ಹೋಗಿ ದೇಶವನ್ನು ಲೂಟಿ ಮಾಡುತ್ತಿರುವವರಿಗೆ ವಿಶ್ ಮಾಡ್ತೀರಲ್ಲ: ಮೋದಿ ಬರ್ತ್‌ಡೇಗೆ ವಿಶ್ ಮಾಡಿದ ತೆಂಡೂಲ್ಕರ್‌ಗೆ ನೆಟ್ಟಿಗರ ಕ್ಲಾಸ್
Sachin Tendulkar: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆಪ್ಟೆಂವರ್ 17) ಹುಟ್ಟುಹಬ್ಬದ ಸಂಭ್ರದಲ್ಲಿದ್ದು, ಶುಭಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದೀಗ ಅದೇ ರೀತಿ ಕ್ರಿಕೆಟ್ ದೇವರು ಅಂತಲೇ ಪ್ರಸಿದ್ಧಿಯಾಗಿರುವ ಸಚಿನ್ ತೆಂಡೂಲ್ಕರ್ ಶುಭಕೋರಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಶುಭಾಶಯ ಕೋರಿ ಮಾಡಿದ ಸಾಮಾಜಿಕ ಜಾಲತಾಣದ ಪೋಸ್ಟ್ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದೇಶಕ್ಕೆ ಪ್ರಧಾನಿಯವರ ಕೊಡುಗೆಯನ್ನು ಶ್ಲಾಘಿಸಿ ಸಚಿನ್ ಹಂಚಿಕೊಂಡ ಸಂದೇಶಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹಾಗಾದ್ರೆ ಏನೆಲ್ಲಾ ಹೇಳಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಸಚಿನ್ ತೆಂಡೂಲ್ಕರ್ ಟ್ವಿಟ್‌ನಲ್ಲೇನಿದೆ?
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯಲ್ಲಿ, 'ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇಶಕ್ಕಾಗಿ ನಿಮ್ಮ ಅಹೋರಾತ್ರಿ ಸಮರ್ಪಣಾ ಭಾವವು ನಮ್ಮೆಲ್ಲರಿಗೂ ಸದಾ ಸ್ಪೂರ್ತಿಯಾಗಿದೆ. ಭಾರತವನ್ನು ಹೊಸ ದಿಕ್ಕಿಗೆ ಕೊಂಡೊಯ್ಯುತ್ತಿರುವ ನಿಮಗೆ ಆ ದೇವರು ಸುದೀರ್ಘ ಆಯುಷ್ಯ, ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ,' ಎಂದು ಬರೆದುಕೊಂಡಿದ್ದಾರೆ.
ಸಚಿನ್ ಟ್ವಿಟ್ ಪೋಸ್ಟ್‌ಗೆ ಮಿಶ್ರಪ್ರತಿಕ್ರಿಯೆ
ಸಚಿನ್ ಅವರ ಈ ಶುಭಾಶಯದ ಟ್ವಿಟ್ ಹೊರಬೀಳುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ಆರಂಭವಾದವು. ಹಲವು ಅಭಿಮಾನಿಗಳು ಹಾಗೂ ನೆಟ್ಟಿಗರು ಪ್ರಧಾನಿಯವರಿಗೆ ಜನ್ಮದಿನದ ಶುಭಾಶಯ ತಿಳಿಸುತ್ತಾ ಸಚಿನ್ ಅವರ ಮಾತುಗಳನ್ನು ಬೆಂಬಲಿಸಿದರೆ, ಮತ್ತೊಂದೆಡೆ ತೀವ್ರ ಅಸಮಾಧಾನ ಮತ್ತು ಟೀಕೆಗಳು ವ್ಯಕ್ತವಾಗಿವೆ.
ಸಚಿನ್ ಪೊಸ್ಟ್ ವಿರುದ್ಧ ನೆಟ್ಟಿಗರ ಆಕ್ರೋಶ
ಕೆಲವು ನೆಟ್ಟಿಗರು ಆಕ್ರೋಶ ಹೊರಹಾಕಿದ್ದು, ಪ್ರಸ್ತುತ ದೇಶದಲ್ಲಿರುವ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ವಿಷಯಗಳನ್ನು ಉಲ್ಲೇಖಿಸಿ ಟೀಕಿಸಿದ್ದಾರೆ. 'ದೇಶದ ಅಭಿವೃದ್ಧಿಗಿಂತ ಜನಸಾಮಾನ್ಯರ ಕಷ್ಟಗಳು ಹೆಚ್ಚಾಗುತ್ತಿರುವಾಗ, ಇಂತಹ ನಾಯಕರಿಗೆ ಶುಭಕೋರುವುದು ಸೂಕ್ತವಲ್ಲ,' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಮತ್ತಷ್ಟು ಕಠಿಣ ಪದಗಳನ್ನು ಬಳಸಿ ಸಚಿನ್ ಅವರ ಪೋಸ್ಟ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. 'ಹೋಗಿ ಹೋಗಿ ದೇಶದ ಸಂಪತ್ತನ್ನು ಸರಿಯಾಗಿ ನಿರ್ವಹಿಸದವರಿಗೆ ಬೆಂಬಲ ನೀಡುತ್ತಿದ್ದೀರಲ್ಲ,' ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಭಿಮಾನಿಗಳ ಬೆಂಬಲ..
ಮತ್ತೊಂದೆಡೆ ಸಚಿನ್ ತೆಂಡೂಲ್ಕರ್ ಅವರ ಬೆಂಬಲಿಗರು ಮತ್ತು ಪ್ರಧಾನಿ ಮೋದಿಯವರ ಅಭಿಮಾನಿಗಳು ಈ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. 'ದೇಶದ ಪ್ರಧಾನಿಗೆ ಜನ್ಮದಿನದ ಶುಭಾಶಯ ಕೋರುವುದು ಸಾಮಾನ್ಯ ಕನಿಷ್ಠ ಸೌಜನ್ಯ. ಇದರಲ್ಲಿ ಯಾವುದೇ ರಾಜಕೀಯ ಹುಡುಕುವುದು ಅಥವಾ ಕ್ರೀಡಾಪಟುವನ್ನು ಗುರಿಮಾಡುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯವರ ಸೇವೆಯನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ,' ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಪ್ರಧಾನಿ ಮೋದಿಯವರ ಬೆಂಬಲಿಗರು ಸಚಿನ್ ಪರ ಧ್ವನಿ ಎತ್ತಿದ್ದಾರೆ. 'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಅತ್ಯುನ್ನತ ನಾಯಕನಿಗೆ ಜನ್ಮದಿನದ ಶುಭಾಶಯ ಕೋರುವುದು ಕನಿಷ್ಠ ನಾಗರಿಕ ಸೌಜನ್ಯ ಹಾಗೂ ಗೌರವದ ಸಂಕೇತವಾಗಿದೆ. ಪ್ರಧಾನಿಯವರ ಸೇವೆಯನ್ನು ಗುರುತಿಸಿ ಶುಭಕೋರುವುದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ,' ಎಂದು ಹೇಳಿದ್ದಾರೆ.
Wishing a very Happy Birthday to Hon'ble Prime Minister Shri @narendramodi ji. Your tireless dedication to the nation continues to inspire us all. Praying for your long life, good health, and happiness as you guide India to new heights. 🙏🏼
— Sachin Tendulkar (@sachin_rt) September 17, 2026
ಸಾಮಾನ್ಯವಾಗಿ ಕ್ರೀಡಾಪಟುಗಳು ಮತ್ತು ಚಿತ್ರರಂಗದ ಪ್ರಮುಖರು ಪ್ರಮುಖ ನಾಯಕರಿಗೆ ಶುಭಕೋರಿದಾಗ ಇಂತಹ ವಿವಾದಗಳು ಸೃಷ್ಟಿಯಾಗುವುದು ಹೊಸದೇನಲ್ಲ. ಆದರೆ 'ಕ್ರಿಕೆಟ್ ದೇವರು' ಎಂದೇ ಪ್ರಸಿದ್ಧರಾದ ಸಚಿನ್ ತೆಂಡೂಲ್ಕರ್ ಅವರ ಪೋಸ್ಟ್ ಈ ಮಟ್ಟಿನ ಸಾರ್ವಜನಿಕ ಚರ್ಚೆ ಮತ್ತು ಮಿಶ್ರಪ್ರತಿಕ್ರಿಯೆಗೆ ಕಾರಣವಾಗಿರುವುದು ಸದ್ಯ ಟ್ರೆಂಡಿಂಗ್ ವಿಷಯವಾಗಿದೆ. ಒಟ್ಟಿನಲ್ಲಿ ಈ ಚರ್ಚೆ ಇನ್ನೂ ಯಾವ ಹಂತ ತಲುಪುತ್ತದೆಯೋ ಎಂದು ಕಾದುನೋಡಬೇಕಿದೆ.


Click it and Unblock the Notifications
