ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್‌ ಟಿ20 ಲೀಗ್‌; ಸತ್ಯ ನಾದೆಲ್ಲಾ, ಶಂತನು ನಾರಾಯಣ್ ಹೂಡಿಕೆ

|
Google Oneindia Kannada News

ವಾಷಿಂಗ್ಟನ್‌, ಮೇ 20: ಅಮೆರಿಕದಲ್ಲಿ ಕ್ರಿಕೆಟ್‌ ಜನಪ್ರಿಯಗೊಳಿಸಲು ಯುಎಸ್‌ನ ಮೊದಲ ವೃತ್ತಿಪರ ಟಿ20 ಲೀಗ್ ಅನ್ನು ಪ್ರಾರಂಭಿಸಲು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಮತ್ತು ಅಡೋಬ್ ಸಿಇಒ ಶಂತನು ನಾರಾಯಣ್ ಸೇರಿದಂತೆ ಪ್ರಮುಖ ಭಾರತೀಯ-ಅಮೆರಿಕನ್ ಉದ್ಯಮಿಗಳು 120 ಮಿಲಿಯನ್ ಅಮೆರಿಕನ್ ಡಾಲರ್‌ ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮೇಜರ್‌ ಲೀಗ್ ಕ್ರಿಕೆಟ್ ಅಮೆರಿಕದ ಮೊದಲ ವೃತ್ತಿಪರ ಟಿ20 ಲೀಗ್ ಆಗಿದ್ದು, ಅಮೆರಿಕದ ಪ್ರಮುಖ ವ್ಯಾಪಾರ ನಾಯಕರ ಗುಂಪಿನ ನೇತೃತ್ವದಲ್ಲಿ 44 ಮಿಲಿಯನ್‌ ಡಾಲರ್‌ ಮೊತ್ತದ ದೇಣಿಗೆಯನ್ನು ಪೂರ್ಣಗೊಳಿಸಿರುವುದಾಗಿ ಗುರುವಾರ ತಿಳಿಸಿದೆ.

ಮುಂದಿನ 12 ತಿಂಗಳುಗಳಲ್ಲಿ ಮತ್ತಷ್ಟು ನಿಧಿಸಂಗ್ರಹಣೆಯಲ್ಲಿ76 ಮಿಲಿಯನ್ ಯುಎಸ್‌ ಡಾಲರ್‌ ಮೊತ್ತವನ್ನು ಹೆಚ್ಚುವರಿ ಬದ್ಧತೆಯೊಂದಿಗೆ ಸಂಗ್ರಹಿಸಿಲು ನಿರ್ಧರಿಸಲಾಗಿದೆ. ದೇಶದ ಮೊದಲ ವೃತ್ತಿಪರ T20 ಲೀಗ್ ಅನ್ನು ಪ್ರಾರಂಭಿಸಲು ಒಟ್ಟು 120 ಮಿಲಿಯನ್ ಯುಎಸ್‌ಡಿಗಿಂತಲೂ ಹೆಚ್ಚು ಹಣವನ್ನು ನಿಯೋಜಿಸಲು ಯೋಜಿಸಲಾಗಿದೆ.

Satya Nadella, Shantanu Narayen And Others Invest In MLC T20 Leage

ಪ್ರಥಮ ದರ್ಜೆ ಸೌಲಭ್ಯಗಳಿಗೆ ಬಳಕೆ; ಈ ಹೂಡಿಕೆದಾರರ ಗುಂಪಿನಿಂದ ಬರುವ ಗಮನಾರ್ಹ ನಿಧಿಯನ್ನು ಮೇಜರ್ ಲೀಗ್ ಕ್ರಿಕೆಟ್‌ನ ಪ್ರಥಮ ದರ್ಜೆ ಸೌಲಭ್ಯಗಳು, ಸ್ಟೇಡಿಯಂ ತರಬೇತಿ ಕೇಂದ್ರಗಳನ್ನು ನಿರ್ಮಿಸಲು ಮತ್ತು ದೇಶಾದ್ಯಂತ ಕ್ರೀಡೆಯ ಅಭಿವೃದ್ಧಿಯನ್ನು ವೇಗಗೊಳಿಸಲು ಅನುವು ಮಾಡಿಕೊಡಲಿದೆ. ವಿಶ್ವದರ್ಜೆಯ ವೃತ್ತಿಪರ ಕ್ರಿಕೆಟ್ ಅನ್ನು ಅತಿದೊಡ್ಡ ಕ್ರೀಡಾ ಮಾರುಕಟ್ಟೆಗೆ ತರಲಿದೆ" ಎಂದು ಮೇಜರ್ ಲೀಗ್ ಕ್ರಿಕೆಟ್ ಸಹ- ಸಂಸ್ಥಾಪಕರಾದ ಸಮೀರ್ ಮೆಹ್ತಾ ಮತ್ತು ವಿಜಯ್ ಶ್ರೀನಿವಾಸನ್ ಹೇಳಿದ್ದಾರೆ.

"ಈ ಗುಂಪು ಪ್ರಮುಖ ವ್ಯಾಪಾರ ಕಾರ್ಯನಿರ್ವಾಹಕರನ್ನು(ಸಿಎಒ) ಮತ್ತು ವಿಶ್ವದ ಕೆಲವು ಪ್ರಮುಖ ಕಂಪನಿಗಳನ್ನು ಮುನ್ನಡೆಸಿರುವ ಯಶಸ್ವಿ ಟೆಕ್ ಉದ್ಯಮಿಗಳನ್ನು ಒಳಗೊಂಡಿದೆ. ಆದ್ದರಿಂದ ಇವರು ಈ ಟ್ವೆಂಟಿ20 ಲೀಗ್ ಅನ್ನು ಪ್ರಾರಂಭಿಸುವುದಕ್ಕೆ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ನ ಇವೆಂಟ್ಸ್‌ನಲ್ಲಿ ಅಮೆರಿಕವನ್ನು ವಿಶ್ವದ ಪ್ರಮುಖ ಘಟನೆಗಳಲ್ಲಿ ಒಂದಾಗಿಸಲು ಬಯಸುವ ಎಂಎಲ್‌ಸಿಯ ಯೋಜನೆಗಳಿಗೆ ಬೆಂಬಲ ನೀಡಲಿದ್ದಾರೆ" ಎಂದು ಅವರು ಹೇಳಿದರು.

ನನ್ನಲ್ಲಿ ಲೀಡರ್‌ಶಿಪ್ ಬೆಳೆಯಲು ಕಾರಣ ಕ್ರಿಕೆಟ್‌; ಎಂಎಲ್‌ಸಿ ಪ್ರಮುಖ ಹೂಡಿಕೆದಾರರಾಗಿರುವ ನಾದೆಲ್ಲಾ, ನಾನು ಭಾರತದಲ್ಲಿ ಬೆಳದಿರುವುದರಿಂದ, ಕ್ರಿಕೆಟ್‌ ನನ್ನ ಉತ್ಸಾಹಗಳಲ್ಲಿ ಒಂದಾಗಿದೆ. ಕ್ರಿಕೆಟ್‌ ಆಡಿದ್ದರಿಂದ ಅದು ನನಗೆ ಒಂದು ತಂಡವಾಗಿ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಕಲಿಸಿದೆ ಮತ್ತು ಆ ನಾಯಕತ್ವ ಗುಣ ವೃತ್ತಿ ಜೀವನದಾದ್ಯಂತ ನನ್ನಲ್ಲಿ ಉಳಿದುಕೊಂಡಿದೆ ಎಂದು ತಿಳಿಸಿದ್ದಾರೆ.

Satya Nadella, Shantanu Narayen And Others Invest In MLC T20 Leage

ನಾನು ಶಾಲೆಯ ತಂಡದ ಸದಸ್ಯರಾಗಿ ಸ್ಪರ್ಧಾತ್ಮಕವಾಗಿ ಕ್ರಿಕೆಟ್ ಆಡಿದ್ದೇನೆ ಮತ್ತು ಟೆಸ್ಟ್ ಕ್ರಿಕೆಟ್ ಅನ್ನು ಈಗಲೂ ವೀಕ್ಷಿಸುವುದನ್ನು ಆನಂದಿಸುತ್ತೇನೆ. ಏಕೆಂದರೆ ವಿಶ್ವದ ಯಾವುದೇ ಕ್ರೀಡೆಯ ದೀರ್ಘ ಸ್ವರೂಪವಾಗಿದೆ ಎಂದು ಹೇಳಿದ್ದಾರೆ.

English summary
Indian-American business leaders including Microsoft CEO Satya Nadella and Adobe CEO Shantanu Narayen invest in Major League Cricket, which is the first T20 professional league in USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X