ಸುಮ್ಮನೆ ವಿರಾಟ್ ಕೊಹ್ಲಿಯನ್ನು ಟೀಕಿಸಬೇಡಿ: ರೋಹಿತ್ ಶರ್ಮಾ ಎಚ್ಚರಿಕೆ

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮುಕ್ತಾಯವಾಗಿದೆ. ಸರಣಿಯ ಮೂರನೇ ಪಂದ್ಯದಲ್ಲಿ ಭಾರತ 17 ರನ್‌ಗಳಿಂದ ಸೋಲನುಭವಿಸಿದೆ. ಆದರೂ 2-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿದೆ. ಪಂದ್ಯ ಮುಗಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಾಯಕ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಕಳಪೆ ಆಟದ ಬಗ್ಗೆ ಟೀಕಿಸುವವರಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ.

"ಹೊರಗಿನ ಟೀಕೆಗಳಿಗೆ ನಾವು ಕಿವಿಗೊಡುವುದಿಲ್ಲ ಆದ್ದರಿಂದ ನಮಗೆ ಕಷ್ಟವಾಗುವುದಿಲ್ಲ. ಕೊಹ್ಲಿಯನ್ನು ಟೀಕಿಸುವ ಪರಿಣತರು ಯಾರು ಎಂದು ನನಗೆ ತಿಳಿದಿಲ್ಲ. ಅವರನ್ನು ತಜ್ಞರು ಎಂದು ಏಕೆ ಕರೆಯುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ." ಎಂದು ಹೇಳಿದ್ದಾರೆ.

"ನಾವು ಉತ್ತಮ ತಂಡವನ್ನು ನಿರ್ಮಿಸುತ್ತಿದ್ದೇವೆ, ನಮಗೆ ನಮ್ಮದೇ ಆದ ಆಲೋಚನೆಗಳಿವೆ. ಅದರ ಹಿಂದೆ ಬಹಳಷ್ಟು ವಿಚಾರಗಳು ನಡೆಯುತ್ತವೆ, ಆಟಗಾರರಿಗೆ ಬೆಂಬಲವಿದೆ, ಯುವ ಆಟಗಾರರಿಗೆ ಅವಕಾಶಗಳನ್ನು ನೀಡಲಾಗುತ್ತದೆ. ಹೊರಗಿನ ಜನರಿಗೆ ಇದೆಲ್ಲಾ ಅರ್ಥವಾಗುವುದಿಲ್ಲ, ಆದರೆ ನಮಗೆ ಹೊರಗೆ ಏನು ಮಾತನಾಡುತ್ತಾರೆ ಎನ್ನುವುದು ಮುಖ್ಯವಾಗಲ್ಲ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಎಲ್ಲಾ ಆಟಗಾರರಿಗೂ ಈ ಅನುಭವ ಆಗಿದೆ

ಎಲ್ಲಾ ಆಟಗಾರರಿಗೂ ಈ ಅನುಭವ ಆಗಿದೆ

"ಆಟಗಾರನ ಫಾರ್ಮ್ ಬಗ್ಗೆ ಮಾತನಾಡುವುದಾದರೆ, ಅದು ಎಲ್ಲಾ ಆಟಗಾರರ ವೃತ್ತಿ ಜೀವನದಲ್ಲೂ ಮೇಲೆ, ಕೆಳಗೆ ಆಗುತ್ತದೆ. ಆದರೆ ಆಟಗಾರ ಗುಣಮಟ್ಟ ಕಡಿಮೆಯಾಗುವುದಿಲ್ಲ ಎಂದು ನಾವು ನೆನಪಿಟ್ಟುಕೊಳ್ಳಬೇಕು. ನೀವು ಕಾಮೆಂಟ್ ಮಾಡುವಾಗ ಆತನ ಸಾಮರ್ಥ್ಯ, ಆಟದ ಗುಣಮಟ್ಟದ ಬಗ್ಗೆ ನೆನಪಿಸಿಕೊಳ್ಳಿ" ಎಂದು ಉತ್ತರ ನೀಡಿದರು.

"ನಾನೂ ಕೂಡ ಫಾರ್ಮ್ ಕಳೆದುಕೊಂಡಿದ್ದೆ, ನನಗೂ ಇದೇ ರೀತಿಯ ಅನುಭವ ಆಗಿದೆ. ಎಲ್ಲಾ ಆಟಗಾರರ ವೃತ್ತಿ ಬದುಕಿನಲ್ಲಿ ಏರಿಳಿತ ಸಂಭವಿಸುತ್ತದೆ. ಇದು ಹೊಸದೇನೂ ಅಲ್ಲ, ಕೆಲವು ಆಟಗಾರರು ಇಷ್ಟು ದಿನ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿರುವಾಗ, ಅದನ್ನು ಒಂದೆರಡು ಸರಣಿ, ಪಂದ್ಯಗಳಲ್ಲಿ ನಿರ್ಧರಿಸಲಾಗದು. ಟೀಕಿಸುವವರು ಮೊದಲು ಇದನ್ನು ಅರ್ಥ ಮಾಡಿಕೊಳ್ಳಲಿ, ತಂಡವನ್ನು ನಡೆಸುತ್ತಿರುವವರಿಗೆ ಅವರ ಆಟದ ಗುಣಮಟ್ಟ ತಿಳಿದಿದೆ," ಎಂದು ರೋಹಿತ್ ಶರ್ಮಾ ಹೇಳಿದರು.

ಹೊಸ ರೀತಿಯಲ್ಲಿ ಆಡಲು ಯತ್ನ

ಹೊಸ ರೀತಿಯಲ್ಲಿ ಆಡಲು ಯತ್ನ

ವಿರಾಟ್ ಕೊಹ್ಲಿ ಆಕ್ರಮಣಕಾರಿ ಆಟದ ವಿಧಾನ, ಕೊಹ್ಲಿ ಆಕ್ರಮಣಕಾರಿ ಆಟ ಅವರ ಆಯ್ಕೆಯೆ ಅಥವಾ ತಂಡದ ಸೂಚನೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ರೋಹಿತ್ ಶರ್ಮಾ, "ನಾವು ನಿರ್ದಿಷ್ಟ ರೀತಿಯಲ್ಲಿ ಆಡಲು ಬಯಸುತ್ತೇವೆ. ಪ್ರತಿಯೊಬ್ಬ ಆಟಗಾರನಿಗೂ ಅವರದ್ದೇ ಆಲೋಚನಾ ಪ್ರಕ್ರಿಯೆ ಇರುತ್ತದೆ. ಟಿ20 ಮಾದರಿ ಕ್ರಿಕೆಟ್‌ನಲ್ಲಿ ಎಲ್ಲಾ ಬ್ಯಾಟರ್ ಗಳು ಆಕ್ರಮಣಕಾರಿಯಾಗಿಯೇ ಆಡಬೇಕು, ಬ್ಯಾಟ್‌ನಿಂದ ತಂಡಕ್ಕೆ ಏನು ಕೊಡುಗೆ ನೀಡಬೇಕು ಎನ್ನುವುದು ಅವರಿಗೆ ಗೊತ್ತಿರುತ್ತದೆ" ಎಂದು ತಿಳಿಸಿದರು.

"ಹೊಸ ವಾತಾವರಣಕ್ಕೆ ನಿಮ್ಮನ್ನು ಹೊಂದಿಸಿಕೊಳ್ಳುವುದು ಮುಖ್ಯ, ವಿಭಿನ್ನವಾಗಿ ಮಾಡಲು ಪ್ರಯತ್ನಿಸಬೇಕು, ಪ್ರಯತ್ನ ಮಾಡದ ಹೊರತು ಏನನ್ನೂ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಹೊಸ ರೀತಿಯಲ್ಲಿ ಆಡಲು ಬಯಸುವುದು ತಪ್ಪೇನಲ್ಲ, ನಾನು ಇದನ್ನು ಮಾಡಲು ಯತ್ನಿಸಿದ್ದೇನೆ, ಕೆಲವು ದಿನಗಳಲ್ಲಿ ವಿರಾಟ್ ಮತ್ತೆ ಫಾರ್ಮ್‌ಗೆ ಮರಳಬಹುದು, ನಾವು ಹೆಚ್ಚುವರಿ ಅಪಾಯ ತೆಗೆದುಕೊಳ್ಳಲು ಹೆದರಲ್ಲ, ತಂಡ ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ" ಎಂದು ತಿಳಿಸಿದರು.

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ

ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಶರ್ಮಾ, " ನಾವು ವೈಟ್-ಬಾಲ್ ಕ್ರಿಕೆಟ್ ಅನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ನನ್ನ ಪ್ರಕಾರ 50 ಓವರ್ ಕ್ರಿಕೆಟ್ ಟಿ20 ಕ್ರಿಕೆಟ್‌ನ ವಿಸ್ತರಣೆಯಾಗಿದೆ. ಟಿ20 ಗಿಂತ ಸ್ವಲ್ಪ ಕಡಿಮೆ ಅಪಾಯಗಳನ್ನು ನೀವು ತೆಗೆದುಕೊಳ್ಳಬಹುದು. ಟಿ20 ಪಂದ್ಯಗಳಲ್ಲಿ ನಾವು ರಿಸ್ಕ್ ತೆಗೆದುಕೊಳ್ಳಬೇಕು. ನಾವು ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎಂದಲ್ಲ. ನಾವು ಮುಕ್ತವಾಗಿ ಆಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನೀವು ಮುಕ್ತವಾಗಿ ಆಡಲು ಪ್ರಯತ್ನಿಸಿದಾಗ ಅದು ವೈಯಕ್ತಿಕ ಪ್ರದರ್ಶನ ಮತ್ತು ತಂಡದ ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಅದರಿಂದ ನೀವು ಬಹಳಷ್ಟು ಕಲಿಯುವಿರಿ." ಎಂದರು.

ಭಾರತ ತಂಡಕ್ಕೆ ರೋಚಕ ಸೋಲು

ಭಾರತ ತಂಡಕ್ಕೆ ರೋಚಕ ಸೋಲು

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 17 ರನ್‌ಗಳ ಸೋಲನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 20 ಓವರ್ ಗಳಲ್ಲಿ 215 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಡೇವಿಡ್ ಮಲನ್ 77, ಲಿವಿಂಗ್‌ ಸ್ಟೋನ್ 42 ಭರ್ಜರಿ ಬ್ಯಾಟಿಂಗ್ ಮಾಡಿದರು.

ಬೃಹತ್ ಮೊತ್ತ ಬೆನ್ನತ್ತಿದ ಭಾರತ ತಂಡ, ಆರಂಭದಲ್ಲೇ ಎಡವಿತು, ರಿಷಭ್ ಪಂತ್ 1 ರನ್, ರೋಹಿತ್ ಶರ್ಮಾ, 11 ರನ್, ಕೊಹ್ಲಿ 11 ರನ್‌ ಗಳಿಸಿ ಔಟಾದರು, ಆದರೆ ನಂತರ ಸ್ಫೋಟಕ ಆಟವಾಡಿದ ಸೂರ್ಯಕುಮಾರ್ ಯಾದವ್ 55 ಎಸೆತಗಳಲ್ಲಿ 117 ರನ್ ಗಳಿಸಿ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದ್ದರು, ಅವರು ಔಟಾದ ನಂತರ ಬಂದ ಬ್ಯಾಟರ್ ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು, ಅಂತಿಮವಾಗಿ ಭಾರತ 20 ಓವರ್ ಗಳಲ್ಲಿ 198 ರನ್ ಗಳಿಸಿ 17 ರನ್ ಅಂತರದಲ್ಲಿ ಸೋಲೊಪ್ಪಿಕೊಂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+