ವಿರಾಟ್ ಕೊಹ್ಲಿಯನ್ನು ಗುರಾಯಿಸಿದ ಬಾಂಗ್ಲಾದೇಶ ಆಟಗಾರನಿಗೆ ರೋಹಿತ್ ಶರ್ಮಾ ಮಾಡಿದ್ದೇನು?
ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಗಳಾಗಿವೆ. ಬಾಂಗ್ಲಾದೇಶ ಕೂಡ ಹಲವು ಬಾರಿ ಭಾರತೀಯ ಆಟಗಾರರನ್ನು ಕೆಣಕಿ ಮೈದಾನದಲ್ಲೇ ಅದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.
ಆ್ಯಂಟಿಗುವಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಸೂಪರ್ 8 ಪಂದ್ಯದಲ್ಲಿ ಶನಿವಾರ ಭಾರತ ಬಾಂಗ್ಲಾದೇಶದ ವಿರುದ್ಧ 50 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ವಿಶ್ವಕಪ್‌ನಲ್ಲಿ ಸೈಲೆಂಟ್ ಆಗಿದ್ದ ವಿರಾಟ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ ಅಬ್ಬರಿಸಿದರು.

28 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ ನೆರವಿನಿಂದ 37 ರನ್ ಗಳಿಸಿದರು. ಬಾಂಗ್ಲಾದೇಶದ ತಂಜಿಮ್ ಹಸನ್ ಸಾಕಿಬ್ ಕೊಹ್ಲಿಯನ್ನು ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು. ಕೊಹ್ಲಿಯನ್ನು ಔಟ್ ಮಾಡಿದ ಬಳಿಕ ತಂಜಿಮ್ ಹಸನ್ ಕೊಹ್ಲಿಯನ್ನು ಗುರಾಯಿಸಿದರು. ಕೊಹ್ಲಿ ವಿಕೆಟ್ ಪಡೆದ ಬಳಿಕ ಅವರು ಅತಿರೇಕದಿಂದ ಸಂಭ್ರಮಿಸಿದರು.
ತಂಜಿಮ್ ಹಸನ್ ಅವರು ಗುರಾಯಿಸಿದರೂ ವಿರಾಟ್ ಕೊಹ್ಲಿ ಯಾವುದೇ ಪ್ರತಿಕ್ರಿಯೆ ಕೊಡದೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಕೊಹ್ಲಿಯನ್ನು ಗುರಾಯಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು, ಕೊಹ್ಲಿ ಅಭಿಮಾನಿಗಳು ಬಾಂಗ್ಲಾದೇಶ ಆಟಗಾರನ ವಿರುದ್ಧ ರೊಚ್ಚಿಗೆದ್ದಿದ್ದರು.
ಸಾಮಾನ್ಯವಾಗಿ ಕೊಹ್ಲಿಯನ್ನು ಯಾರಾದರೂ ಕೆಣಕಿದಿರೆ, ಮೈದಾನದಲ್ಲೇ ಅದಕ್ಕೆ ಉತ್ತರ ಸಿಗುತ್ತದೆ. ಆದರೆ ಈ ಬಾರಿ ಕೊಹ್ಲಿಯ ಸಾಲವನ್ನು ರೋಹಿತ್ ಶರ್ಮಾ ವಾಪಸ್ ಕೊಟ್ಟಿದ್ದು ವಿಶೇಷ.
The Rohit Sharma 👑 celebration 🥶#rohitsharma #t20cw24 #IndvsBan #INDvsBAN #indvsban #cricketlovers#IndianCricketTeam pic.twitter.com/wwZSOnnSaA
— Devoteeofsharma45 (@devoteofrohit45) June 22, 2024
ಉತ್ತರ ಕೊಟ್ಟ ರೋಹಿತ್ ಶರ್ಮಾ
ಭಾರತದ ಇನ್ನಿಂಗ್ಸ್ ಮುಗಿದ ಬಳಿಕ ಬಾಂಗ್ಲಾದೇಶ ಬ್ಯಾಟಿಂಗ್ ಆರಂಭಿಸಿತು. ಬಾಂಗ್ಲಾದೇಶ ತನ್ನ ಮೊದಲ ವಿಕೆಟ್ ಕಳೆದುಕೊಂಡಾಗ ರೋಹಿತ್ ಶರ್ಮಾ ತಕ್ಕ ಉತ್ತರ ಕೊಟ್ಟರು.
ಹಾರ್ದಿಕ್ ಪಾಂಡ್ಯ ಬಾಂಗ್ಲಾ ಆರಂಭಿಕ ಆಟಗಾರ ಲಿಟ್ಟನ್ ದಾಸ್ ಅವರ ವಿಕೆಟ್ ಪಡೆದಾಗ ರೋಹಿತ್ ಶರ್ಮಾ ಆಕ್ರಮಣಕಾರಿಯಾಗಿ ಸಂಭ್ರಮಿಸುವ ಮೂಲಕ ಉತ್ತರ ಕೊಟ್ಟರು. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸೆಮಿಫೈನಲ್ ಸ್ಥಾನ ಖಚಿತ
ವಿರಾಟ್ ಕೊಹ್ಲಿ ಏಕದಿನ ಮತ್ತು ಟಿ20 ವಿಶ್ವಕಪ್ ಸೇರಿಸಿ 3000 ರನ್ ಗಳಿಸಿದ ಮೊದಲ ಆಟಗಾರ ಎನ್ನುವ ದಾಖಲೆ ಬರೆದರು. ಸೆಮಿಫೈನಲ್ ಪಂದ್ಯಕ್ಕೆ ಮುನ್ನ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ಭಾರತ ತಂಡದ ವಿಶ್ವಾಸ ಹೆಚ್ಚಿಸಿದೆ.
ಭಾರತ ಮುಂದಿನ ಸೂಪರ್ 8 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ಭಾರತ ಅಜೇಯವಾಗಿ ಸೆಮಿಫೈನಲ್ ತಲುಪಲಿದೆ.












Click it and Unblock the Notifications