ಕನ್ನಡದ ಹುಡುಗಿ ಶ್ರೇಯಾಂಕಾ ಪಾಟೀಲ್ ಮತ್ತೆ ವೈರಲ್!

ಕನ್ನಡದ ಜನರಿಗೆ 'ಆರ್‌ಸಿಬಿ' ಅಂದ್ರೆ ಒಂದು ಹೆಮ್ಮೆ, ಇಷ್ಟುದಿನ ಹುಡುಗರ ತಂಡಕ್ಕೆ ನಮ್ಮ ಕನ್ನಡಿಗರು ಬೆಂಬಲ ನೀಡುತ್ತಿದ್ದರು. ಆದರೆ ಇದೀಗ 'ಆರ್‌ಸಿಬಿ' ಹುಡುಗಿಯರ ತಂಡವೂ ಅಖಾಡಕ್ಕೆ ಇಳಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿಯರ ಅಬ್ಬರ ಬಲು ಜೋರಾಗಿದ್ದು, ಇದೇ ನಮ್ಮ ಆರ್‌ಸಿಬಿ ತಂಡದಲ್ಲಿ ಇರುವ ಕನ್ನಡತಿ ಶ್ರೇಯಾಂಕಾ ಪಾಟೀಲ್ ಮತ್ತೊಮ್ಮೆ ವೈರಲ್ ಆಗುತ್ತಿದ್ದಾರೆ.

ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಎದುರಿನ ಡಬ್ಲ್ಯೂಪಿಎಲ್ (WPL) 2024ರ ಪಂದ್ಯದಲ್ಲಿ ಆರ್‌ಸಿಬಿ ತಂಡ ರೋಚಕ ಗೆಲುವು ದಾಖಲಿಸಿದೆ. ಕೇವಲ 135 ರನ್‌ನ ಗಳಿಸಿದ್ದರೂ, ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದು ನಮ್ಮ ಆರ್‌ಸಿಬಿ ತಂಡದ ಹುಡುಗಿಯರು ಮಾತ್ರ. ಯಾಕಂದ್ರೆ 136 ರನ್‌ಗಳ ಗುರಿ ಬೆನ್ನು ಹತ್ತಿದ್ದ ಮುಂಬೈ ಇಂಡಿಯನ್ಸ್ ತಂಡ ಕೇವಲ 130 ರನ್ ಗಳಿಸಲು ಮಾತ್ರ ಶಕ್ತವಾಯಿತು. ಇನ್ನೂ ಆರ್‌ಸಿಬಿ ಮಹಿಳಾ ತಂಡದ ಗೆಲುವಿನಲ್ಲಿ ಕನ್ನಡದ ಹುಡುಗಿ ಶ್ರೇಯಾಂಕಾ ಪಾಟೀಲ್ ಮಹತ್ವದ ಪಾತ್ರ ವಹಿಸಿದ್ದರು. ಶ್ರೇಯಾಂಕಾ ಬೌಲಿಂಗ್ ವಿಡಿಯೋ ನೋಡಲು ಮುಂದೆ ಓದಿ.

RCB s Shreyanka Patil Bowling Style Is Attracting The Cricket Fans

ಗೆಲ್ಲುವ ಹಂತದಲ್ಲಿ ಮುಂಬೈಗೆ ಸೋಲು!

ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದ ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಆಟಗಾರ್ತಿಯರಿಗೆ ಪೆವಿಲಿಯನ್ ದಾರಿ ತೋರಿಸಿದ್ದೇ ಶ್ರೇಯಾಂಕಾ ಪಾಟೀಲ್. ಅಮೂಲ್ಯವಾದ ವಿಕೆಟ್ ಕಿತ್ತು ಅಬ್ಬರಿಸಿದ ಕನ್ನಡತಿ ಶ್ರೇಯಾಂಕಾ, ಮತ್ತೊಮ್ಮೆ ತಾವು ಬೆಸ್ಟ್ ಬೌಲರ್ ಅಂತಾ ಪ್ರೂವ್ ಮಾಡಿದರು. ಗೆಲ್ಲುವ ಕುದುರೆ ಎನಿಸಿಕೊಂಡಿದ್ದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ತಂಡ ಕೊನೆಯ ಹಂತದಲ್ಲಿ ಎಡವಿ ಸೋಲು ಒಪ್ಪಿಕೊಂಡಿತು. ನಮ್ಮ ಆರ್‌ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟ ಕನ್ನಡತಿ ಶ್ರೇಯಾಂಕಾ ಮತ್ತೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾರೆ. ಶ್ರೇಯಾಂಕಾ ಪಾಟೀಲ್‌ರ ಬೌಲಿಂಗ್ ವಿಡಿಯೋ ನೋಡಲು ಮುಂದೆ ಓದಿ.

ಮುಂಬೈ ತಂಡಕ್ಕೆ ಭೀಕರ ಆಘಾತ

17 ಓವರ್ ಮುಕ್ತಾಯಕ್ಕೆ 125 ರನ್ ಗಳಿಸಿ ಕೇವಲ 3 ವಿಕೆಟ್ ಕಳೆದುಕೊಂಡಿದ್ದ ಮುಂಬೈ ಟೀಂ ಪಕ್ಕಾ ಗೆದ್ದು ಬೀಗುತ್ತೆ ಅಂತಾ ಎಲ್ಲರೂ ಅಂದುಕೊಂಡಿದ್ದರು. ಆದರೆ 18ನೇ ಓವರ್ ಬಳಿಕ ಇಡೀ ಪಂದ್ಯದ ದಿಕ್ಕೇ ಬದಲಾಗಿ ಹೋಗಿತ್ತು. ಕೊನೆಯ 18 ಎಸೆತದಲ್ಲಿ ಕೇವಲ 20 ರನ್ ಗುರಿ ಇಟ್ಟುಕೊಂಡಿದ್ದ ಮುಂಬೈ ತಂಡಕ್ಕೆ ಹೀನಾಯ ಸೋಲು ಎದುರಾಗಿತ್ತು. ಅದರಲ್ಲೂ ಅದೇ ಓವರ್ ಬೌಲ್ ಮಾಡಿದ್ದ ಕನ್ನಡತಿ ಶ್ರೇಯಾಂಕಾ ಮೋಡಿ ಮಾಡಿ ಪ್ರಮುಖ ವಿಕೆಟ್ ಬೀಳಿಸಿ ಆರ್‌ಸಿಬಿ ತಂಡಕ್ಕೆ ಗೆಲುವಿನ ನಗೆ ತಂದುಕೊಟ್ಟರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಈ ವಿಡಿಯೋನ ಫುಲ್ ಶೇರ್ ಮಾಡಿ ಲೈಕ್ ಮಾಡ್ತಿದ್ದಾರೆ.

ಒಟ್ನಲ್ಲಿ ಐಪಿಎಲ್ ರೀತಿಯೇ ಇದೀಗ ಡಬ್ಲ್ಯೂಪಿಎಲ್ ಕೂಡ, ದೊಡ್ಡ ಮಟ್ಟಿಗೆ ಹೆಸರನ್ನು ಮಾಡುತ್ತಿದೆ. ಹಾಗೇ ಮಹಿಳಾ ತಂಡದ ಆಟಗಾರ್ತಿಯರ ಶಕ್ತಿಗೆ ಕ್ರಿಕೆಟ್ ಅಭಿಮಾನಿಗಳು ಈ ಸಮಯದಲ್ಲಿ ಫಿದಾ ಆಗಿದ್ದಾರೆ. ಈ ಪೈಕಿ ನಮ್ಮ ಆರ್‌ಸಿಬಿ ಅಭಿಮಾನಿಗಳು, ಮಹಿಳೆಯರ ತಂಡಕ್ಕೂ ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡುತ್ತಿದ್ದಾರೆ.

ಕಪ್ ಗೆಲ್ಲುತ್ತಾ ಆರ್‌ಸಿಬಿ ತಂಡ?

ಕನ್ನಡಿಗರ ಹೆಮ್ಮೆಯ ತಂಡ ಆರ್‌ಸಿಬಿ ಒಂದು ಬಾರಿ ಕೂಡ ಕಪ್ ಗೆದ್ದಿಲ್ಲ. ಆದ್ರೂ ಫ್ಯಾನ್ಸ್ ಮಾತ್ರ ಆರ್‌ಸಿಬಿ ತಂಡವನ್ನ ಬಿಟ್ಟುಕೊಡದೆ ಹಲವು ವರ್ಷಗಳ ಕಾಲ ಆರ್‌ಸಿಬಿ ಟೀಂನ ಪರ ನಿಂತಿದ್ದಾರೆ. ಈಗ ಮಹಿಳಾ ಪ್ರಿಮಿಯರ್ ಲೀಗ್‌ನಲ್ಲಿ ಕೂಡ ಆರ್‌ಸಿಬಿ (RCB) ತಂಡವನ್ನು, ಕನ್ನಡದ ಕ್ರಿಕೆಟ್ ಫ್ಯಾನ್ಸ್ ಬೆಂಬಲಿಸುತ್ತಿದ್ದಾರೆ. ಅದೇ ರೀತಿ ಇದೀಗ ಶ್ರೇಯಾಂಕ ಪಾಟೀಲ್ ಅವರ ಆಟಕ್ಕು ಕೂಡ ಕನ್ನಡಿಗರು ಫಿದಾ ಆಗಿದ್ದು, ಎಲ್ಲೆಲ್ಲೂ ಶ್ರೇಯಾಂಕ ಪಾಟೀಲ್ ಹೆಸರು ಪ್ರತಿಧ್ವನಿಸಿ ಸಪೋರ್ಟ್ ಬಲು ಜೋರಾಗಿದೆ. ಶ್ರೇಯಾಂಕ ಪಾಟೀಲ್ ಅವರನ್ನು ಫ್ಯಾನ್ಸ್ ಸಖತ್ ಇಷ್ಟಪಡುತ್ತಿದ್ದು, ಈಗ ಶ್ರೇಯಾಂಕಾ ಅವರ ಬೌಲಿಂಗ್ ಸ್ಟೈಲ್ ವೈರಲ್ ಆಗುತ್ತಿದೆ.

ಕನ್ನಡತಿ ಶ್ರೇಯಾಂಕಾ ಹವಾ ಜೋರು!

ಒಟ್ಟಾರೆ ಹೇಳುವುದಾದರೆ ಕನ್ನಡದ ಜನರಿಗೆ 'ಆರ್‌ಸಿಬಿ' ಅಂದ್ರೆ ಒಂದು ಹೆಮ್ಮೆ, ಇಷ್ಟು ದಿನ ಹುಡುಗರ ತಂಡಕ್ಕೆ ನಮ್ಮ ಕನ್ನಡಿಗರು ಬೆಂಬಲವನ್ನ ನೀಡುತ್ತಿದ್ದರು. ಆದ್ರೆ ಇದೀಗ 'ಆರ್‌ಸಿಬಿ' ಹುಡುಗಿಯರ ತಂಡವೂ ಅಖಾಡಕ್ಕೆ ಇಳಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿಯರ ಅಬ್ಬರ ಬಲು ಜೋರಾಗಿದೆ. ಇದೇ ನಮ್ಮ ಆರ್‌ಸಿಬಿ ತಂಡದಲ್ಲಿರುವ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಕೂಡ ತಮ್ಮ ಬೌಲಿಂಗ್ ಮೂಲಕ ಮೋಡಿ ಮಾಡಿದ್ದಾರೆ. ಶ್ರೇಯಾಂಕಾ ಪಾಟೀಲ್ ಸಖತ್ ಚಿಕ್ಕ ವಯಸ್ಸಿಗೆ ಇದೀಗ ದೊಡ್ಡ ಹೆಸರು ಸಂಪಾದಿಸಿ, ಭಾರತದ ಭವಿಷ್ಯದ ಕ್ರಿಕೆಟ್ ಆಟಗಾರ್ತಿಯಾಗಿ ಹೊರ ಹೊಮ್ಮುತ್ತಿರುವುದು ವಿಶೇಷವೇ ಸರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+