T20 World Cup: ರೋಹಿತ್ ಶರ್ಮಾರಿಂದ ಮಾಸ್ಟರ್ ಸ್ಟ್ರೋಕ್: ಹೊಸ ಮುಖದೊಂದಿಗೆ ಇನ್ನಿಂಗ್ಸ್ ಓಪನ್?
ಬುಧವಾರದಿಂದ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ವೇಳೆ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಮೂಡಿದ ಪ್ರಶ್ನೆ ಒಂದೇ. ಈ ಬಾರಿ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
ಟೀಮ್ ಇಂಡಿಯಾ ಆಯ್ಕೆ ಮಾಡುವಾಗ ಆಯ್ಕೆದಾರರು ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಇದರಿಂದ ಸಹಜವಾಗಿಯೇ ಇವರು ಇನ್ನಿಂಗ್ಸ್ ಆರಂಭಿಸುತ್ತಾರೆ ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಆದರೆ ಈ ಲೆಕ್ಕಾಚಾರ ಅಭ್ಯಾಸ ಪಂದ್ಯದಲ್ಲಿ ಉಲ್ಟಾ ಆಗಿದೆ. ಸಂಜು ಸ್ಯಾಮ್ಸನ್ ಅಭ್ಯಾಸ ಪಂದ್ಯದಲ್ಲಿ ಓಪನರ್ ಆಗಿ ಕಾಣಿಸಿಕೊಂಡರು. ಹೀಗಾಗಿ ಇನ್ನಿಂಗ್ಸ್ ಆರಂಭಿಸುವುದು ಯಾರು ಎಂಬ ಲೆಕ್ಕಾಚಾರ ಆರಂಭವಾಗಿದೆ.

ಸಂಜು ಓಪನ್ ಏಕೆ?
ಅಭ್ಯಾಸ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಆರಂಭಿಸಿದ್ದು ಹಲವು ಯೋಚನೆಗಳನ್ನು ಹುಟ್ಟುಹಾಕಿದೆ. ಸಂಜು ಅವರ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸುತ್ತಾರೆ ಎಂದು ಎಲ್ಲರೂ ಅಂದು ಕೊಳ್ಳುತ್ತಿದ್ದಾರೆ. ಆದರೆ ರೋಹಿತ್ ಶರ್ಮಾ ಅವರ ತಲೆಯಲ್ಲಿ ಓಡುತ್ತಾ ಇರುವು ಲೆಕ್ಕಾಚಾರವೇ ಬೇರೆಯದ್ದಾಗಿದೆ. ರೋಹಿತ್ ಟಿ20 ವಿಶ್ವಕಪ್ ಗೆಲ್ಲಲು ಬೇಕಾದ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಇನ್ನಿಂಗ್ಸ್ ಓಪನ್ ಮಾಡುವುದು ಯಾರು?
ರೋಹಿತ್ ಶರ್ಮಾ ಈ ಬಾರಿ ಹೊಸ ಜೊತೆಗಾರನೊಂದಿಗೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಕಾಣುತ್ತಿದೆ. ರೋಹಿತ್ ಶರ್ಮಾ ರೈಟ್ ಹಾಗೂ ಲೆಫ್ಟ್ ಕಾಂಬಿನೇಷನ್ ಗೆ ಮಣೆ ಹಾಕಿದಾಗ ಈ ಬದಲಾವಣೆ ಕಾಣುವುದಕ್ಕೆ ಪುಷ್ಠಿ ಸಿಗಲಿದೆ. ರೋಹಿತ್ ಶರ್ಮಾ ಒಂದು ಬದಿಯಲ್ಲಿ ಕ್ರೀಸ್‌ನಲ್ಲಿ ನಿಂತು ಅಟ್ಯಾಕಿಂಗ್ ಕ್ರಿಕೆಟ್ ಆಡಲು ಒಬ್ಬ ಪ್ಲೇಯರ್ ಹುಡುಕಾಟದಲ್ಲಿ ರೋಹಿತ್ ಮನಸ್ಸು ಮಾಡಿದ ಹಾಗೆ ಕಾಣುತ್ತಿದೆ.
ಅಭ್ಯಾಸ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಅವರನನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಡ್ತಿ ನೀಡಲಾಯಿತು. ಈ ಅವಕಾಶವನ್ನು ಬಳಸಿಕೊಂಡ ಪಂತ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಗಾಯದಿಂದ ಚೇತರಿಸಿಕೊಂಡ ಬಳಿಕ ಪಂತ್ ಧಮಾಕೆದಾರ್ ಪ್ರದರ್ಶನ ಟೀಮ್ ಇಂಡಿಯಾ ನಾಯಕನ ತಲೆಗೆ ಕೆಲಸ ಕೊಟ್ಟಿದೆ.
ಬ್ಯಾಟಿಂಗ್‌ನಲ್ಲೇ ಬಡ್ತಿ ಸಾಧ್ಯತೆ?
ರೋಹಿತ್ ತಮ್ಮ ಜೊತೆಗಾರನನ್ನಾಗಿ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಿಕೊಂಡರೂ ಯಾವುದೇ ಅಚ್ಚರಿ ಇಲ್ಲ. ಒಂದು ಬದಿಯಲ್ಲಿ ಒಬ್ಬರು ತಳವೂರಿ ನಿಂತು ಇನ್ನೊಬ್ಬ ಆಕ್ರಮಣಕಾರಿ ಆಟ ಆಡಲು ನೆರವಾಗುತ್ತದೆ ಎಂಬ ಲೆಕ್ಕಾಚಾರವನ್ನು ಟೀಮ್ ಇಂಡಿಯಾ ಕ್ಯಾಪ್ಟನ್ ಮಾಡ್ತಾ ಇದ್ದಾರೆ. ಒಂದು ವೇಳೆ ಈ ಪ್ಲ್ಯಾನ್ ಸಕ್ಸಸ್ ಆದರೆ ಟೀಮ್ ಇಂಡಿಯಾ ವಿಶ್ವಕಪ್ ಗೆಲುವಿನ ಆಸೆ ಚಿಗುರುತ್ತದೆ.
ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಹಾಗೂ ಐದನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಬಂದು ತಂಡದ ರನ್ ವೇಗವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ರಿಷಭ್ ಪಂಥ್ ಪವರ್ ಪ್ಲೇನಲ್ಲಿ ಪವರ್ ಫುಲ್ ಹಿಟ್‌ಗಳ ಮೂಲಕ ರನ್ ವೇಗಕ್ಕೆ ಚುರುಕು ಮುಟ್ಟಿಸಿದ್ದೇ ಆದಲ್ಲಿ ರನ್ ವೇಗ ಹಾಗೂ ಸ್ಕೋರ್ ಬೋರ್ಡ್ ಸತತವಾಗಿ ಬೆಳೆಯುತ್ತಲೆ ಇರುತ್ತದೆ. ಅಲ್ಲದೆ ಟೀಮ್ ಇಂಡಿಯಾಕ್ಕೆ ಬೇಕಾಗಿರುವ ಲೆಫ್ಟ್ ಹಾಗೂ ರೈಟ್ ಹ್ಯಾಂಡ್ ಕಾಂಬಿನೇಷನ್ ಸಹ ಸಿಕ್ಕಂತೆ ಆಗುತ್ತದೆ.
ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಜೊತೆ ವಿರಾಟ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ವಿರಾಟ್ ಬಿಗ್ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ರೀತಿ ಆಡಿದರೆ ಆಗದು. ಹೀಗಾಗಿ ರೋಹಿತ್ ಪಂತ್ ಅವರನ್ನು ಆರಂಭಿಕರಾಗಿ ಕಣಕ್ಕೆ ಇಳಿಸಿದರೆ ಅಚ್ಚರಿಯಿಲ್ಲ.












Click it and Unblock the Notifications