Rinku Singh: ಆರ್‌ಸಿಬಿ ತಂಡ ಸೇರಬೇಕು ಎಂದ ರಿಂಕು ಸಿಂಗ್‌

2025 ಐಪಿಎಲ್‌ಗೆ ಮುನ್ನ ಮೆಗಾಹರಾಜು ನಡೆಯಲಿದ್ದು ಪ್ರಮುಖ ಆಟಗಾರರು ತಂಡವನ್ನು ಬದಲಾಯಿಸುವ ಯೋಚನೆಯಲ್ಲಿದ್ದಾರೆ. ತಂಡದ ಬಲವನ್ನು ಹೆಚ್ಚಿಸಿಕೊಳ್ಳಲು ಫ್ರಾಂಚೈಸಿಗಳು ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿವೆ. ಹಲವು ಆಟಗಾರರು ಹಳೆ ತಂಡವನ್ನು ಬಿಟ್ಟು, ಹೊಸ ತಂಡಕ್ಕಾಗಿ ಆಡುವ ಉತ್ಸಾಹದಲ್ಲಿದ್ದಾರೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ರಿಷಬ್ ಪಂತ್, ಇಶಾನ್ ಕಿಶಾನ್‌ರಂತಹ ಪ್ರಮುಖ ಆಟಗಾರರು ತಂಡವನ್ನು ಬದಲಾಯಿಸುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹೆಚ್ಚು ಸದ್ದು ಮಾಡುತ್ತಿದೆ. ಇದೀಗ ಕೆಕೆಆರ್ ತಂಡದ ಸ್ಫೋಟಕ ಬ್ಯಾಟರ್ ಆರ್ ಸಿಬಿ ತಂಡಕ್ಕೆ ಆಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 2023 ರ ಆವೃತ್ತಿಯಲ್ಲಿ ರಿಂಕು ಸಿಂಗ್ ಹೀರೋ ಆಗಿ ಹೊರ ಹೊಮ್ಮಿದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕಾಗಿ ಆಡುವ ಅವರು, ಗುಜರಾತ್ ಟೈಟಾನ್ಸ್ ವಿರುದ್ಧ ಯಶ್ ದಯಾಳ್ ಅವರ ಒಂದೇ ಓವರ್ ನಲ್ಲಿ ಸತತವಾಗಿ 5 ಸಿಕ್ಸರ್ ಸಿಡಿಸುವ ಮೂಲಕ ರೋಚಕ ಗೆಲುವು ತಂದುಕೊಟ್ಟಿದ್ದರು. ಸೋತೇ ಬಿಟ್ಟಿತು ಎನ್ನುವ ಪಂದ್ಯವನ್ನು ರಿಂಕು ಸಿಂಗ್ ಏಕಾಂಗಿಯಾಗಿ ಕೆಕೆಆರ್ ತಂಡಕ್ಕೆ ಗೆದ್ದುಕೊಟ್ಟಿದ್ದರು.

Rinku Singh Aims to Join Virat Kohli s RCB for IPL 2025

ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಬಳಿಕ ರಿಂಕು ಸಿಂಗ್ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡಕ್ಕೆ ಆಡುವ ಅವಕಾಶ ಪಡೆದರು. ಅದಾದ ಬಳಿಕ ಅವರು ಎರಡು ಏಕದಿನ ಪಂದ್ಯಗಳು ಮತ್ತು 23 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ.

ಆರ್‌ಸಿಬಿ ತಂಡಕ್ಕೆ ಆಡಬೇಕು

2025ರ ಐಪಿಎಲ್‌ನಲ್ಲಿ ರಿಂಕು ಸಿಂಗ್‌ರನ್ನು ಉಳಿಸಿಕೊಳ್ಳಲು ಕೆಕೆಆರ್ ಪ್ರಯತ್ನಿಸಬಹುದು. ಆದರೆ ತಂಡದಿಂದ ಹೊರ ಬಂದರೆ ತಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಬೇಕು ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ಇರುವ ಕಾರಣಕ್ಕೆ ತಾನು ಆರ್‌ಸಿಬಿ ತಂಡದಲ್ಲಿ ಆಡಲು ಇಷ್ಟಪಡುವುದಾಗಿ ತಿಳಿಸಿದ್ದಾರೆ.

ಸ್ಟೋರ್ಟ್ಸ್ ತಕ್‌ ಜೊತೆ ಮಾತನಾಡಿರುವ ರಿಂಕು ಸಿಂಗ್, ವಿರಾಟ್ ಕೊಹ್ಲಿ ಜೊತೆ ತನ್ನ ನಿಕಟ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ರಿಂಕು ಸಿಂಗ್ ವಿರಾಟ್ ಕೊಹ್ಲಿ ಹಿಂದೆ ಹಿಂದೆ ತಿರುಗಿ ಬ್ಯಾಟ್ ಪಡೆದುಕೊಂಡಿದ್ದರು. ರಿಂಕು ಸಿಂಗ್‌ಗೆ ವಿರಾಟ್ ಕೊಹ್ಲಿ ಹೊಸ ಬ್ಯಾಟ್ ನೀಡಿದ್ದರು.

ರಿಂಕು ಸಿಂಗ್‌ ಆರ್ ಸಿಬಿ ತಂಡಕ್ಕೆ ಬರುವುದಾದರೆ ಫ್ರಾಂಚೈಸಿ ಕೂಡ ಅವರನ್ನು ಖರೀದಿ ಮಾಡಲು ಆಸಕ್ತಿ ತೋರಿಸುವ ಸಾಧ್ಯತೆ ಇದೆ. ಸ್ಫೋಟಕ ಬ್ಯಾಟರ್, ಅತ್ಯುತ್ತಮ ಫೀಲ್ಡರ್ ಆಗಿದ್ದು, ತಂಡದ ಬ್ಯಾಟಿಂಗ್‌ಗೆ ಬಲ ತಂದುಕೊಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+