ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಕನ್ನಡಿಗನಿಗೆ ಬಿಸಿಸಿಐ ಅಧ್ಯಕ್ಷ ಪಟ್ಟ; ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ ಯಾರು?

|
Google Oneindia Kannada News

ಮುಂಬೈ, ಅಕ್ಟೋಬರ್ 18: ಭಾರತದ ಮಾಜಿ ಆಲ್‌ರೌಂಡರ್ ಆಟಗಾರ ರೋಜರ್ ಬಿನ್ನಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಇದೀಗ ಬಿಸಿಸಿಐನ 36ನೇ ಅಧ್ಯಕ್ಷರಾಗಿದ್ದಾರೆ. ಸೌರವ್ ಗಂಗೂಲಿ ಬದಲಾಗಿ ರೋಜರ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಗಂಗೂಲಿ 2019ರಿಂದ 2022ರವರೆಗೆ ಈ ಹುದ್ದೆಯಲ್ಲಿದ್ದರು. ಇಂದು ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಎಜಿಎಂನ ಸಭೆ ಕೇವಲ ಔಪಚಾರಿಕವಾಗಿ ಪರಿಗಣಿಸಲಾಗಿದೆ. ಹೊಸ ಅಧ್ಯಕ್ಷರ ಬಗ್ಗೆ ಈಗಾಗಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಹಳ ಹಿಂದೆಯೇ ನಂಬಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ರೋಜರ್ ಬಿನ್ನಿ ಹೆಸರನ್ನು ಮಂಗಳವಾರ ಅಧಿಕೃತವಾಗಿ ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ ಅವರನ್ನು ನೇಮಕ ಮಾಡಲಾಗಿದೆ.

ರೋಜರ್ ಭಾರತದ ಮೊದಲ ಆಂಗ್ಲೋ-ಇಂಡಿಯನ್ ಕ್ರಿಕೆಟಿಗ. ಕನ್ನಡಿಗ ರೋಜರ್ ಬಿನ್ನಿ1983ರ ವಿಶ್ವಕಪ್ ಗೆದ್ದ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದರು. ಆ ವಿಶ್ವಕಪ್‌ನಲ್ಲಿ ಅವರ ಕೊಡುಗೆ ಬಹಳ ಮುಖ್ಯವಾಗಿತ್ತು. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ರೋಜರ್ ಬಿನ್ನಿ ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಅವರು ಟೂರ್ನಿಯಲ್ಲಿ ಎಂಟು ಪಂದ್ಯಗಳಲ್ಲಿ ಒಟ್ಟು 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಟೂರ್ನಮೆಂಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 29ಕ್ಕೆ ನಾಲ್ಕು ವಿಕೆಟ್‌ಗಳು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದು ಅವರ ಏಕದಿನ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವೂ ಆಗಿದೆ. ಇನ್ನಷ್ಟು ರೋಜರ್ ಬಿನ್ನಿ ಅವರ ಬಗ್ಗೆ ಮಾಹಿತಿಯನ್ನು ಹಂಚುಕೊಳ್ಳಲಾಗಿದೆ.

ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಗಂಗೂಲಿಗೆ ಅವಕಾಶ ನೀಡಿ: ಮೋದಿಗೆ ಮಮತಾ ಬ್ಯಾನರ್ಜಿ ಮನವಿ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಗಂಗೂಲಿಗೆ ಅವಕಾಶ ನೀಡಿ: ಮೋದಿಗೆ ಮಮತಾ ಬ್ಯಾನರ್ಜಿ ಮನವಿ

 ಅಂಡರ್-19 ವಿಶ್ವಕಪ್ ಗೆದ್ದ ತಂಡದ ಕೋಚ್

ಅಂಡರ್-19 ವಿಶ್ವಕಪ್ ಗೆದ್ದ ತಂಡದ ಕೋಚ್

ಇದಲ್ಲದೇ ಬಿನ್ನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮತ್ತೊಂದು ವಿಶ್ವಕಪ್ ಗೆದ್ದುಕೊಂಡಿದೆ. ರೋಜರ್ ಬಿನ್ನಿ 2000ನೇ ಇಸವಿಯಲ್ಲಿ ಭಾರತ ಅಂಡರ್-19 ತಂಡದ ಕೋಚ್ ಆಗಿದ್ದರು. ನಂತರ ಅವರ ಮೇಲ್ವಿಚಾರಣೆಯಲ್ಲಿ ಟೀಂ ಇಂಡಿಯಾ ಅಂಡರ್-19 ವಿಶ್ವಕಪ್ ಗೆದ್ದುಕೊಂಡಿತು. ಮೊಹಮ್ಮದ್ ಕೈಫ್ ನಾಯಕತ್ವದಲ್ಲಿ ಮತ್ತು ರೋಜರ್ ಬಿನ್ನಿ ಅವರ ಕೋಚಿಂಗ್‌ನಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದುಕೊಂಡಿತು. ಆ ತಂಡದಲ್ಲಿ ಯುವರಾಜ್ ಸಿಂಗ್, ವೇಣುಗೋಪಾಲ್ ರಾವ್ ಅವರಂತಹ ಕ್ರಿಕೆಟಿಗರೂ ಆಡಿದ್ದರು.

 ರೋಜರ್ ಬಿನ್ನಿ 1979ರಲ್ಲಿ ಪದಾರ್ಪಣೆ

ರೋಜರ್ ಬಿನ್ನಿ 1979ರಲ್ಲಿ ಪದಾರ್ಪಣೆ

ರೋಜರ್ ಬಿನ್ನಿ ಾವರು 1979ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅವರು ಬೆಂಗಳೂರಿನಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಆಡಿದ್ದರು. ಇದರ ನಂತರ, 1980 ರಲ್ಲಿ, ಬಿನ್ನಿ ಅವರು ಆಸ್ಟ್ರೇಲಿಯಾ ವಿರುದ್ಧ ತಮ್ಮ ಏಕದಿನ ಚೊಚ್ಚಲ ಪಂದ್ಯವನ್ನು ಮಾಡಿದರು. ರೋಜರ್ ಬಿನ್ನಿ ಅವರ ವೃತ್ತಿಜೀವನವು 1979 ರಿಂದ 1987 ರವರೆಗೆ ನಡೆಯಿತು. ಈ ಸಮಯದಲ್ಲಿ, ಅವರು ಭಾರತಕ್ಕಾಗಿ 27 ಟೆಸ್ಟ್ ಮತ್ತು 72 ಏಕದಿಗಳ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಬಿನ್ನಿ ಟೆಸ್ಟ್‌ನಲ್ಲಿ 47 ಮತ್ತು ಏಕದಿನದಲ್ಲಿ 77 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೇ ಬಿನ್ನಿ ಟೆಸ್ಟ್ ನಲ್ಲಿ 830 ರನ್ ಹಾಗೂ ಏಕದಿನದಲ್ಲಿ 629 ರನ್ ಗಳಿಸಿದ್ದಾರೆ.

 ಬಿನ್ನಿ ಜೊತೆಗಿನ ಅದ್ಭುತ ಕಾಕತಾಳೀಯ

ಬಿನ್ನಿ ಜೊತೆಗಿನ ಅದ್ಭುತ ಕಾಕತಾಳೀಯ

ರೋಜರ್ ಬಿನ್ನಿಗೆ ಸಂಬಂಧಿಸಿದ ಅದ್ಭುತ ಕಾಕತಾಳೀಯವೂ ಇದೆ. 1979ರಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ರೋಜರ್, ಪಾಕಿಸ್ತಾನದ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. ಅದೇ ಸಮಯದಲ್ಲಿ ರೋಜರ್ ಬಿನ್ನಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದರು. ಅದೊಂದು ಏಕದಿನ ಪಂದ್ಯವಾಗಿತ್ತು. ಇನ್ನು ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಬಿನ್ನಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನೂ ಆಡಿದ್ದು ಕಾಕತಾಳೀಯ ಎನ್ನಬಹುದು.

 ರೋಜರ್ ಬಿನ್ನಿ ಮಗ ಸ್ಟುವರ್ಟ್ ಬಿನ್ನಿ

ರೋಜರ್ ಬಿನ್ನಿ ಮಗ ಸ್ಟುವರ್ಟ್ ಬಿನ್ನಿ

ರೋಜರ್ ಬಿನ್ನಿ ಅವರು ಬಂಗಾಳ ಕ್ರಿಕೆಟ್ ತಂಡದ ಕೋಚ್ ಆಗಿದ್ದಾರೆ. ಸೌರವ್ ಗಂಗೂಲಿ ಕೂಡ ಇದೇ ರಾಜ್ಯ. ಇದಲ್ಲದೇ ಭಾರತ ತಂಡದ ಆಯ್ಕೆಗಾರರಾಗಿಯೂ ಬಿನ್ನಿ ಕಾರ್ಯನಿರ್ವಹಿಸಿದ್ದಾರೆ. ಅವರಿಂದಲೇ ತಮ್ಮ ಮಗ ಸ್ಟುವರ್ಟ್ ಬಿನ್ನಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ ಎಂಬ ಆರೋಪವೂ ಅವರ ಮೇಲಿದೆ. ಸ್ಟುವರ್ಟ್ ಕೂಡ ತನ್ನ ತಂದೆಯಂತೆ ಆಲ್ ರೌಂಡರ್ ಆಟಗಾರ ಅವರು ಭಾರತಕ್ಕಾಗಿ 6 ಟೆಸ್ಟ್‌ಗಳು, 14 ಏಕದಿನ ಪಂದ್ಯಗಳು ಮತ್ತು ಮೂರು T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

English summary
91st Annual General Meeting in Mumbai: Kannadigas Roger Binny set to become president: Talks about ICC president too Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X