ಮಳೆ.. ಮಳೆ.. ಆರ್‌ಸಿಬಿ VS ಚೆನ್ನೈ ಮ್ಯಾಚ್ ರದ್ದು?
ಮಳೆ.. ಮಳೆ.. ಎಲ್ಲೆಲ್ಲೂ ಮಳೆಯ ಅಬ್ಬರ ಶುರುವಾಗಿದೆ. ಅದರಲ್ಲೂ ಬೆಂಗಳೂರು & ಚೆನ್ನೈ ನಡುವೆ ಇಂದು ಮಹತ್ವದ ಐಪಿಎಲ್ ಪಂದ್ಯ ನಡೆಯುವ ಸಮಯದಲ್ಲಿ ಮಳೆರಾಯ ಕಾಟ ಕೊಡಲು ಶುರು ಮಾಡಿದ್ದಾನೆ. ಹೀಗಿದ್ದಾಗ ಇಂದು ಆರ್‌ಸಿಬಿ VS ಸಿಎಸ್‌ಕೆ (RCB VS CSK) ಮ್ಯಾಚ್ ನಡೆಯುವುದೇ ಅನುಮಾನ ಎನ್ನುವಂತಾಗಿದೆ. ಇದೇ ಸಮಯದಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಮತ್ತೊಂದು ಆಘಾತದ ಸುದ್ದಿ ಸಿಕ್ಕಿದೆ.
ಹೌದು, ಬೆಂಗಳೂರಲ್ಲಿ ಈಗಾಗಲೇ ಮಳೆ ಶುರುವಾಗಿದ್ದು ಇಂದು ಪೂರ್ತಿ ದಿನ ಎಡಬಿಡದೆ ಭರ್ಜರಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ. ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಭರ್ಜರಿ ಮಳೆ ಬರುತ್ತಿದೆ. ಅದೇ ರೀತಿ ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಭಾರಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆ ಇಂದು ಆರ್‌ಸಿಬಿ ಬೆಂಗಳೂರು ಮತ್ತು ಸಿಎಸ್‌ಕೆ ಚೆನ್ನೈ ನಡುವಿನ ಪ್ರಮುಖ ಪಂದ್ಯವೇ ರದ್ದಾಗುವ ಭಯ ಆವರಿಸಿದೆ. ಯಾಕಂದ್ರೆ ಈ ಪಂದ್ಯ ಗೆಲ್ಲದೇ ಹೋದರೆ RCB ತಂಡ ಐಪಿಎಲ್ ಟೂರ್ನಿಯಿಂದಲೇ ಹೊರಗೆ ಬೀಳಲಿದೆ.

ಆರ್‌ಸಿಬಿ ಮ್ಯಾಚ್‌ಗಾಗಿ ಮಳೆ ನಿಲ್ಲುತ್ತಾ?
ಈಗಿನ ವಾತಾವರಣ ನೋಡುತ್ತಿದ್ದರೆ ಮಳೆ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹೀಗೆ ಭಯದಲ್ಲೇ ಆರ್‌ಸಿಬಿ ಅಭಿಮಾನಿಗಳು ನರಳಾಡುತ್ತಿದ್ದಾರೆ. ಆರ್‌ಸಿಬಿ ತಂಡ ಈಗಾಗಲೇ 13 ಪಂದ್ಯ ಆಡಿದ್ದು, 6 ಪಂದ್ಯದಲ್ಲಿ ಗೆದ್ದು 7 ಪಂದ್ಯ ಸೋತಿದೆ. ಆದರೆ ಮುಂದಿನ ಹಂತಕ್ಕೆ ಹೋಗಲು ಆರ್‌ಸಿಬಿ ಬೆಂಗಳೂರು ತಂಡ ಇಂದಿನ ಮ್ಯಾಚ್ ಗೆಲ್ಲಲೇಬೇಕಿದೆ. ಇಲ್ಲವಾದರೆ ಈ ಪರಿಸ್ಥಿತಿಯಲ್ಲಿ ಆರ್‌ಸಿಬಿ ತಂಡಕ್ಕೆ ಅವಕಾಶ ಮಿಸ್ ಆಗಲಿದ್ದು, ಚೆನ್ನೈ ತಂಡವೇ ಮುಂದಿನ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ಮಳೆ ನಿಲ್ಲಲಿ ದೇವರೆ ಅಂತಾ ಬೇಡಿಕೊಳ್ಳುತ್ತಿದ್ದಾರೆ.
ಗೆದ್ದೇ ಗೆಲ್ಲುತ್ತೆ ಬೆಂಗಳೂರು ತಂಡ!
ಆರ್‌ಸಿಬಿ, ಆರ್‌ಸಿಬಿ, ಆರ್‌ಸಿಬಿ.. ಹೀಗೆ ಎಲ್ಲೆಲ್ಲೂ ಆರ್‌ಸಿಬಿ ತಂಡ ಟ್ರೆಂಡ್ ಹುಟ್ಟುಹಾಕಿ ಹವಾ ಎಬ್ಬಿಸಿದೆ. ನಮ್ಮ ಬೆಂಗಳೂರು ತಂಡವಾದ ಆರ್‌ಸಿಬಿ ಗೆದ್ದೇ ಗೆಲ್ಲುತ್ತೆ, ಉಪಾಂತ್ಯಕ್ಕೆ ತಲುಪಲಿದೆ ಅಂತಾ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಸಮಯದಲ್ಲಿ ಆರ್‌ಸಿಬಿ ತಂಡ ಸಕಲ ಸಿದ್ಧತೆ ಆರಂಭಿಸಿದೆ. ಮತ್ತೊಂದು ಕಡೆ ಪಂದ್ಯ ನೋಡಲು ಕಾಯುತ್ತಿರುವ RCB ಫ್ಯಾನ್ಸ್ ಎಲ್ಲೆಲ್ಲೂ ಟ್ರೆಂಡ್ ಸೃಷ್ಟಿಸಿ, ಹವಾ ಎಬ್ಬಿಸಿದ್ದಾರೆ. ಇಡೀ ಕ್ರಿಕೆಟ್ ಜಗತ್ತು ಈ ಪಂದ್ಯಕ್ಕಾಗಿ ಈಗ ಕಾಯುತ್ತಿದೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿ & ಚೆನ್ನೈ ಪಂದ್ಯ ಹವಾ ಎಬ್ಬಿಸಿದೆ. ಹಾಗೇ, ಟಿಕೆಟ್‌ಗೆ ಕೂಡ ಭಾರಿ ಡಿಮ್ಯಾಂಡ್ ಇದ್ದು. ಮ್ಯಾಚ್ ನಡೆಯಬೇಕು ಅಂದ್ರೆ ಮಳೆ ಮಾತ್ರ ಬರಬಾರದು ಅಷ್ಟೇ!












Click it and Unblock the Notifications