ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಆಫ್ರಿಕಾ ತಂಡಕ್ಕೆ 6 ವರ್ಷಗಳ ನಂತರ ಮರಳಿದ ರಿಲೀ ರೋಸೋ

|
Google Oneindia Kannada News

ಕೇಪ್‌ಟೌನ್, ಜೂನ್ 30: ಸ್ಫೋಟಕ ಬ್ಯಾಟರ್‌ ರಿಲೀ ರೂಸೋ ಬರೋಬ್ಬರಿ 6 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ತಂಡದಲ್ಲಿ ಅವಕಾಶ ಪಡೆದಿದ್ದಾರೆ.ಇಂಗ್ಲೆಂಡ್ ವಿರುದ್ಧದ ಮುಂಬರುವ ಟಿ20 ತಂಡಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ 17 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಡೇವಿಡ್ ಮಿಲ್ಲರ್ ತಂಡದ ನಾಯಕನಾಗಿದ್ದಾರೆ.

ಭಾರತದ ವಿರುದ್ಧ ಟಿ20 ಸರಣಿ ವೇಳೆ ನಾಯಕ ಟೆಂಬ ಬವೂಮ ಗಾಯಗೊಂಡಿದ್ದರು. ಅವರಿಗೆ 8 ವಾರಗಳ ಕಾಲ ವಿಶ್ರಾಂತಿ ಅಗತ್ಯವಿರುವುದರಿಂದ ಮಿಲ್ಲರ್‌ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಹರಿಣ ಪಡೆ 3 ಏಕದಿನ ಮತ್ತು 3 ಟಿ20 ಪಂದ್ಯಗಳ ಟಿ20 ಮತ್ತು 3 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲು ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ. ಜುಲೈ 19ರಿಂದ ಈ ಪ್ರವಾಸ ಆರಂಭಗೊಳ್ಳಲಿದೆ. ಸೀಮಿತ ಓವರ್‌ಗಳಿಗೆ ಮಿಲ್ಲರ್ ನಾಯಕನಾದರೆ, ಟೆಸ್ಟ್ ತಂಡವನ್ನು ಕೇಶವ್ ಮಹಾರಾಜ್ ಮುನ್ನಡೆಸಲಿದ್ದಾರೆ.

ರೋಹಿತ್‌ಗೆ ಕೊರೊನಾ... ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯಕ್ಕೆ ಈತನೇ ನಾಯಕರೋಹಿತ್‌ಗೆ ಕೊರೊನಾ... ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯಕ್ಕೆ ಈತನೇ ನಾಯಕ

6 ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ರೂಸೋ; 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೇ ಮಾಡಿದ್ದ ರೂಸೋ 36 ಏಕದಿನ ಪಂದ್ಯ ಮತ್ತು 15 ಟಿ20 ಪಂದ್ಯಗಳನ್ನಾಡಿದ್ದರು. 2016ರಲ್ಲಿ ಭಾರತದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ನಂತರ ರೂಸೋರನ್ನು ಹರಿಣ ಪಡೆ ಕಡೆಗಣಿಸಿತ್ತು. ಇದೀಗ ವಿಶ್ವದಾದ್ಯಂತ ಹಲವು ಟಿ20 ಲೀಗ್‌ಗಳಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವುದರಿಂದ ಮತ್ತೆ ಟಿ20 ತಂಡಕ್ಕೆ ಪುನಾರಾಗಮನ ಮಾಡಿದ್ದಾರೆ.

Rilee Rossouw Return to South Africa Squad After 6 Years

ರೂಸೋ ಏಕದಿನ ಕ್ರಿಕೆಟ್‌ನಲ್ಲಿ 3 ಶತಕಗಳ ಸಹಿತ 1239 ರನ್‌ ಟಿ20 ಯಲ್ಲಿ 15 ಪಂದ್ಯಗಳಿಂದ 327 ರನ್‌ಗಳಿಸಿದ್ದಾರೆ. ವಿಶ್ವದಾದ್ಯಂತ ಟಿ20 ಲೀಗ್‌ಗಳಲ್ಲಿ ಆಡಿರುವ ಅವರು 248 ಪಂದ್ಯಗಳಿಂದ 6307 ರನ್‌ಗಳಿಸಿದ್ದಾರೆ. ಅವರ ಈ ಪ್ರದರ್ಶನವೇ ಇಂದು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ನೆರವಾಗಿದೆ.

ಐಪಿಎಲ್ ಶೀಘ್ರದಲ್ಲೆ ಎರಡುವರೆ ತಿಂಗಳಿಗೆ ವಿಸ್ತರಣೆ: ಜಯ್ ಶಾ ಭರವಸೆಐಪಿಎಲ್ ಶೀಘ್ರದಲ್ಲೆ ಎರಡುವರೆ ತಿಂಗಳಿಗೆ ವಿಸ್ತರಣೆ: ಜಯ್ ಶಾ ಭರವಸೆ

Rilee Rossouw Return to South Africa Squad After 6 Years

Recommended Video

CM ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಂತೆ ವಿಡಿಯೋ ಮೂಲಕ ಠಾಕ್ರೆಗೆ ಠಕ್ಕರ್ ಕೊಟ್ಟ ಕಂಗನಾ | Oneindia Kannada

ಭಾರತದ ವಿರುದ್ಧ ಸರಣಿ ಡ್ರಾ ಸಾಧಿಸಿದ್ದ ದಕ್ಷಿಣ ಆಫ್ರಿಕಾ; ಇತ್ತೀಚೆಗೆ ಭಾರತ ಪ್ರವಾಸ ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ತಂಡ 5 ಪಂದ್ಯಗಳ ಟಿ20 ಸರಣಿಯನ್ನು 2-2ರಲ್ಲಿ ಡ್ರಾ ಸಾಧಿಸಿತ್ತು. ಮೊದಲ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಭಾರತಕ್ಕೆ ತವರಿನಲ್ಲೆ ಆಘಾತ ನೀಡಿತ್ತು. ಆದರೆ ಭಾರತ 3 ಮತ್ತು4ನೇ ಪಂದ್ಯಗಳನ್ನು ಗೆದ್ದು 2-2ರಲ್ಲಿ ಸರಣಿ ಸಮಬಲಕ್ಕೆ ತಂದಿದ್ದರು. ಸರಣಿಯನ್ನು ನಿರ್ಣಾಯಕವಾಗಿದ್ದ ಪಂದ್ಯ ಮಳೆ ಕಾರಣ ರದ್ದಾಗಿ ಟ್ರೋಫಿಯನ್ನು ಎರಡೂ ತಂಡಗಳು ಹಂಚಿಕೊಂಡಿದ್ದರು.

English summary
South Africa cricket board announce 17 member squad for England T20I series on thursday. Batter Relee Rossouw returns to the squad after 6 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X