ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Asia Cup 2022 ವೇಳಾಪಟ್ಟಿ ಪ್ರಕಟ: ಭಾರತ-ಪಾಕಿಸ್ತಾನ ಮುಖಾಮುಖಿಗೆ ಮುಹೂರ್ತ ಫಿಕ್ಸ್

|
Google Oneindia Kannada News

ಭಾರಿ ನಿರೀಕ್ಷೆ ಮೂಡಿಸಿರುವ ಏಷ್ಯಾಕಪ್ 2022ರ ವೇಳಾಪಟ್ಟಿ ಪ್ರಕಟವಾಗಿದೆ. ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಭಾರತ-ಪಾಕಿಸ್ತಾನ ಮುಖಾಮುಖಿಗೆ ಮುಹೂರ್ತ ನಿಗದಿಯಾಗಿದೆ. ಆಗಸ್ಟ್ 28 ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎ ಗುಂಪಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಆಗಸ್ಟ್ 27 ರಂದು ಏಷ್ಯಾಕಪ್ ಪಂದ್ಯಾವಳಿ ಆರಂಭವಾಗಲಿದೆ. ಸೆಪ್ಟೆಂಬರ್ 11ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿಯ ಏಷ್ಯಾ ಕಪ್‌ ಪಂದ್ಯಾವಳಿಗೆ ಯುಎಇ ಆತಿಥ್ಯ ವಹಿಸಲಿದೆ. ಈ ಮೊದಲು ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಟೂರ್ನಿಯನ್ನು ಆಯೋಜಿಸುವ ಹೊಣೆಗಾರಿಕೆಯಿಂದ ಹಿಂದೆ ಸರಿದಿತ್ತು. ನಂತರ ಸಭೆ ನಡೆಸಿದ್ದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪಂದ್ಯಾವಳಿಯನ್ನು ಯುಎಇಗೆ ಸ್ಥಳಾಂತರಿಸಲಾಯಿತು.

ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಮತ್ತೊಂದು ದಾಖಲೆ ಬರೆಯಲು ಸಿದ್ಧವಾದ ಟೀಂ ಇಂಡಿಯಾವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಮತ್ತೊಂದು ದಾಖಲೆ ಬರೆಯಲು ಸಿದ್ಧವಾದ ಟೀಂ ಇಂಡಿಯಾ

ಏಷ್ಯಾ ಕಪ್‌ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯವು ಭಾರತದ ಮೊದಲ ಪಂದ್ಯವಾಗಿದೆ ಮತ್ತು ಈ ಪಂದ್ಯದ ನಂತರ ರೋಹಿತ್ ಶರ್ಮಾ ನೇತೃತ್ವದ ತಂಡವು ಕ್ವಾಲಿಫೈಯರ್ ತಂಡಗಳ ವಿರುದ್ಧ ಮುಖಾಮುಖಿಯಾಗಲಿದೆ. ಗುಂಪು ಹಂತದ ಪಂದ್ಯಗಳ ನಂತರ, ಸೂಪರ್ 4 ಹಂತವಿರುತ್ತದೆ ಮತ್ತು ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿರುವ ಎರಡು ತಂಡಗಳು ಫೈನಲ್‌ಗೆ ಮುನ್ನಡೆಯುತ್ತವೆ.

ವೇಳಾಪಟ್ಟಿ ಹಂಚಿಕೊಂಡ ಜಯ್‌ ಶಾ

ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಏಷ್ಯಾ ಕಪ್‌ ಟೂರ್ನಿಯ ವೇಳಾಪಟ್ಟಿಯನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.

"ಏಷ್ಯಾಕಪ್‌ಗಾಗಿ ಆಗಸ್ಟ್ 27ರಂದು ಕದನ ಪ್ರಾರಂಭವಾಗುತ್ತದೆ, ಸೆಪ್ಟೆಂಬರ್ 11ರಂದು ಫೈನಲ್‌ ಪಂದ್ಯ ನಡೆಯುತ್ತದೆ. ಏಷ್ಯಾ ಕಪ್‌ನ 15 ನೇ ಆವೃತ್ತಿಯು ಐಸಿಸಿ ಟಿ 20 ವಿಶ್ವಕಪ್‌ಗೆ ಮುಂಚಿತವಾಗಿ ಸೂಕ್ತ ಸಿದ್ಧತೆಯಾಗಿ ಕಾರ್ಯನಿರ್ವಹಿಸುತ್ತದೆ." ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.

ಕಾಮನ್‌ವೆಲ್ತ್‌ 2022: ಜುಡೋದಲ್ಲಿ ಸುಶೀಲಾ ದೇವಿಗೆ ಬೆಳ್ಳಿ, ವಿಜಯ್‌ಗೆ ಕಂಚಿನ ಪದಕಕಾಮನ್‌ವೆಲ್ತ್‌ 2022: ಜುಡೋದಲ್ಲಿ ಸುಶೀಲಾ ದೇವಿಗೆ ಬೆಳ್ಳಿ, ವಿಜಯ್‌ಗೆ ಕಂಚಿನ ಪದಕ

 ಆಗಸ್ಟ್ 28ರಂದು ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ

ಆಗಸ್ಟ್ 28ರಂದು ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಎಂದರೆ ಎರಡೂ ದೇಶಗಳ ಕ್ರೀಡಾಭಿಮಾನಿಗಳಿಗೆ ಹಬ್ಬದ ಸಂಭ್ರಮ. ರಾಜಕೀಯ ಕಾರಣಗಳಿಂದ ಎರಡೂ ದೇಶಗಳ ನಡುವೆ ಕ್ರಿಕೆಟ್ ಪಂದ್ಯಗಳು ನಡೆಯದಿದ್ದರೂ, ವಿಶ್ವಕಪ್, ಏಷ್ಯಾಕಪ್, ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಳಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತವೆ.

ಕೊನೆಯ ಬಾರಿಗೆ ಭಾರತ-ಪಾಕಿಸ್ತಾನ 2021 ಅಕ್ಟೋಬರ್ 24ರಂದು ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಈಗ ಭಾರತ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ.

 ಪ್ರಶಸ್ತಿಗಾಗಿ ಸೆಣೆಸಲಿರುವ ಆರು ತಂಡಗಳು

ಪ್ರಶಸ್ತಿಗಾಗಿ ಸೆಣೆಸಲಿರುವ ಆರು ತಂಡಗಳು

ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಮತ್ತು ಕ್ವಾಲಿಫೈಯರ್ ಇದ್ದರೆ, ಬಿ ಗುಂಪಿನಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳಿವೆ. ಆಗಸ್ಟ್ 20 ಮತ್ತು 26 ರ ನಡುವೆ ನಡೆಯಲಿರುವ ಪಂದ್ಯಗಳಲ್ಲಿ ಹಾಂಕಾಂಗ್, ಕುವೈತ್, ಸಿಂಗಾಪುರ ಮತ್ತು ಯುಎಇ ನಡುವೆ ಅರ್ಹತಾ ಪಂದ್ಯಗಳು ನಡೆಯಲಿದ್ದು, ಅಗ್ರ ತಂಡ ಟೂರ್ನಿಯಲ್ಲಿ ಭಾಗವಹಿಸಲಿದೆ.

ಪಂದ್ಯಾವಳಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಆಡಲಾಗುತ್ತದೆ ಮತ್ತು ಆತಿಥ್ಯದ ಹಕ್ಕು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ನಲ್ಲಿ ಉಳಿದಿದೆ.

 ಯುಎಇಗೆ ಪಂದ್ಯಾವಳಿ ಸ್ಥಳಾಂತರ

ಯುಎಇಗೆ ಪಂದ್ಯಾವಳಿ ಸ್ಥಳಾಂತರ

ಈ ಮೊದಲು ಶ್ರೀಲಂಕಾದಲ್ಲಿ ಏಷ್ಯಾಕಪ್ ಪಂದ್ಯಾವಳಿ ಆಯೋಜನೆಗೆ ನಿರ್ಧರಿಸಲಾಗಿತ್ತು. ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾದಲ್ಲಿ ಪರಿಸ್ಥಿತಿ ಸರಿ ಇಲ್ಲದ ಕಾರಣ ಪಂದ್ಯಾವಳಿ ಬೇರೆ ಕಡೆ ಆಯೋಜಿಸಲು ಶ್ರೀಲಂಕಾ ಮನವಿ ಮಾಡಿತ್ತು.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಈ ಬಗ್ಗೆ ಚರ್ಚೆ ನಡೆಸಿ ನಂತರ ಶ್ರೀಲಂಕಾದಿಂದ ಯುಎಇಗೆ ಏಷ್ಯಾಕಪ್ ಟೂರ್ನಿಯನ್ನು ಸ್ಥಳಾಂತರಿಸಲಾಗಿತ್ತು. ಸ್ಥಳಾಂತರದ ಬಗ್ಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ, "ಶ್ರೀಲಂಕಾದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಪರಿಗಣಿಸಿ, ವ್ಯಾಪಕವಾದ ಚರ್ಚೆಯ ನಂತರ ಎಸಿಸಿ ಸ್ಥಳಾಂತರಿಸುವುದು ಸೂಕ್ತ ಎಂದು ಸರ್ವಾನುಮತದಿಂದ ತೀರ್ಮಾನಿಸಿದೆ. ಶ್ರೀಲಂಕಾದಿಂದ ಯುಎಇಗೆ ಪಂದ್ಯಾವಳಿ ಸ್ಥಳಾಂತರಿಸಲಾಗಿದೆ" ಎಂದು ತಿಳಿಸಿದ್ದರು.

"ಶ್ರೀಲಂಕಾದಲ್ಲಿ ಬಹು ನಿರೀಕ್ಷಿತ ಏಷ್ಯಾ ಕಪ್‌ ಪಂದ್ಯಾವಳಿ ಆಯೋಜಿಸಲು ನಾವು ನಿಜವಾಗಿಯೂ ಎದುರು ನೋಡುತ್ತಿದ್ದೇವೆ. ಪ್ರಸ್ತುತ ಸಂದರ್ಭ ಮತ್ತು ಈವೆಂಟ್‌ನ ಪ್ರಮಾಣವನ್ನು ಪರಿಗಣಿಸಿ ಏಷ್ಯಾ ಕಪ್ ಅನ್ನು ಯುಎಇಗೆ ಸ್ಥಳಾಂತರಿಸುವ ಎಸಿಸಿಯ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಏಷ್ಯಾ ಕಪ್‌ನ ರೋಚಕ ಆವೃತ್ತಿಯನ್ನು ಹೊಂದಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ಕ್ರಿಕೆಟ್ ಎಸಿಸಿ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ" ಎಂದು ಶ್ರೀಲಂಕಾ ಕ್ರಿಕೆಟ್ ಮುಖ್ಯಸ್ಥ ಶಮ್ಮಿ ಹೇಳಿದ್ದಾರೆ.

English summary
The schedule for the Asia Cup 2022 was announced on Tuesday. The tournament starts with a match between Sri Lanka and Afghanistan on August 27, India-Pakistan will face off on August 28 in a Group A clash at Dubai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X