Get Updates
Get notified of breaking news, exclusive insights, and must-see stories!

Rohit Sharma:ಕ್ರಿಕೆಟಿಗರು ಹೆಡ್‌ ಫೋನ್‌ ಏಕೆ ಹಾಕಿಕೊಳ್ಳುತ್ತಾರೆ ಗೊತ್ತಾ? ನಿಜ ತಿಳಿದರೆ ಬಿದ್ದು ಬಿದ್ದು ನಗ್ತಿರಾ?

ಕ್ರಿಕೆಟ್ ಆಟಗಾರರಿಗೆ ಫುಲ್‌ ಪಬ್ಲಿಸಿಟಿ. ಹೋದಲ್ಲಿ ಬಂದಲ್ಲಿ ಎಲ್ಲಾ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿ ಬೀಳುತ್ತಾರೆ. ಕ್ರೌಡ್ ಕಂಟ್ರೋಲ್‌ ಮಾಡೋದೆ ದೊಡ್ಡ ಸಮಸ್ಯೆ. ಕ್ರಿಕೆಟ್ ಆಟಗಾರರಿಗೆ ಭಾರತದಲ್ಲಿ ಸ್ಟಾರ್‌ ಗಿರಿ.. ಒಮ್ಮೆ ಬ್ಲ್ಯೂ ಜೆರ್ಸಿ ಮೈ ಮೇಲೆ ಬಿದ್ದರೆ ಅಭಿಮಾನಿಗಳ ಬಳಗವು ಆಟಗಾರರನ್ನು ಹೃದಯಲ್ಲಿಟ್ಟುಕೊಂಡು ಆರಾಧಿಸುತ್ತಾರೆ.

ಕ್ರಿಕೆಟ್‌ ಆಟಗಾರರು ತಮ್ಮ ಭರ್ಜರಿ ಆಟದಿಂದ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆಯುತ್ತಾರೆ. ಮೈದಾನದಲ್ಲಿ ದಾಖಲೆಗಳನ್ನು ಬರೆದು, ಅಭಿಮಾನಿಗಳನ್ನು ರಂಜಿಸುತ್ತಾರೆ. ಬಿಗ್ ಇನ್ನಿಂಗ್ಸ್‌ ಕಟ್ಟಿ ಎದುರಾಳಿಗಳ ವಿರುದ್ಧ ಅಬ್ಬರಿಸುತ್ತಾರೆ. ಬೌಂಡರಿ, ಸಿಕ್ಸರ್ ಬಾರಿಸಿ ಆರ್ಭಟಿಸುತ್ತಾರೆ. ತಮ್ಮ ವಿಶಿಷ್ಠ ಆಟದ ಶೈಲಿಯಿಂದಲೇ ಎಲ್ಲರೂ ಹುಬ್ಬೇರಿಸುವಂತೆ ಆಡುತ್ತಾರೆ.

Rohit Sharma Why Do Cricketers Wear Headphones Will the Truth Make You Burst into Laughter

ಕ್ರಿಕೆಟ್ ಆಟಗಾರರು ಮೈದಾನದ ಹೊರಗಡೆ ಹೊರಟಾಗ ಕಿವಿಗೆ ಹೆಡ್ ಫೋನ್ ಹಾಕಿಕೊಳ್ಳುವುದು ಸಾಮಾನ್ಯವಾಗಿ ಕಾಣುತ್ತೇವೆ. ಹೀಗೆ ಕ್ರಿಕೆಟ್ ಆಟಗಾರರು ಹೆಡ್ ಫೋನ್‌ ಹಾಕಿಕೊಳ್ಳುವುದು ಏಕೆ ಎಂಬುದನ್ನು ಟೀಮ್ ಇಂಡಿಯಾದ ಹಿಟ್‌ ಮ್ಯಾನ್‌ ರೋಹಿತ್ ಶರ್ಮಾ ರಿವೀಲ್‌ ಮಾಡಿದ್ದಾರೆ.

ಕಪಿಲ್ ಶೋದಲ್ಲಿ ರೋಹಿತ್, ಶ್ರೇಯಸ್

ನೆಟ್‌ಫ್ಲಿಕ್ಸ್‌ನಲ್ಲಿ ದಿ ಗ್ರೇಟ್ ಇಂಡಿಯನ್‌ ಕಪಿಲ್ ಶರ್ಮಾ ಶೋ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಭಾಗವಹಿಸಿದ್ದರು. ಟೀಮ್ ಇಂಡಿಯಾದ ಹಿಟ್‌ ಮ್ಯಾನ್‌ ಶೋನಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ. ಅಲ್ಲದೆ ಮಸ್ತ್ ಎಂಜಾಯ್ ಮಾಡಿದ್ದಾರೆ.

Rohit Sharma Why Do Cricketers Wear Headphones Will the Truth Make You Burst into Laughter

ಅಭಿಮಾನಿಗಳು ಸಲಹೆ ನೀಡುತ್ತಾರೆಯೇ?

ಇದೇ ವೇಳೆ ಕಪಿಲ್‌ ಶರ್ಮಾ ಒಂದು ಪ್ರಶ್ನೆಯನ್ನು ಕೇಳುತ್ತಾರೆ. ಅಂದಹಾಗೆ ಕ್ರಿಕೆಟ್‌ ಆಟಗಾರರಾದ ನಿಮಗೂ ಅಭಿಮಾನಿಗಳು ಸಲಹೆ ನೀಡುತ್ತಾರಾ ಎಂದು ಕೇಳಿದರು. ಇದಕ್ಕೆ ರೋಹಿತ್ ಶರ್ಮಾ ನಗುತ್ತಾ ಹುಂ ನೀಡುತ್ತಾರೆ. ಅಲ್ಲದೆ ನೀವು ಈ ಶಾಟ್‌ ಹೀಗೆ ಬಾರಿಸಬೇಕಿತ್ತು ಎಂದು ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ. ಈ ಸಲಹೆಗಳಿಂದ ಬಚಾವ್ ಆಗಲು ಆಟಗಾರರು ಹೆಡ್‌ ಫೋನ್‌ ಬಳಿಸುವುದಾಗಿ ತಿಳಿಸಿದ್ದಾರೆ.

ಮ್ಯಾಜಿಕ್‌ ಶೋ

ಇದೇ ಕಾರ್ಯಕ್ರಮದಲ್ಲಿ ಶ್ರೇಯಸ್ ಅಯ್ಯರ್‌ ತಮ್ಮ ಮ್ಯಾಜಿಕ್‌ ಪ್ರಸ್ತುತ ಪಡಿಸಿದರು. ಶ್ರೇಯಸ್‌ ಅಯ್ಯರ್‌ ಮ್ಯಾಜಿಕ್ ಮಾಡುತ್ತಾರೆ ಎಂದು ಎಲ್ಲರಿಗೂ ತಿಳಿದಿತ್ತು. ಇವರ ಈ ಟ್ಯಾಲೆಂಟ್‌ ಮತ್ತೊಮ್ಮೆ ಬಹಿರಂಗವಾಗಿದೆ. ಕಪಿಲ್‌, ಶ್ರೇಯಸ್‌ ಅವರಿಗೆ ನೀವು ಈಗಲೂ ಮ್ಯಾಜಿಕ್ ಮಾಡುತ್ತೀರಾ ಎಂದು ಕೇಳಿದಾಗ ಎಸ್‌ ಮಾಡುವೆ ಎಂದರು. ತಡಮಾಡದೆ ಕಪಿಲ್‌ ಒಂದು ಸೆಟ್‌ ಕಾರ್ಡ್‌ ತಂದು ಮ್ಯಾಜಿಕ್ ಮಾಡುವಂತೆ ಸೂಚಿಸಿದರು. ಅದರಂತೆ ಕಾರ್ಡ್‌ ತಂದು ಕೊಟ್ಟರು. ಶ್ರೇಯಸ್‌ ತಮ್ಮ ಕೈಗಳ ಕೈ ಚಳಕ ಪ್ರದರ್ಶಿಸಿ ಎಲ್ಲರ ಚಿತ್ತ ಕದ್ದರು.

ವಿಶ್ವಕಪ್‌ ಸೋತರೂ ಜನ ಬೆಂಬಲಿಸಿದ್ದಾರೆ

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ನಿರಾಸೆ ಕಂಡಿದೆ. ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಆಸ್ಟ್ರೇಲಿಯಾ ವಿರುದ್ಧ ನಿರಾಸೆ ಕಂಡಿತು. ಟೂರ್ನಿಯುದ್ದಕ್ಕೂ ಟೀಮ್ ಇಂಡಿಯಾ ಆಟಗಾರರು ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಆದರೆ ಫೈನಲ್‌ನಲ್ಲಿ ಕಪ್‌ ಕೈಗೆ ಸಿಗಲಿಲ್ಲ. ಇದರಿಂದ ಅಭಿಮಾನಿಗಳು ನಿರಾಸೆಗೆ ಒಳಗಾಗದೆ. ಟೀಮ್ ಇಂಡಿಯಾಕ್ಕೆ ಪ್ರೋತ್ಸಾಹವನ್ನು ನೀಡಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಅಭಿಮಾನಿಗಳ ಪ್ರೀತಿ ಹಾಗೂ ವಿಶ್ವಾಸವೇ ಆಟಗಾರರಿಗೆ ಬೂಸ್ಟ್‌ ನೀಡಲಿದೆ ಎಂದು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+