RCB Vs SRH Toss: ಎಸ್‌ಆರ್‌ಎಚ್ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ
RCB Vs SRH Toss: ಐಪಿಎಲ್ 2025ರ 65ನೇ ಪಂದ್ಯದಲ್ಲಿ ಆರ್‌ಸಿಬಿಯು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿದೆ. ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಅಂದರಂತೆಯೇ ಎಚ್‌ಆರ್‌ಎಚ್ ತಂಡ ಮೊದಲು ಬ್ಯಾಟ್ ಬೀಸಲಿದೆ.
ರಾಯಲ್ಸ್ ಚಾಲೆಂಜರ್ಸ್ ತಂಡ ಎಂದರೆ ಅದೊಂದು ಬ್ರಾಂಡ್ ಆಗಿಬಿಟ್ಟಿದೆ. ಕಪ್ ಗೆಲ್ಲದಿದ್ದರೂ ಈ ಬ್ರಾಂಡ್ ಸೃಷ್ಟಿಗೆ ಕಾರಣ ಅಪ್ಪಟ ಅಭಿಮಾನಿಗಳೇ ಕಾರಣ ಅಂದ್ರೆ ತಪ್ಪಾಗಲಾರದು. ಹೊರ ರಾಜ್ಯಗಳ ಕ್ರೀಡಾಂಗಣದಲ್ಲಿ ಪಂದ್ಯ ನಡೆದರೂ ಸಹ ಅಲ್ಲಿಗೆ ಹೋಗಿ ಮ್ಯಾಚ್ ನೋಡಿ ಆರ್‌ಸಿಬಿಗೆ ಸಪೋರ್ಟ್ ಮಾಡುವ ಮೂಲಕ ಐಪಿಎಲ್‌ಗೆ ಕಳೆ ಬರುವಂತೆ ಮಾಡುತ್ತಾರೆ. ಇಂದಿನ ಎಸ್‌ಆರ್‌ಎಚ್ ವಿರುದ್ಧ ಪಂದ್ಯ ಲಕ್ನೋದಲ್ಲಿದೆ. ಆದರೂ ಸಹ ಅಲ್ಲಿಗೂ ಪಂದ್ಯ ವೀಕ್ಷಣೆ ಮಾಡಲು ಹೋಗಿದ್ದಾರೆ.

ಆರ್‌ಸಿಬಿ ಇದುವರೆಗೂ 12 ಪಂದ್ಯಗಳನ್ನಾಡಿದೆ. ಇದರಲ್ಲಿ ಮೂರು ಸೋತು, 8ರಲ್ಲಿ ಗೆದ್ದು, ಒಂದು ರದ್ದಿನೊಂದಿದೆ ಪಾಯಿಂಟ್ಸ್ ಟೇಬಲ್‌ನಲ್ಲಿ 14 ಅಂಕಗಳನ್ನು ಪಡೆಯುವ ಮೂಲಕ 2ನೇ ಸ್ಥಾನದಲ್ಲಿದೆ. ಈಗಾಗಲೇ ಪ್ಲೇ ಆಫ್ ಪ್ರವೇಶ ಮಾಡಿದ್ದು, ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯುವ ಕಾತರದಲ್ಲಿದೆ. ಆದ್ದರಿಂದ ಇಂದಿನ ಎಸ್‌ಆರ್‌ಎಚ್ ವಿರುದ್ಧದ ಪಂದ್ಯವನ್ನು ಗೆದ್ದೇ ಗೆಲ್ಲಬೇಕೆಂಬ ಪಣ ತೊಟ್ಟಿದೆ.
ಇಂದು ನಾಯಕ ಪಾಟೀದಾರ್ ಬದಲಿಗೆ ಜಿತೇಶ್ ಶರ್ಮಾ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಮತ್ತೊಂದು ಸಂತಸದ ವಿಚಾರ ಅಂದ್ರೆ ಇತ್ತೀಚೆಗೆ ತಂಡ ಸೇರಿಕೊಂಡಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಇಂದು ಕಣದಲ್ಲಿದ್ದಾರೆ. ಇದರಿಂದ ಆರ್‌ಸಿಬಿಗೆ ಆನೆ ಬಲ ಬಂದಂತಾಗಿದೆ.
ಗಾಯದ ಕಾರಣದಿಂದ ಕಳೆದೆರಡು ಪಂದ್ಯಗಳಿಂದಲೂ ಮಾರಕ ಬೌಲರ್ ಹ್ಯಾಜಲ್ವುಡ್ ಆರ್‌ಸಿಬಿಯಿಂದ ಹೊರಗುಳಿದಿದ್ದರು. ಏಪ್ರಿಲ್ 27ರಂದು ಕೊನೆಯ ಪಂದ್ಯವನ್ನಾಡಿದ್ದರು. ಅಲ್ಲದೆ, ಇಂದಿನ ಪಂದ್ಯಕ್ಕೂ ಸಹ ಅಲಭ್ಯರಾಗಲಿದ್ದು, ಮೇ 27ರಂದು ಕೊನೆಯ ಲೀಗ್ ಪಂದ್ಯವನ್ನು ಆಡಲಿದ್ದಾರೆ ಎನ್ನುವ ಮಾಹಿತಿ ಇದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಪಿಲಿಪ್ ಸಾಲ್ಟ್, ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ (ನಾಯಕ ಮತ್ತು ವಿ.ಕೀ), ರೊಮಾರಿಯೋ ಶೆಫರ್ಡ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಯಶ್ ದಯಾಲ್, ಸುಯಶ್ ಶರ್ಮಾ
ಸನ್‌ರೈಸರ್ಸ್ ಹೈದರಾಬಾದ್ ತಂಡ: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಎಶನ್ ಮಾಲಿಂಗ.












Click it and Unblock the Notifications