IPl 2025 RCB Match: ಬೆಂಗಳೂರಿನಲ್ಲಿ ಆರ್‌ಸಿಬಿ-ಆರ್‌ಆರ್ ಪಂದ್ಯ ರದ್ದಾಗುವ ಸಾಧ್ಯತೆ
IPl 2025 RCB Match: ಐಪಿಎಲ್ 2025ನೇ ಆವೃತ್ತಿಯಲ್ಲಿ ಇದುವರೆಗೂ ಆರ್‌ಸಿಬಿಯು ತವರಿನಲ್ಲೇ ಸತತವಾಗಿ ಮೂರು ಪಂದ್ಯಗಳನ್ನು ಸೋತಿದೆ. ತವರಿನಿಂದ ಆಚೆ ಆಡಿರುವ ಎಲ್ಲಾ ಮ್ಯಾಚ್‌ಗಳಲ್ಲಿ ಭರ್ಜರಿಯಾಗಿ ಗೆದ್ದು ಬೀಗಿದೆ. ಇದೀಗ ಮತ್ತೆ ಏಪ್ರಿಲ್ 24ರಂದು ಮತ್ತೆ ಬೆಂಗಳೂರಿಲ್ಲಿ ಇದ್ದು, ಅಂದು ಪಂದ್ಯ ರದ್ದಾಗುವ ಸಾಧ್ಯತೆಯಿದೆ. ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈಗಾಗಲೇ ಏಪ್ರಿಲ್ 18ರಂದು ಬೆಂಗಳೂರಿನ ಭಾರೀ ಮಳೆ ಸುರಿದ ಹಿನ್ನೆಲೆ ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿಗೆ ತುಂಬಾ ಅಡೆತಡೆ ಆಯಿತು. ಆದರೆ, ನಂತರ ಪಿಚ್ ತೆವಾಂಶವೆಲ್ಲಾ ಹೋದ ಕಾರಣ ಪಂಜಾಬ್ ಬ್ಯಾಟಿಂಗ್ ತುಂಬಾ ಅನುಕೂಲ ಆಗಿದ್ದು, ಆರ್‌ಸಿಬಿ ವಿರುದ್ಧ ಸುಲಭವಾಗಿ ಗೆಲುವು ಸಾಧಿಸಲು ಅನುಕೂಲ ಆಯಿತು.

ಸಾಮಾನ್ಯವಾಗಿ ಈ ಪಿಚ್‌ನಲ್ಲಿ ಚೇಸ್ ಮಾಡಿರುವ ತಂಡ ಗೆಲುವು ಸಾಧಿಸಿರುವ ಉದಾಹರಣೆಗಳಿವೆ. ಅದರಲ್ಲೂ ಸಾಧಾರಣ ಮಳೆ ಬಂದು ನಿಂತರೆ, ಹೆಚ್ಚು ಅನುಕೂಲ ಆದಂತಾಗುತ್ತದೆ. ಇದೀಗ ಹಾಮಾನ ಇಲಾಖೆ ಪ್ರಕಾರ, ಬೆಂಗಳೂರಿನಲ್ಲಿ ಅಂದಯ ಮಳೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಓವರ್‌ಗಳನ್ನು ಕಡಿತ ಮಾಡಬಹುದು ಅಥವಾ ಮಳೆ ಜೋರಾಯಿತೆಂದರೆ ಪಂದ್ಯ ರದ್ದಾಗುವ ಸಾಧ್ಯತೆಯು ಇದೆ ಎನ್ನಲಾಗುತ್ತಿದೆ.
ಏಪ್ರಿಲ್ 24ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಸೆಣಸಲಿದೆ. ಒಂದು ವೇಳೆ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಸಾಧಾರಣ ಮಳೆಯಾಗಿ ನಿಂತರೆ ಮೊದಲು ಚೇಸ್ ಮಾಡುವ ತಂಡಕ್ಕೆ ಹೆಚ್ಚು ಅನುಕೂಲ. ಆದ್ದರಿಂದ ಅಂದಾದರೂ ಆರ್‌ಸಿಬಿ ಹೋಂ ಗ್ರೌಂಡ್‌ನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರೆ ಉತ್ತಮ. ಒಂದು ವೇಳೆ ಭಾರೀ ಮಳೆ ಮುಂದುವರೆದರೆ, ಪಂದ್ಯ ರದ್ದಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮೂರು ಸೋಲುಂಡ ಆರ್‌ಸಿಬಿ: ತವರು ಅಂಗಳವಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡವು ಸತತ ಮೂರು ಸೋಲನುಭವಿಸಿದೆ. ಮೊದಲು ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನುಭವಿಸಿತ್ತು. ಅದರಲ್ಲೂ ಪಂಜಾಬ್ ವಿರುದ್ಧ ಪಂದ್ಯದ ವೇಳೆ ಮಳೆ ಕಾರಣ ಆರ್‌ಸಿಬಿ ತಂಡದ ಆಟಗಾರರು ತೇವಾಂಶದ ಪಿಚ್‌ನಲ್ಲಿ ರನ್ ಬಾರಿಸಲು ಹೆಣಗಾಡಿದರು. ಕೊನೆಗೂ ಆರ್‌ಸಿಬಿ ಸೋಲು ಕಂಡಿತು. ಇನ್ನು ಈ ಆವೃತ್ತಿಯಲ್ಲಿ ಚಿನ್ನಸ್ವಾಮಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿಯೂ ಆರ್‌ಸಿಬಿ ಟಾಸ್ ಸಹ ಸೋತಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಮಳೆ ಹಿನ್ನೆಲೆ ಪಂದ್ಯವನ್ನು 14 ಓವರ್‌ಗಳಿಗೆ ಕಡಿತಗೊಳಿಸಲಾಗೊತ್ತು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 9 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕುವ ಮೂಲಕ ಪಂಜಾಬ್ ಕಿಂಗ್ಸ್‌ಗೆ 96 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು.
ಈ ಸಾಧಾರಣ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಕೇವಲ 12.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿ ಸುಲಭವಾಗಿ ಗೆಲುವು ಸಾಧಿಸಿತು. ಈ ಮೂಲಕ ಆರ್‌ಸಿಬಿಯು ಬೇಡವಾದದ ದಾಖಲೆಯೊಂದನ್ನು ನಿರ್ಮಾಣ ಮಾಡಿತು.
ಯಾಕೆಂದ್ರೆ, ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡಕ್ಕೆ ತೇವಾಂಶದಿಂದ ಕೂಡಿದ ಈ ಪಿಚ್ ತುಂಬಾ ಕಷ್ಟಕರವಾಗಿತ್ತು. ಇದು ಒಂದು ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣವಾಯಿತು.
ಹಾಗೆಯೇ ಮುಂದಿನ ಪಂದ್ಯದಲ್ಲಿ ಮಳೆಯಡ್ಡಿಯಾದರೆ, ಪಂದ್ಯ ರದ್ದು ಮಾಡಲಾಗುತ್ತದೆ ಅಥವಾ ನಿಂತರೆ ಓವರ್‌ಗಳನ್ನು ಕಡಿತಗೊಳಿಸಿ ಆಡಿಸಲಾಗುತ್ತದೆ. ಆಗ ಚೇಸ್ ಮಾಡುವ ತಂಡಕ್ಕೆ ಹೆಚ್ಚು ಅನುಕೂಲ ಆಗಲಿದೆ. ಮೊನ್ನೆ ನಡೆದಿದ್ದು ಇದೇ ಆಗಿದೆ. ಪಿಚ್ ತೇವಾಂಶದಿಂದ ಕೂಡಿದ್ದರಿಂದ ಆರ್‌ಸಿಬಿ ಬ್ಯಾಟರ್‌ಗಳಿಗೆ ತುಂಬಾ ಕಾಡಿತು. ಬರಬರುತ್ತಾ ಪಿಚ್ ಡ್ರೈ ಆಗಿದ್ದು, ಇದು ಪಂಜಾಬ್ ಬ್ಯಾಟರ್‌ಗಳಿಗೆ ತುಂಬಾ ಅನುಕೂಲವಾಯಿತು. ಆದರೂ ಕೂಡ ಆರ್‌ಸಿಬಿ ಪರ ಬೌಲರ್‌ಗಳು ಕೂಡ ತುಂಬಾ ಶ್ರಮ ಹಾಕಿ ಬೌಲಿಂಗ್ ಮಾಡಿದರೂ ವ್ಯರ್ಥವಾಯಿತು.
ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪರಿಣಾಮ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಲೇಬೇಕಾಯಿತು. ಮಳೆಯಿಂದ ಪಿಚ್ ಮೇಲೆ ಕೆಲ ಗಂಟೆಗಳ ಕಾಲ ತೇವಾಂಶ ಹೆಚ್ಚಾಗಿದ್ದು, ಇದು ಪಂಜಾಬ್ ಬೌಲರ್‌ಗಳಿಗೆ ನೆರವಾದಂತಾಯಿತು.
ತೇವಾಂಶದಿಂದ ಕೂಡಿದ್ದ ಪಿಚ್‌ನಲ್ಲಿ ಆರ್‌ಸಿಬಿ ಬ್ಯಾಟರ್‌ಗಳು ರನ್ ಕಲೆಹಾಕಲು ಪರದಾದರು. ಅಲ್ಲದೆ, ವಿಕೆಟ್‌ಗಳನ್ನು ಸರದಿಯಲ್ಲಿ ಕಳೆದುಕೊಂಡಿತು. ಈ ಹಿನ್ನೆಲೆ ಆರ್‌ಸಿಬಿ ಹೆಚ್ಚು ರನ್ ಗಳಿಸುವಲ್ಲಿ ಸಾಧ್ಯ ಆಗಲಿಲ್ಲ. ಬೌನ್ಸರ್‌ಗಳನ್ನು ಹಾಕುವ ಪಂಜಾಬ್ ಬೌಲರ್‌ಗಳ ತಂತ್ರ ಕೆಸಲ ಮಾಡಿತು.
ಅದರಲ್ಲೂ ಈ ಪಂದ್ಯದಲ್ಲಿ ಆರಂಭಿಕರಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ್ ತೋರಬೇಕಿದ್ದ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಅವರು ಕೂಡ ಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ತೆರಳಿದರು. ಇದು ನಂತರ ಬಂದಂತಹ ಬ್ಯಾಟರ್‌ಗಳ ಮೇಲೆ ಹೆಚ್ಚು ಒತ್ತಡಕ್ಕೆ ಸಿಲುಕಿಸಿದ್ದು, ಸರದಿಯಲ್ಲಿ ವಿಕೆಟ್ ಒಪ್ಪಿಸಿದರು. ಇದು ತಂಡವನ್ನು ತೀವ್ರ ಸಂಕಷ್ಟಕ್ಕೆ ತಳ್ಳಿಬಿಟ್ಟಿತು.
ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳಿತ್ತಾ ಸಾಗಿದ್ದ ಆರ್‌ಬಿಯು ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವ ಆತಂಕ ಎದುರಾಗಿತ್ತು. ಆದರೆ, ಕೊನೆಗೆ ಅಬ್ಬರ ಬ್ಯಾಟಿಂಗ್ ಮಾಡುವ ಮೂಲಕ ಟೀಮ್ ಡೇವಿಡ್ 50 ರನ್‌ಗಳು ಅಂದರೆ ಅರ್ಧ ಶತನ ಸಿಡಿಸುವ ಮೂಲಕ ತಂಡದ ಮೊತ್ತವನ್ನು 95ಕ್ಕೆ ಮುಟ್ಟಿಸಿದರು. ಟೀಂ ಡೆವಿಡ್‌ಗೆ ಸಾಥ್ ಕೊಡುವವರು ಯಾರಾದರೂ ಇದ್ದಿದ್ದರೆ ತಂಡದ ಮೊತ್ತ 120 ದಾಟುವ ಸಾಧ್ಯತೆ ಇತ್ತು. ಆದರೆ ಅವರೊಬ್ಬರೇ ಏಕಾಂಗಿ ಹೋರಾಟ ಮಾಡಿ ಇಷ್ಟು ರನ್‌ಗಳನ್ನು ಕಲೆಹಾಕಿದರು. ಇದು ವ್ಯರ್ಥವಾಗಿದ್ದು, ಆರ್‌ಸಿಬಿ ಕೊನೆಗೂ ಪಂಜಾಬ್ ವಿರುದ್ಧ ಸೋಲನುಭವಿಸಿತ್ತು. ಇನ್ನೂ ಮುಂದಿನ ಪಂದ್ಯವೂ ಬೆಂಗಳೂರಿನಲ್ಲಿದ್ದು, ಆಗಲಾದರೂ ಆರ್‌ಸಿಬಿ ಗೆಲ್ಲಲಿದೆಯಾ ಎಂದು ಕಾದುನೋಡಬೇಕಿದೆ.












Click it and Unblock the Notifications