Rubina Francis: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಶೂಟಿಂಗ್‌ನಲ್ಲಿ ಕಂಚು ಗೆದ್ದ ರುಬಿನಾ
ನಡೆಯುತ್ತಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲಿಟ್‌ಗಳ ಪದಕದ ಬೇಟೆ ಮುಂದುವರೆದಿದೆ. ಮುಖ್ಯವಾಗಿ ಶೂಟಿಂಗ್ ವಿಭಾಗದಲ್ಲಿ ಶುಕ್ರವಾರ ಭಾರತಕ್ಕೆ ಮೂರು ಪದಕ ಬಂದಿದ್ದರೆ, ಶನಿವಾರ ಕೂಡ ಭಾರತಕ್ಕೆ ಪದಕಗಳು ಸಿಕ್ಕಿದೆ. ರುಬಿನಾ ಫ್ರಾನ್ಸಿಸ್ 10 ಮೀಟರ್ ಏರ್ ಪಿಸ್ತೂಲ್ ಎಸ್‌ಎಸ್1 ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ ಐದಕ್ಕೇರಿದೆ.
ಮಧ್ಯಪ್ರದೇಶದ 25 ವರ್ಷದ ಶೂಟರ್ ರುಬಿನಾ ಫ್ರಾನ್ಸಿಸ್ 6 ನೇ ಸುತ್ತಿನಲ್ಲಿ ಒಟ್ಟು 211.1 ಅಂಕಗಳೊಂದಿಗೆ ಮುಗಿಸುವ ಮುಗಿಸಿ ಕಂಚಿನ ಪದಕ ಗೆದ್ದರು. ಒಟ್ಟು 236.8 ಅಂಕಗಳೊಂದಿಗೆ ಇರಾನ್‌ನ ಸರೆಹ್ ಜವನಮರ್ಡಿ ಚಿನ್ನದ ಪದಕ ಗೆದ್ದರು. ರುಬಿನಾ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಪಿಸ್ತೂಲ್ ಶೂಟರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಶೂಟರ್‌ಗಳ ಉತ್ತಮ ಪ್ರದರ್ಶನ ಮುಂದುವರೆದಿದೆ. ಶುಕ್ರವಾರ ಮೂವರು ಶೂಟರ್‌ಗಳು ತಲಾ ಒಂದು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದಿದ್ದಾರೆ. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ನಾಲ್ಕನೇ ಶೂಟರ್ ಎಂಬ ಹೆಗ್ಗಳಿಕೆಗೆ ರುಬಿನಾ ಪಾತ್ರರಾಗಿದ್ದಾರೆ.
ಯಾರು ಈ ರುಬಿನಾ ಫ್ರಾನ್ಸಿಸ್?
ರುಬಿನಾ ಫ್ರಾನ್ಸಿಸ್ ಮಧ್ಯಪ್ರದೇಶದ ಜಬಲ್‌ಪುರದ ಪ್ರಸಿದ್ಧ ಪ್ಯಾರಾ ಶೂಟರ್. ಕಾಲಿನ ಸಮಸ್ಯೆಗಳ ಜೊತೆ ಕೆಳಮಧ್ಯಮ ವರ್ಗದಲ್ಲಿ ಅವರು ಜನಿಸಿದರು. ಹಣಕಾಸಿನ ಕೊರತೆಯ ನಡುವೆಯೂ ರುಬಿನಾ ತಂದೆ ಮೆಕ್ಯಾನಿಕ್ ಸೈಮನ್ ಫ್ರಾನ್ಸಿಸ್ ಮಗಳ ಶೂಟಿಂಗ್ ಸಾಧನೆಗೆ ಆಸರೆಯಾಗಲು ತುಂಬಾ ಕಷ್ಟಪಟ್ಟರು.
ಒಲಂಪಿಕ್ ಅಥ್ಲೀಟ್ ಗಗನ್ ನಾರಂಗ್ ಅವರ ಉತ್ಸಾಹದಿಂದ ಪ್ರೇರಿತರಾದ ರುಬಿನಾ 2015 ರಲ್ಲಿ ಶೂಟಿಂಗ್ ಪ್ರಯಾಣವನ್ನು ಪ್ರಾರಂಭಿಸಿದರು. ಅವರ ಪರಿಶ್ರಮ ಮತ್ತು ಅವರ ತಂದೆಯ ಅಚಲ ಪ್ರಯತ್ನಗಳು ಹಣಕಾಸಿ ಸಮಸ್ಯೆಯ ನಡುವೆಯೂ 2017 ರಲ್ಲಿ ಪುಣೆಯ ಗನ್ ಫಾರ್ ಗ್ಲೋರಿ ಅಕಾಡೆಮಿಗೆ ಸೇರಿದರು. ಅಲ್ಲಿಂದ ಆಕೆ ಯಶಸ್ಸಿನ ಒಂದೊಂದೆ ಮಟ್ಟಿಲು ಹತ್ತಿದರು.
ರುಬಿನಾ ಅವರ ಸಾಧನೆಗಳು
2020ರ ಪ್ಯಾರಾಲಿಂಪಿಕ್ಸ್ - ಪಿ2 10 ಮೀ ಏರ್ ಪಿಸ್ತೂಲ್ ಶೂಂಟಿಂಗ್‌ನಲ್ಲಿ 7ನೇ ಸ್ಥಾನ ಪಡೆದರು.
2022ರ ಪ್ಯಾರಾ ಗೇಮ್ಸ್ - ಪಿ2 10 ಮೀ ಏರ್ ಪಿಸ್ತೂಲ್ ಶೂಂಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದರು.
2022 ಚಾಂಗ್ವಾನ್ ವಿಶ್ವಕಪ್ - 1 ಬೆಳ್ಳಿ ಮತ್ತು ಎರಡು ಕಂಚಿನ ಪದಕ
2022ರ ಚಟೌರೊಕ್ಸ್ ವಿಶ್ವಕಪ್ - 1 ಚಿನ್ನದ ಪದಕ (ಮಿಶ್ರ ತಂಡ), 2 ಬೆಳ್ಳಿ ಪದಕ ಮತ್ತು ಒಂದು ಕಂಚು ಗೆದ್ದರು.
2023ರ ಒಸಿಜೆಕ್ ವಿಶ್ವಕಪ್ - ಪಿ2 10 ಮೀ ಏರ್ ಪಿಸ್ತೂಲ್ ಶೂಂಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಮತ್ತು ಪಿ5 ಮಿಶ್ರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಗೆದ್ದರು.
2023 ಚಾಂಗ್ವಾನ್ ವಿಶ್ವಕಪ್ - 2 ಬೆಳ್ಳಿ ಮತ್ತು ಒಂದು ಕಂಚಿನ ಪದಕ












Click it and Unblock the Notifications