Faf du Plessis: ಅಮೆರಿಕದಲ್ಲಿ ಆರ್​​ಸಿಬಿ ನಾಯಕ ಫಾಫ್‌ ಡುಪ್ಲೆಸಿಸ್ ಅಬ್ಬರ!

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ನಾಯಕ ಫಾಫ್ ಡುಪ್ಲೆಸಿಸ್ ಅಮೆರಿಕದಲ್ಲಿ ಅಬ್ಬರಿಸುತ್ತಿದ್ದು, ಐಪಿಎಲ್ 2025ರಲ್ಲಿ ಆರ್ ಸಿಬಿ ತಂಡವನ್ನು ವಿಶ್ವಾಸದಲ್ಲಿದ್ದಾರೆ. ಯುಎಸ್‌ಎನಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ 2024ರ ಪಂದ್ಯಾವಳಿಯಲ್ಲಿ ಫಾಫ್ ಅಗ್ರ ಸ್ಕೋರರ್ ಆಗಿದ್ದಾರೆ.

ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ ಫಾಫ್ ಡುಪ್ಲೆಸಿಸ್ ನಾಯಕರಾಗಿದ್ದು ತಂಡವನ್ನು ಪ್ರಶಸ್ತಿ ಸುತ್ತಿನತ್ತ ಮುನ್ನಡೆಸುತ್ತಿದ್ದಾರೆ. ಪಂದ್ಯಾವಳಿಯಲ್ಲಿ ಫಾಫ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ತಂಡಕ್ಕೆ ಆಸರೆಯಾಗಿದ್ದಾರೆ.

RCB s Faf du Plessis Excels as Texas Super Kings Captain in MLC 2024

ಟೆಕ್ಸಾಸ್ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ಇಂದು ನಡೆದ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಫಾಫ್‌ ಡುಪ್ಲೆಸಿಸ್ ಭರ್ಜರಿ ಬ್ಯಾಟಿಂಗ್

ಮೊದಲು ಬ್ಯಾಟಿಂಗ್ ಮಾಡಿದ ಎಂಐ ನ್ಯೂಯಾರ್ಕ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತು. ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಟೆಕ್ಸಾಸ್ ಸೂಪರ್ ಕಿಂಗ್ಸ್ 18.3 ಓವರ್ ಗಳಲ್ಲಿ 167 ರನ್ ಗಳಿಸುವ ಮೂಲಕ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಫಾಫ್ ಡುಪ್ಲೆಸಿಸ್ 47 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್ ಸಹಿತ 72 ರನ್ ಗಳಿಸಿದರು. ಡೆವೋನ್ ಕಾನ್ವೆ 43 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿದರು. ಆರೋನ್ ಹಾರ್ಡ್ಲೆ 22 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದರು.

ಭರ್ಜರಿ ಫಾರ್ಮ್‌ನಲ್ಲಿರುವ ಬ್ಯಾಟರ್

ಫಾಫ್ ಡುಪ್ಲೆಸಿಸ್ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಅಗ್ರ ಸ್ಕೋರರ್ ಆಗಿದ್ದಾರೆ. 7 ಪಂದ್ಯಗಳಲ್ಲಿ 53.57 ಸರಾಸರಿಯಲ್ಲಿ 168.16 ಸ್ಟ್ರೈಕ್‌ರೇಟ್‌ನಲ್ಲಿ 375 ರನ್ ಗಳಿಸಿದ್ದಾರೆ. 36 ಬೌಂಡರಿ ಮತ್ತು 22 ಸಿಕ್ಸರ್ ಸಿಡಿಸಿದ್ದಾರೆ. 40 ವರ್ಷದ ಫಾಫ್‌ ಇನ್ನೂ ಫಿಟ್ ಆಗಿದ್ದು, ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದ್ದಾರೆ.

ಆರ್ ಸಿಬಿ ತಂಡದಲ್ಲೇ ಇರ್ತಾರ?

2025ರ ಐಪಿಎಲ್‌ನಲ್ಲಿ ಕೂಡ ಫಾಫ್ ಡುಪ್ಲೆಸಿಸ್ ಆರ್‍ ಸಿಬಿ ತಂಡದಲ್ಲೇ ಉಳಿಯುವ ವಿಶ್ವಾಸದಲ್ಲಿದ್ದಾರೆ. ಫಾಫ್ ಮತ್ತು ಕೊಹ್ಲಿ ನಡುವೆ ವಿಶೇಷ ಬಾಂಧವ್ಯವಿದೆ. ಮುಖ್ಯವಾಗಿ ಫಾಫ್ ಸಖತ್ ಫಿಟ್ ಆಗಿದ್ದು, ಫೀಲ್ಡಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಅವರ ಅನುಭವ ಕೂಡ ತಂಡಕ್ಕೆ ಅಗತ್ಯವಾಗಿದೆ. ತಂಡದ ನಾಯಕತ್ವ ಬದಲಾವಣೆಗೆ ಚಿಂತಿಸಿದರೂ, ಫಾಫ್‌ರನ್ನು ತಂಡದಲ್ಲೇ ಉಳಿಸಿಕೊಳ್ಳುವ ಬಗ್ಗೆ ಆರ್ ಸಿಬಿ ಫ್ರಾಂಚೈಸಿ ಚಿಂತಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+