Asia Cup 2023: ಪಾಕ್‌ನ ಆ ವೇಗಿಯನ್ನು ಎದುರಿಸಲು ರೋಹಿತ್ ಶರ್ಮಾ ಮಾಡ್ತಿರೋದೇನು?

ಏಷ್ಯಾಕಪ್ 2023 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಆಗಸ್ಟ್ 30ರಂದು ಪಂದ್ಯಾವಳಿ ಆರಂಭವಾಗಲಿದ್ದು, ಸೆಪ್ಟೆಂಬರ್ 2ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಭಾರತ ತಂಡ ಈಗಾಗಲೇ ಅಭ್ಯಾಸ ಆರಂಭಿಸಿದ್ದು, ಈ ಬಾರಿ ಏಷ್ಯಾಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

ಪಾಕಿಸ್ತಾನ ತಂಡ ಈಗಾಗಲೇ ಶ್ರೀಲಂಕಾದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಆಡುವ ಮೂಲಕ ತಯಾರಿ ಮಾಡಿಕೊಂಡಿದೆ. ಮೂರು ಪಂದ್ಯಗಳನ್ನು ಗೆದ್ದು ಎದುರಾಳೀಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ.

Rohit Sharma Strategizes to Counter Shaheen Afridi Threat Ahead of Asia Cup Clash

ಇತ್ತ ಭಾರತ ತಂಡ ಬೆಂಗಳೂರು ಹೊರವಲಯದ ಆಲೂರಿನಲ್ಲಿ ಅಭ್ಯಾಸ ಮಾಡುತ್ತಿದೆ. ಭಾರತದ ಬ್ಯಾಟರ್ ಗಳನ್ನು ಕಾಡಲು ಎಡಗೈ ವೇಗಿ ಶಾಹೀನ್ ಅಫ್ರಿದಿ ಸಿದ್ಧವಾಗಿದ್ದರೆ, ಅವರನ್ನು ಎದುರಿಸಲು ಭಾರತ ತಂಡದ ಬ್ಯಾಟರ್ ಗಳು ಸಜ್ಜಾಗುತ್ತಿದ್ದಾರೆ. ಅದರಲ್ಲೂ ಆರಂಭಿಕ ಓವರ್ ಗಳಲ್ಲಿ ಶಾಹೀನ್ ಶಾ ಅಫ್ರಿದಿ ಮಾರಕವಾಗುತ್ತಾರೆ, ಎಡಗೈ ವೇಗಿಗಳಿಗೆ ಆಡಲು ಭಾರತದ ಬ್ಯಾಟರ್ ಗಳು ಪರದಾಡುವುದು ಗೊತ್ತಿದೆ. ಎಡಗೈ ವೇಗಿಗಳನ್ನು ಬಳಸಿ ಭಾರತದ ಬ್ಯಾಟಿಂಗ್ ಪಡೆಯನ್ನು ಕಟ್ಟಿ ಹಾಕಲು ಪಾಕಿಸ್ತಾನ ಯೋಜನೆ ಹಾಕಿದ್ದರೆ, ಅದನ್ನು ಎದುರಿಸಲು ನಾಯಕ ರೋಹಿತ್ ಶರ್ಮಾ ಸೇರಿದಂತೆ ಇತರರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ರೊಹಿತ್-ಕೆಎಲ್ ರಾಹುಲ್ ಬ್ಯಾಟಿಂಗ್

ಏಷ್ಯಾಕಪ್‌ಗೆ ಸಜ್ಜಾಗಲು ಕೆಎಸ್‌ಸಿಎ ಸೌಲಭ್ಯದಲ್ಲಿ ಸೆಂಟರ್-ವಿಕೆಟ್‌ಗಳಲ್ಲಿ, ಪಂದ್ಯದ ರೀತಿಯಂತೆ ಅಭ್ಯಾಸ ಮಾಡಲು ಬ್ಯಾಟಿಂಗ್ ಜೋಡಿಗಳನ್ನು ವಿಂಗಡಿಸಲಾಗಿದೆ. ಶನಿವಾರ ನಾಯಕ ರೋಹಿತ್ ಶರ್ಮಾ ಜೊತೆಗೆ ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡಿದರು. ಶಾಹೀನ್ ಅಫ್ರಿದಿಯನ್ನು ಎದುರಿಸಲು, ಎಡಗೈ ಬೌಲರ್ ಅನಿಕೇತ್ ಚೌಧರಿ ಅವರನ್ನು ಬೌಲಿಂಗ್ ಮಾಡಲು ಕೇಳಿದರು.

ಅನಿಕೇತ್ ಚೌಧರಿ ಭಾರತಕ್ಕಾಗಿ ಆಡಿಲ್ಲ, ಹಾಗೂ ಶಾಹೀದ್ ಅಫ್ರಿದಿಯಂತೆ ಸ್ವಿಂಗ್ ಮಾಡುವು ಕೌಶಲ್ಯ ಹೊಂದಿಲ್ಲವಾದರೂ, ಎಡಗೈ ಬೌಲರ್ ಆಗಿ ಅವರು ನೆಟ್‌ನಲ್ಲಿ ಇರುವುದು ಭಾರತಕ್ಕೆ ಅನುಕೂಲಕರವಾಗಿದೆ. ಅವರ ಬೌಲಿಂಗ್‌ನಲ್ಲಿ ಅಭ್ಯಾಸ ಮಾಡುವುದರಿಂದ ಎಡಗೈ ವೇಗಿಗಳನ್ನು ಎದುರಿಸಲು ಭಾರತಕ್ಕೆ ಸಹಕಾರಿಯಾಗಲಿದೆ.

ರೋಹಿತ್ vs ಶಾಹೀನ್ ಅಫ್ರಿದಿ

ರೋಹಿತ್ ಶರ್ಮಾ ಮತ್ತು ಶಾಹೀನ್ ಅಫ್ರಿದ್ ಮೂರು ಬಾರಿ ಮುಖಾಮುಖಿಯಾಗಿದ್ದಾರೆ. 2018ರ ಏಷ್ಯಾಕಪ್‌ನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಶಾಹಿದ್ ಅಫ್ರಿದಿ ವಿರುದ್ಧ 18 ಮತ್ತು 19 ರನ್ ಗಳಿಸಿದ್ದಾರೆ, 2021ರಲ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿದ್ದರು, 2022ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅಫ್ರಿದಿಗೆ ವಿಕೆಟ್ ಒಪ್ಪಿಸದೆ ಯಶಸ್ವಿಯಾಗಿ ಆಡಿದ್ದರು.

ಶಾಹೀನ್ ಅಫ್ರಿದಿ ತಾವು ಆಡಿದ ಕಳೆದ 20 ಇನ್ನಿಂಗ್ಸ್‌ಗಳಲ್ಲಿ 22 ಸರಾಸರಿಯಲ್ಲಿ 29 ಬಲಗೈ ಬ್ಯಾಟರ್ ಗಳನ್ನು ಔಟ್ ಮಾಡಿದ್ದಾರೆ, ಅದರಲ್ಲಿ 10 ವಿಕೆಟ್‌ಗಳು ಪವರ್ ಪ್ಲೇನಲ್ಲಿ ಬಂದಿವೆ. ಈ ಬಾರಿ ಕೂಡ ಶಾಹಿನ್ ಅಫ್ರಿದಿ ಮಾರಕವಾಗುವ ಸಾಧ್ಯತೆ ಇರುವುದರಿಂದ ಭಾರತ ತಂಡ ಎಚ್ಚರಿಕೆಯಿಂದ ಸಜ್ಜಾಗುತ್ತಿದೆ.

ಏಷ್ಯಾಕಪ್‌ನಲ್ಲಿ ಭಾರತ - ಪಾಕಿಸ್ತಾನ ಕನಿಷ್ಠ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ ಮೊದಲ ಮುಖಾಮುಖಿಯಾಗಲಿದ್ದು, ಸೂಪರ್ 8 ಹಂತದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಫೈನಲ್ ಪ್ರವೇಶಿಸಿದರೆ ಮೂರನೇ ಬಾರಿ ಮುಖಾಮುಖಿ ಖಚಿತವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+