RR vs RCB: ಆರ್‌ಸಿಬಿ ತಂಡದಲ್ಲಿ ಬದಲಾವಣೆ ಮಾಡಿದರೆ ಜಯ: ಇಲ್ಲದಿದ್ದರೆ ಮತ್ತೆ ಕಾಡಲಿದೆ ಸೋಲಿನ ಗಾಯ
ತವರಿನಲ್ಲಿ ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಐದನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡದ ಸವಾಲು ಎದುರಿಸಲಿದೆ.
ಶನಿವಾರ ಜೈಪುರನ ಮೈದಾನದಲ್ಲಿ 17ನೇ ಆವೃತ್ತಿಯ 19ನೇ ಪಂದ್ಯದಲ್ಲಿ ಆರ್‌ಸಿಬಿ ಟೂರ್ನಿಯಲ್ಲಿ ಎರಡನೇ ಗೆಲುವಿನ ಕನಸು ಕಾಣುತ್ತಿದೆ. ಈಗಾಗಲೇ ಆಡಿರುವ ಮೂರು ಪಂದ್ಯಗಳನ್ನು ಗೆದ್ದು ಅಜೇಯ ಓಟವನ್ನು ಮುಂದುವರೆಸುತ್ತಿರುವ ರಾಜಸ್ಥಾನ, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಈ ಪಂದ್ಯದಲ್ಲಿ ಫಾಫ್ ಪಡೆ ಗೆಲುವು ಸಾಧಿಸಲು ತಂಡದಲ್ಲಿ ಬದಲಾವಣೆ ಮಾಡುವ ಅವಶ್ಯಕತೆ ಇದೆ.

ಬದಲಾವಣೆ ಅಗತ್ಯ
ಈಗಾಗಲೇ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಗೆಲುವು ಕಂಡಿರುವ ಆರ್‌ಸಿಬಿ, ಮತ್ತೆ ಜಯದ ಟ್ರ್ಯಾಕ್‌ಗೆ ಮರಳಲು ಬಲಿಷ್ಠ ತಂಡವನ್ನು ಕಟ್ಟುವ ಅಗತ್ಯವಿದೆ. ಪ್ರತಿ ಸಲದಂತೆ ಆರ್‌ಸಿಬಿ ವಿದೇಶಿ ಆಟಗಾರರ ಮೇಲಿನ ಪ್ರೀತಿಯನ್ನು ಕಡಿಮೆ ಮಾಡಿ, ತಮ್ಮ ತಂಡದಲ್ಲಿರುವ ದೇಶೀಯ ಆಟಗಾರರಿಗೆ ಮಣೆ ಹಾಕುವುದು ಅಗತ್ಯ.
ಕಳೆದ ಪಂದ್ಯದಲ್ಲಿ ವಿಜಯಕುಮಾರ್ ವೈಶಾಖ್ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿರಲಿಲ್ಲ. ಇಂದಿನ ಪಂದ್ಯದಲ್ಲಿ ಸ್ಥಾನ ನೀಡುವ ಅವಶ್ಯಕತೆ ಇದೆ. ಇವರು ಡೆತ್ ಓವರ್‌ಗಳಲ್ಲಿ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸಬಲ್ಲರು. ದೇಶೀಯ ಟೂರ್ನಿಗಳಲ್ಲಿ ಇವರ ಪ್ರದರ್ಶನ ಸ್ಥಿರವಾಗಿದೆ.
ಲಾಕಿಗೆ ಸ್ಥಾನ
ಇನ್ನು ಯಶ್ ದಯಾಳ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಅದರಂತೆ ಅವರಿಗೆ ಸ್ಥಾನ ಫಿಕ್ಸ್ ಎನಿಸುತ್ತಿದೆ. ವಿದೇಶಿ ಬೌಲರ್‌ಗಳು ತಂಡದ ಚಿಂತೆಯನ್ನು ದುಪಟ್ಟು ಮಾಡಿದ್ದಾರೆ. ಭಾರೀ ಮೊತ್ತವನ್ನು ನೀಡಿ ಖರೀದಿಸಿದ ಅಲ್ಜಾರಿ ಜೋಸೆಫ್ ಪ್ರಭಾವ ಬೀರುತ್ತಿಲ್ಲ ಇನ್ನು ರೀಸ್ ಟೋಪ್ಲಿ ತಂಡದ ಅಗತ್ಯಕ್ಕೆ ಅನುಸಾರವಾಗಿ ಬೌಲಿಂಗ್ ಮಾಡಲಿಲ್ಲ. ಹೀಗಾಗಿ ಇವರಿಬ್ಬರಿಗೂ ರೆಸ್ಟ್ ನೀಡಿದರೆ ಉತ್ತಮ.

ಇನ್ನೊಬ್ಬ ವೇಗದ ಬೌಲರ್ ಸ್ಥಾನದಲ್ಲಿ ನ್ಯೂಜಿಲೆಂಡ್ ತಂಡದ ಲಾಕಿ ಫಾರ್ಗ್ಯೂಸನ್ ಅವರಿಗೆ ಅವಕಾಶ ನೀಸಬೇಕಿದೆ. ಇವರು ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ತಂಡಕ್ಕೆ ನೆರವಾಗಬಲ್ಲರು. ಇನ್ನು ಆಕಶ್ ದೀಪ್ ಅವರಿಗೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ನೀಡಬೇಕು.
ಜಾಕ್ಸ್‌ಗೆ ಅವಕಾಶ
ಇನ್ನು ಸಾಲು ಸಾಲು ವೈಫಲ್ಯಗಳನ್ನು ಅನುಭವಿಸುತ್ತಿರುವ ಕ್ಯಾಮರೂನ್ ಗ್ರೀನ್ ಅವರಿಗೆ ರೆಸ್ಟ್ ನೀಡಿ ವಿಲ್ ಜಾಕ್ಸ್ ಅವರಿಗೆ ಅವಕಾಶ ನೀಡುವ ಅನಿವಾರ್ಯತೆ ಇದೆ. ಟೂರ್ನಿ ಈಗ ಮಹತ್ವದ ಹಂತದತ್ತ ಮುಖ ಮಾಡುತ್ತಿದೆ. ಈ ಸಮಯದಲ್ಲಿ ಪ್ರದರ್ಶನ ನೀಡದ ಆಟಗಾರರನ್ನು ಬೆಂಚ್ ಮೇಲೆ ಕೂರಿಸುವುದು ಅನಿವಾರ್ಯ. ವಿಲ್ ಚಾಕ್ಸ್ ಟಾಪ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡಲು ಹೆಸರುವಾಸಿ. ಅಲ್ಲದೆ ಇತ್ತೀಚಿಗೆ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ ಶತಕ ಪೂರೈಸಿ ಸದ್ದು ಮಾಡಿದ್ದಾರೆ. ಜಾಕ್ಸ್ ಆಗಮನ ತಂಡಕ್ಕೆ ಬೂಸ್ಟ್ ನೀಡಲಿದೆ.
ರಜತ್ ಪಟಿದಾರ್ ಬ್ಯಾಟ್ ಮೌನಕ್ಕೆ ಶರಣಾದಂತೆ ಕಾಣುತ್ತಿದೆ. ಇವರ ಬದಲಿಗೆ ದೇಶೀಯ ಹೊಸ ಮುಖಕಕ್ಕೆ ಅವಕಾಶ ನೀಡಿದರೆ, ಒಳ್ಳೆಯದು. ಇನ್ನು ವಿರಾಟ್ ಕೊಹ್ಲಿಯ ಮೇಲೆ ಬೇರೆ ಬ್ಯಾಟರ್‌ಗಳು ಒತ್ತಡವನ್ನು ಕಡಿಮೆ ಮಾಡಿ ತಾವು ಸಹ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ.
ರಾಯಲ್ಸ್ ಅಬ್ಬರ
ತವರಿನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತೊಂದು ಗೆಲುವಿನ ಕನಸು ಕಾಣುತ್ತಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿರುವ ರಾಜಸ್ಥಾನ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ ಎದುರಾಳಿಗಳಿಗೆ ಕಾಡಬಲ್ಲರು. ಯಜುವೇಂದ್ರ ಚಹಾಲ್, ಟ್ರೆಂಟ್ ಬೌಲ್ಟ್ ಸಹ ತಮ್ಮ ಬಿಗುವಿನ ದಾಳಿಯ ಮೂಲಕ ವಿಕೆಟ್ ಪಡೆದು ರನ್‌ಗಳಿಗೆ ಕಡಿವಾಣ ಹಾಕಬಲ್ಲರು.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications