RCB: ಈ ಬಾರಿ ಆರ್​ಸಿಬಿ ಫೈನಲ್‌ಗೆ ಹೋಗುವುದು ಖಚಿತ; ಯಾಕೆ ಗೊತ್ತಾ?

ಐಪಿಎಲ್ 2024ರಲ್ಲಿ ಪವಾಡವೇ ನಡೆದುಹೋಗಿದೆ. ಮೇ 3ರಂದು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಆರ್​ಸಿಬಿ 18ನೇ ತಾರೀಕು ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತದೆ ಎಂದು ಯಾರೂ ಕೂಡ ಊಹೆ ಮಾಡಿರಲಿಲ್ಲ. ಆದರೆ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ 27 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಆರ್​ಸಿಬಿ ಹೊಸ ಇತಿಹಾಸ ಬರೆಯಿತು.

ಮೊದಲ 8 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿದ್ದ ಆರ್​ಸಿಬಿ ಬಳಿಕ ಸತತ ಆರು ಪಂದ್ಯಗಳನ್ನು ಗೆದ್ದು 14 ಅಂಕಗಳೊಂದಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ.

RCB s Six-Match Winning Streak Fuels Hopes for IPL 2024 Final

ಆರ್​ಸಿಬಿ ಈ ರೀತಿ ಮಾಡಿರುವುದು ಇದೇ ಮೊದಲನೇಲ್ಲ. ಆರ್​ಸಿಬಿ ಇದುವರೆಗೆ ಮೂರು ಬಾರಿ ಫೈನಲ್ ಪ್ರವೇಶಿಸಿದೆ ಅಚ್ಚರಿಯ ಸಂಗತಿ ಎಂದರೆ ಆಗಲೂ ಕೂಡ ಸತತ ಐದು ಪಂದ್ಯಗಳನ್ನು ಗೆದ್ದಿತ್ತು.

ಫೈನಲ್‌ಗೆ ಹೋಗುವುದು ಪಕ್ಕಾ!

2009ರಲ್ಲಿ ಆರ್​ಸಿಬಿ ಟೂರ್ನಿಯಿಂದಲೇ ಹೊರಗುಳಿಯುವ ಹಂತದಲ್ಲಿತ್ತು ಆದರೆ ಅಲ್ಲಿಂದ ಸತತವಾಗಿ ಐದು ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿತ್ತು. 2011ರ ಆವೃತ್ತಿಯಲ್ಲಿ ಕೂಡ ಮೊದಲ ನಾಲ್ಕು ಪಂದ್ಯಗಳನ್ನು ಒಂದು ಗೆದ್ದಿತ್ತು, ಆದರೆ ಬಳಿಕ ಸತತವಾಗಿ 7 ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದೊಂದಿಗೆ ಪ್ಲೇಆಫ್ ಪ್ರವೇಶ ಪಡೆದಿದ್ದಲ್ಲದೆ ಫೈನಲ್‌ ಕೂಡ ಪ್ರವೇಶಿಸಿತ್ತು.

2016ರ ಆವೃತ್ತಿಯಲ್ಲಿ ಕೂಡ ಮೊದಲ 6 ಪಂದ್ಯಗಳಲ್ಲಿ ಕೇವಲ 2 ಪಂದ್ಯ ಗೆದ್ದಿದ್ದ ಆರ್​ಸಿಬಿ ಕೊನೆಯ 4 ಲೀಗ್ ಹಂತದ ಪಂದ್ಯಗಳನ್ನು ಸತತವಾಗಿ ಗೆದ್ದಿತ್ತು, ಬಳಿಕ ಪ್ಲೇ ಆಫ್‌ನಲ್ಲಿ ಕೂಡ ಸತತ ಎರಡು ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಅರ್ಹತೆ ಪಡೆದುಕೊಂಡಿತ್ತು.

ಮೂರು ಬಾರಿ ಫೈನಲ್ ಪ್ರವೇಶಿಸಿದರೂ ಒಮ್ಮೆಯೂ ಕಪ್ ಗೆಲ್ಲದೇ ಇರುವುದು ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ಆದರೂ ಅಭಿಮಾನಿಗಳು ಆರ್​ಸಿಬಿ ಪರವಾಗಿ ನಿಂತಿದ್ದಾರೆ. ಈ ಬಾರಿ ಬೂದಿಯಿಂದ ಎದ್ದು ಬಂದಿರುವ ಆರ್​ಸಿಬಿ ಕಪ್ ಗೆಲ್ಲುವ ಭರವಸೆ ಕೊಟ್ಟಿದೆ.

ಸತತ ಆರು ಪಂದ್ಯಗಳನ್ನು ಗೆದ್ದಿರುವ ಆರ್​ಸಿಬಿ ತಂಡಕ್ಕೆ ಐತಿಹಾಸಿಕ ಸಾಧನೆ ಮಾಡಲು ಇನ್ನು ಮೂರು ಪಂದ್ಯ ಗೆಲ್ಲಬೇಕಿದೆ. ಗೆಲ್ಲಲಿ ಎನ್ನುವುದು ಕೋಟ್ಯಂತರ ಅಭಿಮಾನಿಗಳ ಹಾರೈಕೆಯೂ ಆಗಿದೆ.

ಮೇ 22ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದು, ಆ ಪಂದ್ಯವನ್ನು ಗೆದ್ದರೆ, ಚೆನ್ನೈನಲ್ಲಿ ಕ್ವಾಲಿಫೈಯರ್ 2 ಪಂದ್ಯದಲ್ಲಿ ಆಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+