Virat Kohli: ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ ಆರ್‌ಆರ್‌ಆರ್ ನಾಯಕ!
ಇತ್ತೀಚೆಗೆ ಒರಿಜಿನಲ್ ಹಾಡಿಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿರುವ ಆರ್‌ಆರ್‌ಆರ್ ಚಿತ್ರ ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ರಾಜಮೌಳಿ ನಿರ್ದೇಶನದ ಚಿತ್ರದ ನಾಯಕನಟರಲ್ಲಿ ಒಬ್ಬರಾದ ರಾಮ್ ಚರಣ್ ತೇಜಾ ಕೂಡ ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದುಕೊಂಡಿದ್ದಾರೆ.
ರಾಮ್ ಚರಣ್ ಮತ್ತು ಎನ್‌ಟಿಆರ್ ನಟಿಸಿರುವ 'ಹಳ್ಳಿ ನಾಟು' ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬ್ರಿಟೀಷ್ ಪೊಲೀಸ್ ಅಧಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ರಾಮ್ ಚರಣ್ ಮಿಂಚಿದ್ದಾರೆ.

ರಾಮ್ ಚರಣ್ ತೇಜ ತಮ್ಮ ನೆಚ್ಚಿನ ಕ್ರಿಕೆಟಿಗನ ಬಗ್ಗೆ ಮಾತನಾಡಿದ್ದು, ಅವರ ಬಯೋಪಿಕ್‌ನಲ್ಲಿ ಅಭಿನಯಿಸಲು ಕಾಯುತ್ತಿರುವುದಾಗಿ ಹೇಳಿದ್ದಾರೆ. ಹೌದು, ರಾಮ್ ಚರಣ್‌ಗೆ ವಿರಾಟ್ ಕೊಹ್ಲಿ ಎಂದರೆ ತುಂಬಾ ಇಷ್ಟವಂತೆ. ವಿರಾಟ್ ಕೊಹ್ಲಿ ಕುರಿತಾದ ಜೀವನ ಚರಿತ್ರೆ ಮಾಡಲು ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಇಂಡಿಯಾ ಟುಡೆ ವಾಹಿನಿಯಲ್ಲಿ ನಡೆದ ಕಾನ್ಫರೆನ್ಸ್‌ನಲ್ಲಿ ಮಾತನಾಡುವ ಸಂದರ್ಭದಲ್ಲಿ ರಾಮ್ ಚರಣ್ ತಮ್ಮ ಆಸೆಯನ್ನು ವ್ಯಕ್ತಪಡಿಸಿದರು. ಕ್ರೀಡಾ ಆಧಾರಿತ ಚಿತ್ರದಲ್ಲಿ ನಟಿಸಲು ಬಯಸುತ್ತೀರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕೊಹ್ಲಿ ಮೇಲಿನ ಅಭಿಮಾನವನ್ನು ಬಹಿರಂಗಪಡಿಸಿದ್ದಾರೆ.

ಕೊಹ್ಲಿಯದ್ದು ಸ್ಪೂರ್ತಿದಾಯಕ ವ್ಯಕ್ತಿತ್ವ
"ವಿರಾಟ್ ಕೊಹ್ಲಿಯವರದ್ದು ಸ್ಪೂರ್ತಿದಾಯಕ ವ್ಯಕ್ತಿತ್ವ, ಅವಕಾಶ ಸಿಕ್ಕರೆ ಅವರ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧವಿರುವುದಾಗಿ ಹೇಳಿದರು. ನಾನು ಕೂಡ ನೋಡಲು ಸ್ವಲ್ಪ ಕೊಹ್ಲಿಯವರಂತೆ ಕಾಣುವುದರಿಂದ ಆ ಪಾತ್ರಕ್ಕೆ ನ್ಯಾಯ ಒದಗಿಸುವ ವಿಶ್ವಾಸವಿದೆ" ಎಂದು ಹೇಳಿದರು.
ರಾಮ್ ಚರಣ್ ಅವರ ಮಾತುಗಳು ಅಭಿಮಾನಿಗಳಲ್ಲಿ ಸಂತೋಷವನ್ನು ಉಂಟು ಮಾಡಿದೆ. ವಿಶ್ವದಾದ್ಯಂತ ಕೊಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಕೊಹ್ಲಿ, ಕ್ರಿಕೆಟ್ ಜಗತ್ತಿನಲ್ಲಿ ಹಲವು ದಾಖಲೆಗಳ ಸರದಾರ. ದೆಹಲಿಯ ಹುಡುಗನೊಬ್ಬ ವಿಶ್ವಕ್ರಿಕೆಟ್‌ನಲ್ಲಿ ಅಗ್ರ ಕ್ರಿಕೆಟರ್ ಆಗಿ ಮೆರೆದ ಕೊಹ್ಲಿ ಸಾಧನೆಯ ಹಾದಿ ಸಾಕಷ್ಟು ಜನರಿಗೆ ಸ್ಪೂರ್ತಿದಾಯಕ.
ವಿರಾಟ್ ಕೊಹ್ಲಿಯಂತೆ ರಾಮ್ ಚರಣ್ ಕೂಡ ಅತ್ಯುತ್ತಮ ಫಿಟ್‌ನೆಸ್ ಹೊಂದಿದ್ದಾರೆ. ಯಾವುದೇ ಪಾತ್ರದಲ್ಲೂ ಉತ್ತಮವಾಗಿ ಅಭಿನಯಿಸುವ ರಾಮ್ ಚರಣ್ ಕೊಹ್ಲಿ ಪಾತ್ರಕ್ಕೆ ಉತ್ತಮ ಆಯ್ಕೆ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಸೂಪರ್ ಹಿಟ್ ಆಗಿದ್ದ ಧೋನಿ ಚಿತ್ರ
ಭಾರತ ತಂಡ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಅವರ ಜೀವನ ಚರಿತ್ರೆ ಆಧಾರಿತ ಚಿತ್ರ 2016ರಲ್ಲಿ ತೆರೆಕಂಡಿತ್ತು. ಎಂಎಸ್ ಧೋನಿ ಪಾತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಮಿಂಚಿದ್ದರು. ವಿಮರ್ಶಕರು ಮತ್ತು ಅಭಿಮಾನಿಗಳಿಂದ ಚಿತ್ರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದ್ದಲ್ಲದೆ, ದೊಡ್ಡ ಲಾಭವನ್ನು ಕೂಡ ಡಿತ್ತು.
1983ರಲ್ಲಿ ಭಾರತ ತಂಡ ಮೊದಲ ವಿಶ್ವಕಪ್ ಗೆದ್ದ ಬಗ್ಗೆ ತಯಾರಾದ ಚಿತ್ರ 83 ಕೂಡ ತೆರೆಗೆ ಬಂದಿತ್ತು. ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ಅಭಿನಯಿಸಿದ್ದರು. ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದರು, ವಿಮರ್ಶಕರ ಮೆಚ್ಚುಗೆ ಗಳಿಸಿಕೊಂಡಿತ್ತು.
ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಕುರಿತಾದ 'ಶಭಾಶ್ ಮಿಥು' ಕೂಡ ತೆರೆ ಕಂಡಿದೆ. ಭಾರತದ ಮಹಿಳಾ ಕ್ರಿಕೆಟ್‌ನ ಲೆಜೆಂಡ್ ಜೂಲನ್ ಗೋಸ್ವಾಮಿ ಕುರಿತಾದ ಚಿತ್ರ ಕೂಡ ತಯಾರಾಗುತ್ತಿದೆ. 'ಚಕ್ಡಾ ಎಕ್ಸ್‌ಪ್ರೆಸ್' ಎಂದು ಹೆಸರಿಟ್ಟಿರುವ ಈ ಚಿತ್ರದಲ್ಲಿ ಗೋಸ್ವಾಮಿ ಪಾತ್ರದಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅಭಿನಯಿಸುತ್ತಿದ್ದಾರೆ.












Click it and Unblock the Notifications