸುತ್ತೇನೆ. ಇದು ಜನ ಸಮುದಾಯಕ್ಕೆ ನಿರ್ದಿಷ್ಟವಾದ ಮತ್ತು ಮುಖ್ಯವಾದ ವಿಷಯವಾಗಿದೆ ಎಂದು ಕಳೆದ ಆಗಸ್ಟ್‌ 10ರಂದು ತಮ್ಮ ನಿವೃತ್ತಿಯ ಬಗ್ಗೆ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+