ಮಳೆ.. ಮಳೆ.. ಆರ್‌ಸಿಬಿ VS ಚೆನ್ನೈ ಪಂದ್ಯ ನಿಂತೋಯ್ತು!
ಆರ್‌ಸಿಬಿ & ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯುತ್ತಿರುವ ಅತ್ಯಂತ ಮಹತ್ವದ ಐಪಿಎಲ್ ಪಂದ್ಯ ಮಳೆಯ ಕಾರಣಕ್ಕೆ ನಿಂತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ, ಉತ್ತಮವಾಗಿ ಆರಂಭ ಪಡೆದರೂ ಕೇವಲ 3 ಓವರ್ ಆಗುವುದರ ಒಳಗೆ ಜೋರಾಗಿ ಮಳೆಯ ಆಗಮನ ಆಯ್ತು. ಆಗ ಅನಿವಾರ್ಯ ಪರಿಸ್ಥಿತಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಿಲ್ಲಿಸಲಾಯಿತು.
ಫಾಫ್ ಡುಪ್ಲೆಸಿಸ್ ಜೊತೆ ಪಂದ್ಯ ಆರಂಭಿಸಿದ ವಿರಾಟ್ ಕೊಹ್ಲಿ, 19 ರನ್ ಬಾರಿಸಿ ಕೇವಲ 9 ಬಾಲ್ ತಿಂದರು. ಹಾಗೇ ಫಾಫ್ ಡು ಪ್ಲೆಸಿಸ್ ಕೂಡ 9 ಬಾಲ್ ಬಳಸಿ 12 ರನ್ ಬಾರಿಸಿ, ಗಮನ ಸೆಳೆದರು. ವಿರಾಟ್ ಕೊಹ್ಲಿ ಒಟ್ಟು 2 ಸಿಕ್ಸರ್ & 1 ಬೌಂಡರಿ ಬಾರಿಸಿದ್ದು, ಫಾಫ್ ಡು ಪ್ಲೆಸಿಸ್ 1 ಸಿಕ್ಸರ್ & 1 ಬೌಂಡರಿ ಬಾರಿಸಿದ್ದಾರೆ.

ಹೀಗಿದ್ದಾಗಲೇ ಪಂದ್ಯ ನಿಂತಿದ್ದು ಈ ವಾತಾವರಣ ನೋಡಿ ಆರ್‌ಸಿಬಿ ಅಭಿಮಾನಿಗಳು ಕೂಡ ಬೇಸರ ಮಾಡಿಕೊಂಡರು. ಯಾಕೆ ಅಂದ್ರೆ ಇಂದಿನ ಪಂದ್ಯ ಆರ್‌ಸಿಬಿ ಗೆಲ್ಲಲೇಬೇಕು, ಇಲ್ಲವಾದರೆ ಆರ್‌ಸಿಬಿ ತಂಡ ಐಪಿಎಲ್‌ನ ಅಖಾಡದಿಂದ ಹೊರಬೀಳಲಿದೆ. ಹಾಗೇ ಚೆನ್ನೈ ತಂಡಕ್ಕೂ ಈ ಮ್ಯಾಚ್ ಅತಿ ಮುಖ್ಯ.
ಆರ್‌ಸಿಬಿ 6 ಪಂದ್ಯ ಗೆದ್ದಿದೆ!
ಈಗಿನ ವಾತಾವರಣ ನೋಡುತ್ತಿದ್ದರೆ ಮಳೆ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹೀಗೆ ಭಯದಲ್ಲೇ ಆರ್‌ಸಿಬಿ ಅಭಿಮಾನಿಗಳು ನರಳಾಡುತ್ತಿದ್ದಾರೆ. ಆರ್‌ಸಿಬಿ ತಂಡ ಈಗಾಗಲೇ 13 ಪಂದ್ಯ ಆಡಿದ್ದು, 6 ಪಂದ್ಯದಲ್ಲಿ ಗೆದ್ದು 7 ಪಂದ್ಯ ಸೋತಿದೆ. ಆದರೆ ಮುಂದಿನ ಹಂತಕ್ಕೆ ಹೋಗಲು ಆರ್‌ಸಿಬಿ ಬೆಂಗಳೂರು ತಂಡ ಇಂದಿನ ಮ್ಯಾಚ್ ಗೆಲ್ಲಲೇಬೇಕಿದೆ. ಇಲ್ಲವಾದರೆ ಈ ಪರಿಸ್ಥಿತಿಯಲ್ಲಿ ಆರ್‌ಸಿಬಿ ತಂಡಕ್ಕೆ ಅವಕಾಶ ಮಿಸ್ ಆಗಲಿದ್ದು, ಚೆನ್ನೈ ತಂಡವೇ ಮುಂದಿನ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ಮಳೆ ನಿಲ್ಲಲಿ ದೇವರೆ ಅಂತಾ ಬೇಡಿಕೊಳ್ಳುತ್ತಿದ್ದಾರೆ.
ಗೆದ್ದೇ ಗೆಲ್ಲುತ್ತೆ ಬೆಂಗಳೂರು ತಂಡ!
ಆರ್‌ಸಿಬಿ, ಆರ್‌ಸಿಬಿ, ಆರ್‌ಸಿಬಿ.. ಹೀಗೆ ಎಲ್ಲೆಲ್ಲೂ ಆರ್‌ಸಿಬಿ ತಂಡ ಟ್ರೆಂಡ್ ಹುಟ್ಟುಹಾಕಿ ಹವಾ ಎಬ್ಬಿಸಿದೆ. ನಮ್ಮ ಬೆಂಗಳೂರು ತಂಡವಾದ ಆರ್‌ಸಿಬಿ ಗೆದ್ದೇ ಗೆಲ್ಲುತ್ತೆ, ಉಪಾಂತ್ಯಕ್ಕೆ ತಲುಪಲಿದೆ ಅಂತಾ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಸಮಯದಲ್ಲಿ ಆರ್‌ಸಿಬಿ ತಂಡ ಸಕಲ ಸಿದ್ಧತೆ ಆರಂಭಿಸಿದೆ. ಮತ್ತೊಂದು ಕಡೆ ಪಂದ್ಯ ನೋಡಲು ಕಾಯುತ್ತಿರುವ RCB ಫ್ಯಾನ್ಸ್ ಎಲ್ಲೆಲ್ಲೂ ಟ್ರೆಂಡ್ ಸೃಷ್ಟಿಸಿ, ಹವಾ ಎಬ್ಬಿಸಿದ್ದಾರೆ. ಇಡೀ ಕ್ರಿಕೆಟ್ ಜಗತ್ತು ಈ ಪಂದ್ಯಕ್ಕಾಗಿ ಈಗ ಕಾಯುತ್ತಿದೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿ & ಚೆನ್ನೈ ಪಂದ್ಯ ಹವಾ ಎಬ್ಬಿಸಿದೆ. ಹಾಗೇ, ಟಿಕೆಟ್‌ಗೆ ಕೂಡ ಭಾರಿ ಡಿಮ್ಯಾಂಡ್ ಇದ್ದು. ಮ್ಯಾಚ್ ನಡೆಯಬೇಕು ಅಂದ್ರೆ ಮಳೆ ನಿಲ್ಲಬೇಕಿದೆ ಅಷ್ಟೇ!












Click it and Unblock the Notifications