RCB WPL 2027: ಮತ್ತೋರ್ವ ಕನ್ನಡತಿ ಸೇರಿ ಆರ್‌ಸಿಬಿಗೆ ನಾಲ್ವರ ಸೇರ್ಪಡೆ.. ಕರ್ನಾಟಕದ ಆಟಗಾರ್ತಿ ಸಿಕ್ಕಿದ್ದಕ್ಕೆ ಕೋಚ್ ಫುಲ್ ಖುಷ್
RCB WPL 2027: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್ 2027) ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಓರ್ವ ಕನ್ನಡತಿ ಒಟ್ಟು ನಾಲ್ವರು ಆಟಗಾರ್ತಿಯರನ್ನು ಕೊಂಡುಕೊಂಡಿದೆ. ಈ ಕುರಿತು ಕೋಚ್ ಮಲೋಲನ್ ರಂಗರಾಜನ್ ಮಹತ್ವದ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಒಟ್ಟು 4 ಹೊಸ ಆಟಗಾರ್ತಿಯರನ್ನು ಖರೀದಿಸಿದೆ. ಹರಾಜಿನ ನಂತರ ಮಾತನಾಡಿದ ಆರ್‌ಸಿಬಿ ತಂಡದ ಕೋಚ್ ಮಲೋಲನ್ ರಂಗರಾಜನ್, ಕರ್ನಾಟಕದ ಯುವ ಬ್ಯಾಟರ್ ವೃಂದಾ ದಿನೇಶ್ ಅವರನ್ನು ಖರೀದಿಸಲು ಸಾಧ್ಯವಾಗಿದ್ದು ತಮಗೆ ಅತ್ಯಂತ ಸಂತಸ ತಂದಿದೆ ಎಂದು ಹೇಳಿದ್ದಾರೆ.

ಆರ್‌ಸಿಬಿ ಹೊಸದಾಗಿ ಖರೀದಿಸಿದ ಆಟಗಾರ್ತಿಯರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಒಟ್ಟು ₹1.15 ಕೋಟಿ ಪರ್ಸ್ ಮೊತ್ತದೊಂದಿಗೆ ಹರಾಜಿನ ಅಖಾಡಕ್ಕೆ ಇಳಿಯಿತು. ಬಳಿಕ ಅಗತ್ಯವಿದ್ದ 4 ಸ್ಥಾನಗಳನ್ನು ಯಶಸ್ವಿಯಾಗಿ ಭರ್ತಿ ಮಾಡಿಕೊಂಡಿತು. ಯಾರನ್ನು ಎಷ್ಟು ರೂಪಾಯಿಗೆ ಕಂಡುಕೊಂಡಿತು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಯಾರನ್ನು ಎಷ್ಟು ರೂಪಾಯಿಗೆ ಕೊಂಡುಕೊಂಡಿದೆ?
* ಜೆಸ್ ಜೊನಾಸೆನ್ (ಆಸ್ಟ್ರೇಲಿಯಾ): ಅನುಭವಿ ಎಡಗೈ ಸ್ಪಿನ್ ಆಲ್‌ರೌಂಡರ್ (₹40 ಲಕ್ಷ).
* ಕ್ಲೋಯ್ ಟ್ರಯಾನ್ (ದಕ್ಷಿಣ ಆಫ್ರಿಕಾ): ಅನುಭವಿ ಆಲ್ರೌಂಡರ್ (₹30 ಲಕ್ಷ).
* ತೇಜಲ್ ಹಸಬ್ನಿಸ್ (ಭಾರತ): ಬ್ಯಾಟರ್ (₹30 ಲಕ್ಷ).
* ವೃಂದಾ ದಿನೇಶ್ (ಭಾರತ): ಕರ್ನಾಟಕದ ಓಪನಿಂಗ್ ಬ್ಯಾಟರ್ (₹10 ಲಕ್ಷ).
ವೃಂದಾ ದಿನೇಶ್ ಸೇರ್ಪಡೆಗೆ ಕೋಚ್ ಸಂತಸ
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ವೃಂದಾ ದಿನೇಶ್ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದರ ಬಗ್ಗೆ ಮಲೋಲನ್ ರಂಗರಾಜನ್ ಸಂತಸ ವ್ಯಕ್ತಪಡಿಸಿದ್ದಾರೆ. 'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ವೃಂದಾ ದಿನೇಶ್ ನಮಗೆ ಸಿಗುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಬೆಂಗಳೂರು ಮೂಲದ ಆಟಗಾರ್ತಿಯನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಸಾಧ್ಯವಾಗಿದ್ದು ಬಹಳ ಖುಷಿ ತಂದಿದೆ. ಅವರು 'ಇಂಡಿಯಾ ಎ' ತಂಡದ ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹರಾಜಿನಲ್ಲಿ ಅವರನ್ನು ಪಡೆಯುವ ಅವಕಾಶ ಸಿಕ್ಕ ತಕ್ಷಣವೇ ನಾವು ಅದನ್ನು ಬಳಸಿಕೊಂಡೆವು,' ಎಂದು ತಿಳಿಸಿದ್ದಾರೆ.
ಎಲ್ಲಿಸ್ ಪೆರ್ರಿ ಕಮ್‌ಬ್ಯಾಕ್, ಗ್ರೇಸ್ ಹ್ಯಾರಿಸ್ ಬಿಡುಗಡೆ
'ದಕ್ಷಿಣ ಆಫ್ರಿಕಾದ ಕ್ಲೋಯ್ ಟ್ರಯಾನ್ ಅವರ ಅನುಭವವು ತಂಡದ ಮಿಡಲ್ ಆರ್ಡರ್ ಬ್ಯಾಟಿಂಗ್ ಮತ್ತು ಎಡಗೈ ಸ್ಪಿನ್ ಬೌಲಿಂಗ್‌ಗೆ ಹೆಚ್ಚಿನ ಬಲ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಮತ್ತೊಂದೆಡೆ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಅವರು ಕಮ್‌ಬ್ಯಾಕ್ ಆಗಿರುವುದು ಆರ್‌ಸಿಬಿಗೆ ಆನೆಬಲ ತಂದಿದೆ,' ಎಂದು ಹೇಳಿದ್ದಾರೆ.
ಕಳೆದ ಆವೃತ್ತಿಯಲ್ಲಿ ಎಲ್ಲಿಸ್ ಪೆರ್ರಿ ಅನುಪಸ್ಥಿತಿಯಲ್ಲಿ ಇತರ ಆಟಗಾರ್ತಿಯರು ಅದ್ಭುತವಾಗಿ ಆಡಿದ್ದರ. ಆದರೆ ಈಗ ಅವರು ಹಿಂತಿರುಗಿರುವುದರಿಂದ 3ನೇ ಕ್ರಮಾಂಕಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಅವರ ಆಟ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪೆರ್ರಿ ಅಭಿಮಾನಿಗಳ ಇಟ್ಟ ನಿರೀಕ್ಷೆಯನ್ನು ನಿಜ ಮಾಡಲಿದ್ದಾರೆಯಾ ಎಂದು ಕಾದುನೋಡಬೇಕಿದೆ.
ಪರ್ಸ್ ಮೊತ್ತ ಹೆಚ್ಚಾಗಲು, ಹರಾಜಿನಲ್ಲಿ ಸ್ಪರ್ಧಾತ್ಮಕವಾಗಿ ಪಾಲ್ಗೊಳ್ಳಲು ಹಣ ಹೊಂದಿಸುವ ಉದ್ದೇಶದಿಂದಷ್ಟೇ ಅನುಭವಿ ಆಟಗಾರ್ತಿ ಗ್ರೇಸ್ ಹ್ಯಾರಿಸ್ ಅವರನ್ನು ರಿಲೀಸ್ ಮಾಡಬೇಕಾಯಿತು ಎಂದು ರಂಗರಾಜನ್ ಸ್ಪಷ್ಟಪಡಿಸಿದ್ದಾರೆ. ಇನ್ನೂ ಇದೀಗ ಹ್ಯಾರಿಸ್ ಅವರನ್ನು ಯುಪಿ ವಾರಿಯರ್ಸ್ ₹30 ಲಕ್ಷಕ್ಕೆ ಖರೀದಿ ಮಾಡಿದೆ.
ಡಬ್ಲ್ಯೂಪಿಎಲ್ 2027ಕ್ಕೆ ಆರ್‌ಸಿಬಿ ಸಂಪೂರ್ಣ ತಂಡ
ಸ್ಮೃತಿ ಮಂಧನಾ (ನಾಯಕಿ), ಜಾರ್ಜಿಯಾ ವೊಲ್, ನಾಡಿನ್ ಡಿ ಕ್ಲರ್ಕ್, ಎಲ್ಲಿಸ್ ಪೆರ್ರಿ, ಶ್ರೇಯಾಂಕಾ ಪಾಟೀಲ್, ಸಾಯಲಿ ಸತ್ಘರೆ, ರಿಚಾ ಘೋಷ್, ಪ್ರತ್ಯೂಷಾ ಕುಮಾರ್, ಲಾರೆನ್ ಬೆಲ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಪ್ರೇಮಾ ರಾವತ್, ಜೆಸ್ ಜೊನಾಸೆನ್, ಕ್ಲೋಯ್ ಟ್ರಯಾನ್, ತೇಜಲ್ ಹಸಬ್ನಿಸ್, ಮತ್ತು ವೃಂದಾ ದಿನೇಶ್.


Click it and Unblock the Notifications
